Malenadu Mitra
ರಾಜ್ಯ ಶಿವಮೊಗ್ಗ

ಹಕ್ಕುಪತ್ರ, ಸ್ಮಾರ್ಟ್ ವಿಲೇಜ್ :ಗ್ರಾಮಾಂತರ ಬಿಜೆಪಿ ಪ್ರಣಾಳಿಕೆ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಲಿದ್ದು, ಗ್ರಾಮಾಂತರ ಕ್ಷೇತ್ರಕ್ಕೆ ವಿಶೇಷ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ ನಂತರ ನಾಲ್ಕನೇ ಅವಧಿಯಲ್ಲಿ ಆಗಬೇಕಾದ ಅತಿ ಮುಖ್ಯ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ. ಆರೂವರೆ ಲಕ್ಷ ಜನಸಂಖ್ಯೆ ಇರುವ ಈ ಕ್ಷೇತ್ರಕ್ಕೆ ಪ್ರತ್ಯೇಕ ತಾಲೂಕು ಕಚೇರಿ ನಿರ್ಮಾಣ, ಸೆಂಟ್ರಲ್ ವಿಸ್ತಾ ಮಾದರಿಯಲ್ಲಿ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಸ್ಥಾಪನೆ, ರೈತ ಸಂಪರ್ಕ ಕೇಂದ್ರಗಳ ಆಧುನೀಕರಣ ಮಾಡಲಾಗುವುದು ಎಂದರು.
ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಕಂಫ್ಯೂಟರೀಕರಣ ಮಾಡಿ ನೂತನ ಕೇಂದ್ರಗಳ ಸ್ಥಾಪನೆ ಸರ್ಕಾರಿ ಕಚೇರಿ ಜನಸ್ನೇಹಿ ಕೇಂದ್ರಗಳಾಗಿ ಪರಿವರ್ತನೆ, ಏಕಗವಾಕ್ಷಿ ವ್ಯವಸ್ಥೆ ಮೂಲಕ ಶೀಘ್ರ ಪರಿಹಾರ, ನಾಡ ಕಚೇರಿ ಮತ್ತು ಕಂದಾಯ ಇಲಾಖೆ ಉನ್ನತೀಕರಣ, ಶಾಲಾ ಮಕ್ಕಳಿಗೆ ಕನಿಷ್ಟ ದರದಲ್ಲಿ ಬಸ್ ಸೌಲಭ್ಯ, ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆ ಸೇರಿದಂತೆ ವಿಶೇಷ ಸೌಲತ್ತು, ಶಿಕ್ಷಕರ ನೇಮಕ, ಖೇಲೋ ಇಂಡಿಯಾಕ್ಕೆ ಸಹಕಾರ, ರೈತರ ಹೊಲಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಅಂತರ್ಜಲ ಅಭಿವೃದ್ಧಿಗೆ ಯೋಜನೆ
ಅಡಿಕೆ ಬೆಲೆ ಸ್ಥಿರತೆಗೆ ಕ್ರಮ, ಚೆಕ್ ಡ್ಯಾಂಗಳ ನಿರ್ಮಾಣ, ಅಂತರ್ಜಲ ಅಭಿವೃದ್ಧಿಗೆ ಯೋಜನೆ, ಹನಿ ನೀರಾವರಿ, ಸ್ಪಿಂಕ್ಲರ್ ಮತ್ತು ಕೊಳವೆ ಬಾವಿಗಳ ನಿರ್ಮಾಣಕ್ಕೆ ಒತ್ತು, ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಆದ್ಯತೆ, ಮೀನು ಸಾಕಾಣಿಕೆಗೆ ಪ್ರೋತ್ಸಾಹ, ಕೆರೆಗಳ ದುರಸ್ತೀಕರಣ, ಪ್ರಮುಖ ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಮಾಡಿ, ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಅರಣ್ಯ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ, ಹಕ್ಕು ಪತ್ರ ವಿತರಣೆಗೆ ಕ್ರಮ, ಸ್ಮಾರ್ಟ್ ವಿಲೇಜ್ ಅನುಷ್ಠಾನ ಮಾಡಲಾಗುವುದು ಎಂದರು.
ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು, ಆನವೇರಿ, ಹೊಳೆಹೊನ್ನೂರು, ಕುಂಸಿ, ಹಸೂಡಿ ವ್ಯಾಪ್ತಿಯಲ್ಲಿ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಗಾರ್ಮೆಂಟ್ಸ್ ಸ್ಥಾಪನೆಗೆ ಪ್ರೋತ್ಸಾಹ, ಗ್ರಾಮಗಳಿಂದ ಕೇಂದ್ರ ರಸ್ತೆಗಳಿಗೆ ಸಂಪರ್ಕ, ರಂಗಮಂದಿರ, ಒಳ ಮತ್ತು ಹೊರ ಕ್ರೀಡಾಂಗಣ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಗ್ರಾಮಾಂತರ ಕ್ಷೇತ್ರದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಈಗಾಗಲೇ ೧೪೪೮ ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ನನ್ನ ಕ್ಷೇತ್ರದಲ್ಲಿ ಶೇ. ೫೦ ರಷ್ಟು ಜನ ಶರಾವತಿ ಸಂತ್ರಸ್ಥರಿದ್ದು, ಅವರ ಸಮಸ್ಯೆ ಬಗೆಹರಿಸಲು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಇನ್ನೂ ಹಕ್ಕು ಪತ್ರ ನೀಡಲು ೭೫೦೦ ಅರ್ಜಿಗಳು ಬಾಕಿ ಇದ್ದು, ಚುನಾವಣೆ ಮುಗಿದ ಮೇಲೆ ಗಮನಹರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ. ಧನಂಜಯ ಸರ್ಜಿ, ಎಸ್. ದತ್ತಾತ್ರಿ, ಕುಮಾರ್ ನಾಯ್ಡು, ಪಿಂಗಳೆ ಸುರೇಶ್, ಗೋಪಾಲ್, ವಿರೂಪಾಕ್ಷಪ್ಪ, ಮತ್ತಿತರರು ಇದ್ದರು.

Ad Widget

Related posts

ಬೆಂಗಳೂರಲ್ಲಿ ಮಧು ಬಂಗಾರಪ್ಪಗೆ ಅಭಿಮಾನಿಗಳಿಂದ ಸನ್ಮಾನ

Malenadu Mirror Desk

ಬಿಜೆಪಿ , ಸಂಘಪರಿವಾರ ಅಂಬೇಡ್ಕರ್ ವಿರೋಧಿಗಳು,
ಕಾಂಗ್ರೆಸ್ ದೇಶ ಕಟ್ಟಿದೆ, ನಮ್ಮನ್ನು ಹೀಯಾಳಿಸದಿರಿ ಪ್ರಧಾನಿಗೆ ಖರ್ಗೆಪ್ರತ್ಯುತ್ತರ

Malenadu Mirror Desk

ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ:ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.