ತುಮರಿ,ಮೇ ೧: ಮತದಾನ ಪ್ರತಿಯೊಬ್ಬರಿಗೂ ಇರುವ ಸಂವಿಧಾನದತ್ತವಾದ ಹಕ್ಕು. ಎಲ್ಲಾ ನಾಗರಿಕ ಬಂಧುಗಳು ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು ಎಂದು ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಭಕ್ತವೃಂದಕ್ಕೆ ಸಂದೇಶ ನೀಡಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ಪ್ರತಿ ಮತದಾರನಿಗೂ ಹಕ್ಕಿದೆ. ಚುನಾವಣೆ ಎಂಬುದು ಗಣತಂತ್ರದ ಹಬ್ಬವಿದ್ದಂತೆ. ಈ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ಸರ್ವರೂ ಮತದಾನ ಮಾಡಬೇಕು. ಚುನಾವಣೆ ಇರುವ ಕಾರಣ ಮೇ 10 ರಂದು ಸಿಗಂದೂರು ದೇವಾಲಯಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಂದಿನ ಪ್ರವಾಸವನ್ನು ರದ್ದು ಮಾಡಿ ಸರ್ವರೂ ಮತದಾನದಲ್ಲಿ ಭಾಗಿಯಾಗಿ ಸಂವಿಧಾನವನ್ನು ಬಲಗೊಳಿಸಬೇಕೆಂದು ಧರ್ಮದರ್ಶಿಗಳು ಕೋರಿದ್ದಾರೆ.