Malenadu Mitra
ರಾಜ್ಯ ಶಿಕಾರಿಪುರ ಶಿವಮೊಗ್ಗ

ಮುಸ್ಲಿಮರಿಗೆ  ಸೌಲಭ್ಯ ನೀಡಿಲ್ಲ ಎಂದಾದರೆ ರಾಜಕೀಯ ನಿವೃತ್ತಿ,
ಶಿಕಾರಿಪುರಕ್ಕೆ ಪರಿವಾರ ಸಮೇತ ಬಂದ ಯಡಿಯೂರಪ್ಪ., ಮುಸ್ಲಿಮರು, ಬಂಜಾರರ ಮನವೊಲಿಕೆ, ಮಗನ ಪರ ವಕಾಲತು

 ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಹಿಂದೂ ಧರ್ಮದವರಿಗೆ ಎಲ್ಲಾ ಜನಾಂಗದವರಿಗೆ ಸೌಲಭ್ಯ ನೀಡಿದಂತೆ ಅಲ್ಪಸಂಖ್ಯಾತರಿಗೂ ಸೌಲಭ್ಯ ನೀಡಿದ್ದೇನೆ. ಒಂದು ವೇಳೆ ಮುಸ್ಲಿಮರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಿಲ್ಲ ಎಂದು ತಿಳಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಶಿಕಾರಿಪುರ ಪಟ್ಟಣದ ಕುಮುದ್ವತಿ ಬಿಎಡ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಜಯೇಂದ್ರನನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಕಣಕ್ಕಿಳಿಸಿದರೂ  ಗೆಲ್ಲುವಂತಹ ನಾಯಕತ್ವ ಅವರಲ್ಲಿದೆ. ಆದರೂ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂಬ ಕಾರ್ಯಕರ್ತರ ಅಪೇಕ್ಷೆ ಹಾಗೂ ನಾಯಕರ ಒತ್ತಡಕ್ಕೆ ನಾನು ಸ್ಪಷ್ಟೀಕರಣವನ್ನು ನೀಡಿದ್ದು ವಿಜಯೇಂದ್ರ ನನ್ನ ಕರ್ಮ ಭೂಮಿ ಶಿಕಾರಿಪುರದಿಂದಲೇ ಸ್ಪರ್ಧೆ  ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ನಾನು ಹಿಂದೂ ಮುಸ್ಲಿಂ ಎನ್ನದೆ ಕಾರ್ಯಕ್ರಮಗಳನ್ನು ಕೊಟ್ಟಿದ್ದು ,  ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಕೇವಲ ಹಿಂದುಗಳಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ ಎನ್ನುವುದನ್ನು  ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಯಾವುದೇ ಜಾತಿ, ಮತ ,ಧರ್ಮ, ಎನ್ನದೆ ಎಲ್ಲ ಸಮುದಾಯಗಳಿಗೂ ಕಾರ್ಯಕ್ರಮಗಳನ್ನು ನೀಡಿದ್ದು ನಿಮ್ಮ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ತಾಲ್ಲೂಕಿನ ಜನತೆಯ ಆಶೀರ್ವಾದದಿಂದ ಅವರ ಅಪೇಕ್ಷೆಯಂತೆ ಶಿವಶರಣರ ನಾಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ನೀರಾವರಿ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ  ಎಂದರು .

ರಾಜ್ಯದಲ್ಲಿ ಬಿಜೆಪಿ  ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿದ್ದ ನಾನು ಆ ಪಟ್ಟಿಯನ್ನು ವರಿಷ್ಠರಿಗೆ ಇಂದು ತಲುಪಿಸಬೇಕಿತ್ತು. ಅನಿವಾರ್ಯವಾಗಿ ಬರಬೇಕಾದ ಪ್ರಸಂಗ ಬಂತು. ರಾಜ್ಯದಲ್ಲಿ ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ವಿಜೇಂದ್ರರವರು ಪ್ರತಿ ಜಿಲ್ಲೆ ತಾಲ್ಲೂಕುಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದ ಕಾರಣ ತಾಲ್ಲೂಕಿನ ಜನತೆ ನನಗೆ ಹಾಗೂ ರಾಘವೇಂದ್ರರವರಿಗೆ ಯಾವ ರೀತಿಯಲ್ಲಿ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದೀರೋ ಅದೇ ರೀತಿಯಲ್ಲಿ ನಿಮ್ಮ ಮಗನೆಂದು ವಿಜೇಂದ್ರರವರಿಗೆ ೫೦ ಸಾವಿರಕ್ಕೂ ಅಧಿಕ ಮತಗಳಿಂದ ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರ ೬೦೦೦ ರೂಗಳನ್ನು ಹಾಗೂ ರಾಜ್ಯ ಸರ್ಕಾರ ೪೦೦೦ ರೂ ರೈತರಿಗೆ ನೀಡುತ್ತಿದ್ದು ಒಟ್ಟು ೫೩ ಲಕ್ಷ ರೈತರಿಗೆ ತಲಾ  ಹತ್ತು ಸಾವಿರ ರೂಪಾಈ ಅವರ ಖಾತೆಗೆ ಜಮಾ ಆಗುತ್ತದೆ ಇದು ಬಿಜೆಪಿಯ ಕೊಡುಗೆ . ೧೨೫೦ ರೂಪಾಯಿ ಗಳನ್ನು  ರೈತ ಶಕ್ತಿ ಯೋಜನೆ ಅಡಿಯಲ್ಲಿ ರೈತರಿಗೆ  ಡೀಸೆಲ್ ಸಹಾಯಧನವಾಗಿ ನೀಡುತ್ತಿದ್ದು ಇದು ಬಿಜೆಪಿ  ಸರ್ಕಾರದ ಹೆಮ್ಮೆ ಎಂದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀವ್ ಕುಡುಚಿ ಮಾತನಾಡಿ  ಶಿಕಾರಿಪುರದ ಪ್ರತಿ ಮತದಾರನು ವಿಜಯೇಂದ್ರನಿಗೆ ನೀಡುವ  ಮತವು ಬಿಎಸ್ವೈ ರವರ ೪೫ ವರ್ಷಗಳ ಅವಿರತ ಹೋರಾಟದ ಪ್ರತಿಫಲವನ್ನು ಅವರಿಗೆ  ನೀಡಿದಂತೆ. ಈ ನೆಲದ ಅಸ್ಮಿತೆಯನ್ನು ಕಾಪಾಡುವ ಜವಾಬ್ದಾರಿ ಈ ನೆಲದ ಮತದಾರರ ನಿಮ್ಮ ಮೇಲಿದೆ ಎಂದರು.

ಕೆಎಸ್ ಗುರುಮೂರ್ತಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ , ಡಿ.ಎಸ್. ಅರುಣ್ ,  ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ ಡಿ ಮೇಘರಾಜ್ , ಎಚ್ .ಟಿ . ಬಳೆಗಾರ, ಕೆ ಹಾಲಪ್ಪ , ಬಿ .ಡಿ.ಭೂಕಾಂತ್ ,ಎಂ.ಬಿ.  ಚನ್ನವೀರಪ್ಪ , ರಾಮಾನಾಯ್ಕ್ ಮುಂತಾದವರು ಭಾಗವಹಿಸಿದ್ದರು.

ಬಿ ಎಸ್ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಶಿಕಾರಿಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲಾ ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ. ಇವರು ನೀಡಿದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಜನರಿಗೆ ತಿಳಿಸುವ ಮೂಲಕ ವಿಜೇಂದ್ರರವರಿಗೆ ೫೦ ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸುವ ಕೆಲಸ ಮಾಡಬೇಕಾಗಿದೆ.
 

ಬಿ.ವೈ.ರಾಘವೇಂದ್ರ, ಸಂಸದ

 ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದು ನಮೂದಾಗಿದ್ದ ಶಿಕಾರಿಪುರ ಇಂದು ರಾಜ್ಯದಲ್ಲಿಯೇ ಮಾದರಿ ತಾಲೂಕಾಗಿದೆ , ಇದಕ್ಕೆ ಕಾರಣ ಬಿ.ಎಸ್. ಯಡಿಯೂರಪ್ಪನವರನ್ನು ಇಲ್ಲಿಂದ ಶಾಸಕರನ್ನಾಗಿ ಆಯ್ಕೆ ಮಾಡಿ ವಿರೋಧ ಪಕ್ಷದ ನಾಯಕರನ್ನಾಗಿ , ಮುಖ್ಯಮಂತ್ರಿಯನ್ನಾಗಿಸಿದ್ದು. ಮುಂದೆ ತಂದೆಯವರ ಆಶಯದಂತೆ ಈ ತಾಲ್ಲೂಕಿನ ಇನ್ನಷ್ಟು ಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ನನಗೆ ಆಶೀರ್ವಾದಿಸಬೇಕು


ಬಿ ವೈ ವಿಜಯೇಂದ್ರ

Ad Widget

Related posts

ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿದ ಮಂಜುನಾಥ್‌ಗೌಡ, ಬಿಜೆಪಿ ಅವಧಿಯಲ್ಲಿ ಕಳೆದುಕೊಂಡದ್ದನ್ನು ಕಾಂಗ್ರೆಸ್ ಸರಕಾರದಲ್ಲಿ ಪಡೆದುಕೊಂಡ ಹಠವಾದಿ

Malenadu Mirror Desk

ಶಿವಮೊಗ್ಗದಲ್ಲಿ 185 ಮಂದಿಯಲ್ಲಿ ಕೊರೊನ ಸೋಂಕು

Malenadu Mirror Desk

ರವಿ ಹೆಗಡೆ, ಬಿಎಂ. ಹನೀಫ್ ಸೇರಿ 18 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.