Malenadu Mitra
ರಾಜ್ಯ ಶಿವಮೊಗ್ಗ

ಸೊರಬದಲ್ಲಿ ಸೋದರರ ಸವಾಲಿಲ್ಲ, ಪಕ್ಷಗಳ ನಡುವೆ ಹೋರಾಟ: ಮಧು ಬಂಗಾರಪ್ಪ

ಶಿವಮೊಗ್ಗ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹೋರಾಟ ನಡೆಯುವುದೇ ಹೊರತೂ, ಅದನ್ನು ಸೋದರರ ಸವಾಲ್ ಎಂದು ಬಿಂಬಿಸಬಾರದು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಹೇಳಿದರು.

ಅವರು ಶಿವಮೊಗ್ಗದಲ್ಲಿ ಕಾರ್ಯಕರ್ತರು ಬೆಂಬಲಿಗರೊಂದಿಗೆ ತಮ್ಮ ಜನ್ಮದಿನದ ನಿಮಿತ್ತ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಕುಮಾರ್ ಬಂಗಾರಪ್ಪ ನನ್ನ ಅಣ್ಣ ಅವರೊಂದು ಪಕ್ಷ ಪ್ರತಿನಿಧಿಸಿದ್ದರೆ, ನಾನೊಂದು ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ. ಸ್ಪರ್ಧೆ ಎರಡು ಪಕ್ಷಗಳ ನಡುವೆ ನಡೆಯಲಿದೆ.  ಸೊರಬದಲ್ಲಿ ಆಡಳಿತ ಯಂತ್ರ ಕುಸಿತಗೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ವಾತಾವರಣವಿದೆ ಎಂದರು.

ಈ ಬಾರಿ ಸೊರಬದ ಜನರು ನನ್ನನ್ನು ಅತಿಹೆಚ್ಚು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನನಗೆ ಮತ ಹಾಕುವುದೇ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದಂತೆ.  ನಾನು ಅವರಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ. ತಂದೆಯ ನೆರಳಿನಲ್ಲಿ ಬಂದ ನನಗೆ ಅವರೇ ಗುರುಗಳು. ಕಾಂಗ್ರೆಸ್ ಪಕ್ಷ ನನಗೆ ಅತಿದೊಡ್ಡ ಅಧಿಕಾರಗಳನ್ನು ನೀಡಿದ್ದು,  ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇನೆ ಎಂದರು.


ಸೊರಬ ತಾಲೂಕು ಕಚೇರಿಯ ನಾಟಾವನ್ನು  ಯಾವುದೇ ಹರಾಜು ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿದ್ದರ ಹಿಂದೆ  ಹಾಲಿ ಶಾಸಕರ ಕುಮ್ಮಕ್ಕು ಇದ್ದು, ಈ ಬಗ್ಗೆ ತನಿಖೆ ಆಗಬೇಕಿದೆ.
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು,ಹೆಮ್ಮೆಯ ವಿಚಾರ. ಆದರೆ ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಮಾತನಾಡಲಿಲ್ಲ,ಇದು ಮಲೆನಾಡಿನ ಜನರಿಗೆ ಮಾಡಿದ ದ್ರೋಹ  ಎಂದು ಹೇಳಿದರು.
ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ:

ಬಿಜೆಪಿಯವರು ಇತರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡಲು ಆಗದಷ್ಟು ಬಹುಮತವನ್ನು ಕಾಂಗ್ರೆಸ್ ಈ ಬಾರಿ ಪಡೆಯುತ್ತದೆ ಎಂದ ಅವರು, ಬಿಜೆಪಿ ಯಾವಾಗಲೂ ಹಿಂಬಾಗಿಲಿನಿಂದಲೇ ಅಧಿಕಾರ ಪಡೆದಿದೆ ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ನಾವು ಈಗ ಎಷ್ಟು ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಏಕೆಂದರೆ ಅದು ಅವರಿಗೆ ಗೊತ್ತಾದರೆ ಈಗಿನಿಂದಲೇ ಶಾಸಕರ ಖರೀದಿಯಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ಶಾಸಕರನ್ನು ಕೊಂಡುಕೊಳ್ಳದಿರುವಷ್ಟು ಬಹುಮತವನ್ನು ಕಾಂಗ್ರೆಸ್ ಪಡೆಯುತ್ತದೆ ಎಂದರು.
ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಧು ಬಂಗಾರಪ್ಪ ಅವರಿಗೆ ಹೂಗುಚ್ಚ ಹಾಗೂ ಶಾಲು ಹೊದಿಸುವುದರ ಮೂಲಕ ಹುಟುಹಬ್ಬಕ್ಕೆ ಶುಭ ಕೋರಿದರು. ಕಾಂಗ್ರೆಸ್ ಮುಖಂಡರುಗಳಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್,ಕಲಗೋಡು ರತ್ನಾಕರ್, ಎನ್.ರಮೇಶ್, ಜಿ.ಡಿ.ಮಂಜುನಾಥ್, ರಮೇಶ್ ಶಂಕರಘಟ್ಟ, ಬಲದೇವಕೃಷ್ಣ, ದೀಪಕ್ ಸಿಂಗ್, ಖಲೀಂ, ವೈ.ಹೆಚ್. ನಾಗರಾಜ್, ಶ್ರೀನಿವಾಸ ಕರಿಯಣ್ಣ, ಪಿ.ಓ. ಶಿವಕುಮಾರ್, ವೇದಾ ವಿಜಕುಮಾರ್  ಸೇರಿದಂತೆ ಹಲವರಿದ್ದರು.

ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ರೈತರಿಗೆ ಪರಿಹಾರ ನೀಡಿಲ್ಲ. ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದ ಅವರು, ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನ ವಿಚಾರ ಪ್ರಸ್ತಾಪ ಮಾಡಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಶಾಪ ಈ ಬಿಜೆಪಿಯವರಿಗೆ ತಟ್ಟದೆ ಬಿಡುವುದಿಲ್ಲ. ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ ನೀರು ಸಿಗದೇ ಅಸುನೀಗಿದ್ದಾರೆ. ಆದರೆ ಅವರ ಕುಟುಂಬಕ್ಕೆ ಸಾಂತ್ವನವನ್ನು ಹೇಳಿಲ್ಲ. ಸಾವಿನ ಮನೆಯ ರಾಜಕಾರಣ ಮಾಡುವವರು ಬಿಜೆಪಿಯವರು. ತಕ್ಷಣವೇ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವು ನೀಡಲಿ


ಮಧು ಬಂಗಾರಪ್ಪ,

Ad Widget

Related posts

ನಾರಾಯಣಗುರು ಅಭಿವೃದ್ಧಿ ಕೋಶ ರಚನೆ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಒತ್ತಾಯಕ್ಕೆ ಮಣಿದ ಸರಕಾರ

Malenadu Mirror Desk

ಮತ್ತದೇ ಬೇಸರ…ಮತ್ತದೇ ದೂರು…

Malenadu Mirror Desk

ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಈಗ ಹಂಗಾಮಿ ಸ್ಪೀಕರ್

Maha

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.