ಅಹ್ಮದಿಯಾ ಮುಸ್ಲಿಂ ಜಮಾಅತ್ ಶಿವಮೊಗ್ಗದ ಯುವ ಘಟಕವಾದ ಮಜ್ಲಿಸ್ ಖುದ್ದಾಮುಲ್ ಅಹ್ಮದಿಯಾದ ವತಿಯಿಂದ 74ನೇ ಗಣರಾಜ್ಯೋತ್ಸವದ ಅಂಗವಾಗಿ ಅಹ್ಮದಿಯಾ ಮುಸ್ಲಿಮ್ ಜಮಾಅತ್‌ನ ಅಧ್ಯಕ್ಷರಾದ ಜನಾಬ್ ಮೀರ್ ಮೂಸಾ ಹುಸೇನ್ ಸಾಹಿಬ್ ರವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ ನಗರದ ಎನ್.ಟಿ ರಸ್ತೆಯ ತುಂಗಾ ನದಿ ಸೇತುವೆಯ ಮೇಲಿನ ಕಸಕಡ್ಡಿಗಳನ್ನು ಸ್ವಚ್ಛಮಾಡಲಾಯಿತು. ಅಹ್ಮದಿಯಾ ಜಮಾಅತ್ತಿನ ಸುಮಾರು ಐವತ್ತಕ್ಕಿಂತ ಹೆಚ್ಚು ಸದಸ್ಯರು ಹಾಗೂ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹಾಗೂ ಸ್ವಚ್ಛತಾ ಕಾರ್ಮಿಕರು ಪಾಲ್ಗೊಂಡಿದ್ದರು.
ಅಂಧಮಕ್ಕಳಿಗೆ ಉಡುಗೊರೆ:
ಅಹ್ಮದಿಯಾ ಮುಸ್ಲಿಂ ಜಮಾಅತ್ತಿನ ೧೫ ವರ್ಷದ ಒಳಗಿನ ಹೆಣ್ಣು ಮಕ್ಕಳ ವಿಭಾಗವಾದ ನಾಸಿರಾತುಲ್ ಅಹ್ಮದಿಯಾದ ವತಿಯಿಂದ ‘ಶಾರದಾದೇವಿ ಅಂಧ ಮಕ್ಕಳ ಶಾಲೆ’ಗೆ ಭೇಟಿ ನೀಡಿ ಅಲ್ಲಿಯ 75 ಮಕ್ಕಳಿಗೆ ಉಡುಗೊರೆಯನ್ನು ಹಾಗೂ ಸಿಹಿ ತಿಂಡಿಗಳನ್ನು ಹಂಚಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಇಸ್ಲಾಮಿನ ಸಂಸ್ಥಾಪಕರಾದ ಹಝ್‌ರತ್ ಮೊಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಬೋಧಿಸಿರುವಂತೆ ಎಲ್ಲರೂ ದೇವನ ಸುಂದರವಾದ ಸೃಷ್ಟಿಗಳು, ದೇವನು ಕೆಲವರಿಗೆ ವಿವಿಧ ಗುಣಗಳನ್ನು ಹಾಗೂ ಅರ್ಹತೆಗಳನ್ನು ನೀಡಿರುವುದು ಬಲಹೀನರ ಸಹಾಯಕ್ಕಾಗಿಯೂ ಆಗಿದೆ ಇದರ ಮೌಲ್ಯಗಳನ್ನು ಮಕ್ಕಳು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾಗುವಂತೆ ತೋರಿಸಿಕೊಟ್ಟರುವ “ಪ್ರೀತಿ ಎಲ್ಲರಲ್ಲೂ ದ್ವೇಷವಿಲ್ಲ ಯಾರಲ್ಲೂ” ಎಂಬ ಅಹ್ಮದಿಯ ಜಮಾಅತಿನ ಆದರ್ಶ ತತ್ವಕ್ಕೆ ಇದು ಒಂದು ಪುಟ್ಟ ಉದಾಹರಣೆಯಾಗಿದೆ ಎಂದು ಜನಾಬ್ ಮೀರ್ ಆಝಮ್ ಝಿಕ್ರಿಯಾ ಸೆಕ್ರೆಟರಿ ಅಹ್ಮದಿಯಾ ಮುಸ್ಲಿಮ್ ಜಮಾಅತ್ ಶಿವಮೊಗ್ಗ ಅವರು ತಿಳಿಸಿದ್ದಾರೆ.