Malenadu Mitra
ರಾಜ್ಯ ಶಿವಮೊಗ್ಗ

ಯಡಿಯೂರಪ್ಪ ಕುಟುಂಬ ಸೋಲಿಸುತ್ತೇವೆ: ಶಾಂತವೀರಪ್ಪಗೌಡ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂಡಾಯ ಅಭ್ಯರ್ಥಿ ಪರ ನಿಂತ ಹಿರಿಯ ನಾಯಕ

ಶಿಕಾರಿಪುರದಲ್ಲಿ ನಾಗರಾಜ್ ಗೌಡರಿಗೆ ಟಿಕೆಟ್ ನೀಡದಿರುವುದನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ಮುಖಂಡ ಶಾಂತವೀರಪ್ಪಗೌಡ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ನಾಗರಾಜ ಗೌಡರ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸುವ ಮೂಲಕ ಯಡಿಯೂರಪ್ಪ ಕುಟುಂಬವನ್ನು ಸೋಲಿಸುತ್ತೇನೆ. ಬಿ.ಎಸ್. ಯಡಿಯೂರಪ್ಪನವರ ಕುತಂತ್ರದಿಂದ ನಾಗರಾಜ ಗೌಡರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ. ಸಿದ್ದರಾಮಯ್ಯ ಈ ರಾಜ್ಯದ ನಾಯಕರು. ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಂದು ರಾಜಕಾರಣ ಮಾಡಿದ್ದಾರೆ ಎಂದು ದೂರಿದರು.
ನಾನೆಂದೂ ಬಿಜೆಪಿಯನ್ನು ಸೇರುವುದಿಲ್ಲ. ನನ್ನ ದೇಹ ಮಾತ್ರ ಕಾಂಗ್ರೆಸ್‌ನಿಂದ ದೂರವಿದೆಯೇ ಹೊರತು ನನ್ನ ಆತ್ಮವಲ್ಲ, ಶಿಕಾರಿಪುರದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಹಠ ತೊಟ್ಟಿದ್ದೇನೆ ಆ ಕಾರಣದಿಂದಲೇ ಕಾಂಗ್ರೆಸ್‌ನಿಂದ ಬಂಡಾಯವಾಗಿ ಸ್ಪರ್ಧಿಸಿರುವ ನಾಗರಾಜ ಗೌಡರ ಪರ ನಿಂತಿದ್ದೇನೆ ಎಂದರು.
ಬಿಎಸ್. ಯಡಿಯೂರಪ್ಪನವರು ಭಾರೀ ಭ್ರಷ್ಟರು ಮತ್ತು ಕುತಂತ್ರಿಗಳು. ವರುಣ ಕ್ಷೇತ್ರದಲ್ಲಿ ಮಗನನ್ನು ನಿಲ್ಲಿಸುತ್ತೇನೆ ಎಂಬ ಭೂತ ಬಿಟ್ಟು ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಇವರೇ ಸೂಚಿಸಿದ ಗೋಣಿ ಮಾಲತೇಶ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ. ಅವರ ಪುತ್ರ ವಿಜಯೇಂದ್ರನಷ್ಟು ಭ್ರಷ್ಟಾಚಾರಿ ಬೇರೆ ಯಾರೂ ಇಲ್ಲ. ಯಡಿಯೂರಪ್ಪ ಕುಟುಂಬ ಮಲೇಶಿಯಾ ಸೇರಿದಂತೆ ವಿಶ್ವದ ಎಲ್ಲೆಡೆ ಆಸ್ತಿ ಮಾಡಿದೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಲಿಂಗರಾಜ ಗೌಡ, ಗಣೇಶ ಗೌಡ, ಸಂತೋಷ್, ಹೇಮಂತ ಸ್ವಾಮಿ, ಮಂಜುನಾಥ್, ವಿಶ್ವಾಸ್ ಇದ್ದರು.

Ad Widget

Related posts

ಹರತಾಳು ಕೆರೆ ಜೀರ್ಣೋದ್ದಾರಕ್ಕೆ ನಿರ್ಧಾರ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 4 ಸಾವು, 184 ಸೋಂಕು

Malenadu Mirror Desk

ಸುಲಭ ದರದಲ್ಲಿ ಮೇಕಪ್ ತರಗತಿ, ಸದುಪಯೋಗಕ್ಕೆ ಅಶ್ವಿನಿ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.