ಪ್ರತಿದಿನಕ್ಕೂ ಕುತೂಹಲ ಕೆರಳಿಸುತ್ತಿರುವ ಶಿವಮೊಗ್ಗ ನಗರ ವಿಧಾನ ಸಭೆ ಕ್ಷೇತ್ರ ಹಲವು ತಿರುವುಗಳಿಗೆ ಸಾಕ್ಷಿಯಾಗಲಿದೆ. ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಅವೈಜ್ಞಾನಿಕ ವಾಗಿದೆ. ಮೂರು ಕ್ಷೇತ್ರಗಳಲ್ಲಿ ಗೆಲುವು ಮಾನದಂಡವಾಗಿ ಪಕ್ಷದ ನಾಯಕರಿಗೆ ಕಂಡಂತಿಲ್ಲ
ಈಗ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್ ಅವರು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇಂದು ಸಂಜೆ ಹೊತ್ತಿಗೆ ಬಹುತೇಕ ಖಚಿತವಾಗಲಿದೆ.
ಕಾಂಗ್ರೆಸ್ ಅಭ್ಯರ್ಥಿ ಸೆಕ್ಯುಲರ್ ಮನಸ್ಥಿತಿಯವರಲ್ಲ ಎಂಬ ಆರೋಪ ಮಾಡುವ ಪ್ರಸನ್ನ ಬೆಂಬಲಿಗರು ಪಕ್ಷೇತರ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ. ಕಣಕ್ಕಿಳಿಯುವ ನಿರ್ಧಾರ ಮಾಡಿರುವ ಕೆಬಿಪಿ ಗೆ ಜೆಡಿಎಸ್ ಗಾಳ ಹಾಕಿದೆ.ಹಲವು ಕೌತುಗಳಿಗೆ ಕಾರಣವಾಗಿರುವ ಶಿವಮೊಗ್ಗದಲ್ಲಿ ಇನ್ನೇನು ವದಂತಿ ಎಂದು ಕಾಯಬೇಕಿದೆ. ಈ ನಡುವೆ ಈಶ್ವರಪ್ಪರ ಬಳಗವೇ ಬಿಜೆಪಿ ಟಿಕೆಟ್ ಗಿಟ್ಟಿಸಲಿದೆ ಎನ್ನಲಾಗುತ್ತಿದೆ.