Malenadu Mitra
ರಾಜ್ಯ ಶಿವಮೊಗ್ಗ

ಕಾಗೋಡು ಪುತ್ರಿ ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆ, ಎದೆಗೆ ಚೂರಿ ಹಾಕಿದಳು ಎಂದ ಹಿರಿಯ ಜೀವ

ಬದುಕಿನ ಸಂಧ್ಯಾಕಾಲದಲ್ಲಿರುವ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಅವರ ಪುತ್ರಿ ಡಾ.ರಾಜನಂದಿನಿ ಅವರು ಬಿಜೆಪಿ ಸೇರುವ ಮೂಲಕ ಬಲವಾದ ರಾಜಕೀಯ ಆಘಾತ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದ ರಾಜನಂದಿನಿ ಅವರು, ತಂದೆ ಕಾಗೋಡು ತಿಮ್ಮಪ್ಪ ಅವರ ಪ್ರಭಾವ ಬಳಸಿ ಲಾಬಿ ಮಾಡಿದ್ದರು. ಒಂದು ಮೂಲದ ಪ್ರಕಾರ ಮಗಳಪರವಾಗಿ ಕಾಗೋಡು ತಿಮ್ಮಪ್ಪರಿಗೆ ಲಾಬಿ ಮಾಡುವುದು ಇಷ್ಟವಿರಲಿಲ್ಲ ಆದರೂ ಮಗಳ ತಂದೆಯನ್ನು ಕರೆದುಕೊಂಡು ಕಾಂಗ್ರೆಸ್‌ನ ಉನ್ನತ ನಾಯಕರನ್ನು ಭೇಟಿ ಮಾಡಿದ್ದರು.

ಕಾಗೋಡು ತಿಮ್ಮಪ್ಪ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಪ್ರಚಾರ ಆರಂಭಿಸಿದ್ದರೆ, ರಾಜನಂದಿನಿ ಅವರು ಶಾಸಕ ಹಾಲಪ್ಪರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬುಧವಾರ ಬಿಜೆಪಿ ಸೇರಿದ್ದಾರೆ.
ರಾಜನಂದಿನಿ ಅವರೊಂದಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊನಗೋಡು ರತ್ನಾಕರ್ ಮತ್ತಿತರ ಮುಖಂಡರು ಬಿಜೆಪಿ ಸೇರಿದ್ದಾರೆ.
ರಾಜನಂದಿನಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಕಾಂಗ್ರೆಸ್ ಪಕ್ಷದ ನೀತಿ ಹಾಗೂ ಅಲ್ಲಿನ ವ್ಯವಸ್ಥೆಗೆ ಬೇಸತ್ತು ರಾಜನಂದಿನಿ ಬಿಜೆಪಿ ಸೇರಿದ್ದು, ಶಿವಮೊಗ್ಗ ಪಕ್ಷಕ್ಕೆ ಬಲ ಬಂದಿದೆ ಎಂದು ಹೇಳಿದ್ದಾರೆ. ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕ ಹರತಾಳು ಹಾಲಪ್ಪ ಅವರು ಹಾಜರಿದ್ದರು. ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿಸಿರುವ ಹಾಲಪ್ಪ ಅವರು, ಮುಂದಿನ ದಿನಗಳಲ್ಲಿ ಸೂಕ್ತಸ್ಥಾನಮಾನದ ಭರವಸೆ ನೀಡಿದ್ದಾರೆನ್ನಲಾಗಿದೆ.

ಎದೆಗೆ ಚೂರಿ ಹಾಕಿದಳು

ಮಗಳಿಗೆ ಅಸಮಾಧಾನವಿದ್ದರೆ ನನ್ನ ಬಳಿ ಹೇಳಬಹುದಿತ್ತು. ಆದರೆ ಬಿಜೆಪಿ ಸೇರಿ ಎದೆಗೆ ಚೂರಿ ಹಾಕಿದಳು. ನಾವೆಲ್ಲಾ ಸೈದ್ಧಾಂತಿಕ ಬದ್ಧತೆ ಮತ್ತು ಸ್ಥಿರ ರಾಜಕೀಯ ನಿಲುವು ಹೊಂದಿದವರು. ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಅವಕಾಶವಿದ್ದರೆ, ಕಾಂಗ್ರೆಸ್ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಆದರೆ ಈಗ ಪಕ್ಷದ ಆಶಯದಂತೆ ಕಾಂಗ್ರೆಸ್ ಅಭ್ಯರ್ಥಿಪರವಾಗಿ ಚುನಾವಣೆ ಮಾಡುತ್ತೇವೆ. ನಾನು ಕಾಂಗ್ರೆಸ್ಸಿಗ ಇಲ್ಲಿಯೇ ಇದ್ದು, ಕೆಲಸ ಮಾಡುವೆ ಎಂದು ಮಗಳ ರಾಜಕೀಯ ನಿಲುವಿನ ಬಗ್ಗೆ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

Ad Widget

Related posts

ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರನ್ನು ತಕ್ಷಣವೇ ನಿಲ್ಲಿಸಬೇಕು

Malenadu Mirror Desk

ವಾಹನ ಜಖಂ ಇನ್ನಿಬ್ಬರು ಬಂಧನ: ಆರೋಪಿಗಳಿಗಿದೆ ಕ್ರೈಂ ಹಿನ್ನೆಲೆ

Malenadu Mirror Desk

ಯಕ್ಷಗಾನ ಕಲೆ ಕನ್ನಡದ ಶ್ರೀಮಂತಿಕೆ ಹೆಚ್ಚಿಸಿದೆ: ಹಾಲಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.