ಪ್ರತಿಷ್ಠಿತ ಶಿವಮೊಗ್ಗ ವಿಧಾನಸಭೆ ಕ್ಷೇತ್ರಕ್ಕೆ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆಯನ್ನು ಮಾಡಿಲ್ಲ ಆದರೆ, ಗುರುವಾರ ನಾಮಪತ್ರ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ನಗರದ ಎಲ್ಲಾ ವಾರ್ಡುಗಳ ಕಾರ್ಯಕರ್ತರಿಗೆ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ಬರಲು ತಿಳಿಸಲಾಗಿದೆ. ಈಶ್ವರಪ್ಪ ನಿವೃತ್ತಿ ನಂತರ ಕ್ಷೇತ್ರದ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಅವರಿಗೂ ಟಿಕೆಟ್ ನಿರಾಕರಿಸಿರುವ ಬಿಜೆಪಿ ಹೈಕಮಾಂಡ್, ನಗರ ಸಭೆ ಮಾಜಿ ಅಧ್ಯಕ್ಷ ಚೆನ್ನಬಸಪ್ಪ ಅವರಿಗೆ ಅಭ್ಯರ್ಥಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಈಶ್ವರಪ್ಪ ಅವರ ಸೊಸೆಗೆ ಟಿಕೆಟ್ ಕೊಡಲು ಪಕ್ಷದ ನಾಯಕತ್ವ ತಯಾರಿದ್ದು, ಈಶ್ವರಪ್ಪ ಕುಟುಂಬ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ.
ಈ ನಡುವೆ ಅಚ್ಚರಿಯ ಅಭ್ಯರ್ಥಿಯಾಗಿ ಹಿಂದೂ ಹರ್ಷನ ಸೋದರಿಗೆ ಟಿಕೆಟ್ ನೀಡಬಹುದು ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ.