ಶಿವಮೊಗ್ಗ,ಫೆ.೨೨: ಆಪರೇಷನ್ ಕಮಲದ ಬಳಿಕದ ಮೊದಲ ಚುನಾವಣೆಯಲ್ಲಿ ಅವರ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿ ಎಂದು ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಸುರ್ಜೆವಾಲ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪಂಚರತ್ನಯಾತ್ರೆಯಲ್ಲಿ ಅವರು ಬುಧವಾರ ಮಾತನಾಡಿದರು. ಅವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ, ಕಾಂಗ್ರೆಸ್ ನಾಯಕರು ನಿದ್ರೆಯಲ್ಲೂ ಮೋದಿಯೇ ಕಾಣುತ್ತಾರೆ. ಕಾಂಗ್ರೆಸ್ ಬಿಜೆಪಿಯ ಬಿ ಟೀಮೋ ಜೆಡಿಎಸ್ ಬಿ ಟೀಮೋ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
೭ನೇ ವೇತನ ಆಯೋಗದ ಜಾರಿ ಕುರಿತಾಗಿ ನೌಕರರಿಗೆ ಅಸಮಾಧಾನ ಇದೆ. ಸರ್ಕಾರಿ ನೌಕರರಿಂದ ಪ್ರತಿಭಟನೆ ಸಾಧ್ಯತೆಯೂ ಇದೆ. ಸರ್ಕಾರಿ ನೌಕರ ರಿಂದ ದೊಡ್ದ ದೊಡ್ದ ಸನ್ಮಾನ ಮಾಡಿಸಿಕೊಂಡವರು ಈಗ ಎಲ್ಲಿ ಹೋದರು. ಸರ್ಕಾರಿ ನೌಕರರ ಪರವಾಗಿ ಯಾರಿದ್ದಾರೆ, ಯಾರು ನಿಮ್ಮ ಪರ ಕೆಲಸ ಮಾಡಿದ್ದರು ಎಂಬುದನ್ನು ನೌಕರರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಭದ್ರಾವತಿಯಲ್ಲಿ ಪಂಚರತ್ನ ಯಾತ್ರೆಗೆ ಬೆಂಬಲ ವ್ಯಕ್ತವಾಗಿದೆ. ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ನಮ್ಮನ್ನು ಬೆಂಬಲಿಸುತ್ತಿzರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಬಗ್ಗೆ ಜನ ತೀರ್ಮಾನ ಮಾಡಿದ್ದಾರೆ ಎಂದರು.
ಅದ್ದೂರಿ ಸ್ವಾಗತ:
ಪಂಚ ರತ್ನ ಯಾತ್ರೆಯನ್ನು ಕಾರ್ಯಕರ್ತರು ಅದ್ದೂರಿ ಯಾಗಿ ಸ್ವಾಗತಿಸಿದರು. ಅರೆಬಿಳಚಿ ಕ್ಯಾಂಪ್‌ಗೆ ಪಂಚರತ್ನ ಯಾತ್ರೆ ಆಗಮಿ ಸುತ್ತಿದ್ದಂತೆ ಮಹಾದ್ವಾರ ಮೂಲಕ ಸಾವಿರಾರು ಕಾರ್ಯಕರ್ತರು, ಮಹಿಳೆ ಯರು ಪೂರ್ಣ ಕುಂಭದ ಮೂಲಕ ಸ್ವಾಗತಿಸಿದರೆ, ಪುರುಷರು ಕ್ರೇನ್ ಮೂಲಕ ಬೃಹತ್ ಅಡಕೆ ಹಾರ, ಭವ್ಯ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು.
ಶಾರದಾ ಪೂರ್‍ಯಾನಾಯ್ಕ್ ಪರ ಪ್ರಚಾರ:
ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್‍ಯಾನಾಯ್ಕ್ ಪರ ಪ್ರಚಾರ ಮಾಡಿದ ಹೆಚ್.ಡಿ. ಕುಮಾರಸ್ವಾಮಿ, ಕ್ಷೇತ್ರದ ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ, ಸಹೋದರಿ ಶಾರದಾ ಪೂರ್‍ಯಾನಾಯ್ಕ್ ಅವರನ್ನು ಗೆಲ್ಲಿಸಿ, ಮಂತ್ರಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಸಿಎಂ ಆಗಿ ನಿಮ್ಮ ಬವಣೆ ನೀಗಿಸುತ್ತೇನೆ:
ಜನರ ಬವಣೆ ನೀಗಿಸುವುದೇ ಪಂಚರತ್ನ ಯೋಜನೆ ಉದ್ದೇಶ. ಮುಂದಿನ ಮೂರು ತಿಂಗಳು ಮಾತ್ರ ಸುಮ್ಮನಿರಿ, ನಾನೇ ಮುಖ್ಯಮಂತ್ರಿ ಆಗುತ್ತೇನೆ. ಮುಖ್ಯಮಂತ್ರಿ ಆಗಿ ನಿಮ್ಮ ಬವಣೆ ನೀಗಿಸುತ್ತೇನೆ. ಮಹಿಳೆಯರ ಸಂಕಷ್ಟ ದೂರ ಮಾಡಲು ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡುತ್ತೇನೆ. ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಕುಮಾರಸ್ವಾಮಿ ಹೇಳಿದರು.
ReplyForward |