Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಕುಮಾರ್ ಬಂಗಾರಪ್ಪ ಗೆದ್ದರೆ ಸಚಿವರಾಗ್ತಾರೆ: ಯಡಿಯೂರಪ್ಪ, ಆನವಟ್ಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಪ್ರಚಾರ

ಸೊರಬ : ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚಿಸುವ ಮೂಲಕ ಗೊಂದಲದಲ್ಲಿರುವ ಮತದಾರರನ್ನು ಸೆಳೆಯಬೇಕು. ನಿನ್ನೆ ಮೊನ್ನೆ ಪ್ರಚಾರಕ್ಕೆ ಬಂದವರಿಂದ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ಆನವಟ್ಟಿಯಲ್ಲಿ ತಾಲೂಕು ಬಿಜೆಪಿ ಶನಿವಾರ ಹಮ್ಮಿಕೊಂಡ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ನರೇಂದ್ರ ಮೋದಿ, ಅಮಿತ್ ಶಾ ಅವರು ರಾಜ್ಯದ ಉದ್ಧಗಲಕ್ಕೂ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ೧೩೫ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯುವುದು ಖಚಿತ.
ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಾಗುವುದು. ಈ ಬಾರಿ ಕುಮಾರ್ ಬಂಗಾರಪ್ಪ ಅವರನ್ನು ಗೆಲ್ಲಿಸಿದ್ದಲ್ಲಿ ಅವರು ಸಚಿವರಾಗುವ ಅವಕಾಶಗಳಿವೆ ಎಂದರು.
ಬಿಜೆಪಿ ನೀಡಿದ ಪ್ರಣಾಳಿಕೆಯನ್ನು ಅಧಿಕಾರ ಬಂದ ವಾರದೊಳಗೆ ಜಾರಿಗೊಳಿಸುವ ಜತೆಗೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಹಾಗೆಯೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತಂದೇ ತರುತ್ತೇವೆ. ಈಗಾಗಲೇ ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ಎಂ.ತಲ್ಲೂರು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಿಡಿದು ಮರಳು ಮಾಡಲು ಬಂದಿದ್ದು, ಅದಕ್ಕೆ ವಾರಂಟಿ ಇಲ್ಲ. ತಾಲೂಕಿನಲ್ಲಿ ರೌಡಿಸಂ ಆಡಳಿತ ತಡೆಗಟ್ಟಲು ಬಿಜೆಪಿ ಆಡಳಿತಕ್ಕೆ ತನ್ನಿ. ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರಿಂದ ತಾಲೂಕು ಹಾಗೂ ಜಿಲ್ಲೆಯಲ್ಲಿ ನೀರಾವರಿ ಸೇರಿದಂತೆ ಹತ್ತು ಹಲವು ಅಭಿವೃದ್ಧಿಗಳಾಗಿವೆ. ಹೆಚ್ಚಿನ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ ಎಂದರು.

ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಮಾತನಾಡಿ, ಸೊರಬ ತಾಲೂಕನ್ನು ಯಡಿಯೂರಪ್ಪ ಅವರ ಸಹಕಾರದಲ್ಲಿ ಮೂಡಿ, ಮೂಗೂರು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಹಸರಿಕರಣ ಮಾಡಲು ಮುಂದಾಗಿದ್ದು ಮುಂದಿನ ವರ್ಷದಿಂದ ರೈತರು ವರ್ಷಕ್ಕೆ ೩ ಬೆಳೆ ಬೆಳೆಯಲು ಸಹಕಾರಿಯಾಗುವುದು. ರಾಜ್ಯದಲ್ಲಿ ನಿಶ್ಚಲ ಬಹುಮತದಿಂದ ಬಿಜೆಪಿ ಆಡಳಿತಕ್ಕೆ ಬರಲಿದೆ.
ಬಿಜೆಪಿ ಸರಕಾರ ಬಂದರೆ ತಾಲೂಕಿನಲ್ಲಿ ೮೫೦ ಕೋಟಿ ಅನುದಾದಲ್ಲಿ ದಂಡಾವತಿ ಯೋಜನೆ ರೂಪಿಸಿ ಆನವಟ್ಟಿ ಭಾಗದ ರೈತರಿಗೆ ನೀರಾವರಿ ಕಲ್ಪಿಸಲಾಗುವುದು. ತಾಳಗುಪ್ಪದಿಂದ ಸೊರಬ ಆನವಟ್ಟಿ ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಕನಸಿಗೆ ಜನರು ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತರಬೇಕು ಎಂದರು.
ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಕುಂದನ್ ಪರಿಹಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಮಲ್ಲಿಕಾರ್ಜುನ ದ್ವಾರಳ್ಳಿ, ಈಶ್ವರ ಚೆನ್ನಪಟ್ಟಣ, ನಾಗರಾಜಗೌಡ ಚಿಕ್ಕಾವಲಿ, ಕೀರ್ತಿರಾಜ್ ಕಾನಳ್ಳಿ, ಕೃಷ್ಣಮೂರ್ತಿ, ಚೆನ್ನಬಸಪ್ಪಗೌಡ, ಪ್ರಸನ್ನಕುಮಾರ್, ಗಿರೀಶ್, ದಯಾನಂದಗೌಡ, ಸುರೇಶ್, ಸುಧಾ ಶಿವಪ್ರಸಾದ್, ಸುಧಾ ಸೋಮಶೇಖರ್, ದೇವೇಂದ್ರಪ್ಪ ಚೆನ್ನಾಪುರ, ಗುರುಕುಮಾರ್ ಪಾಟೀಲ್, ಮಲ್ಲಿಕಾರ್ಜುನ್, ನಾಗಪ್ಪ ವಕೀಲ, ನಾಗರಾಜ್ ಗೌಡ ಕಮರೂರು ಮತ್ತಿತರರಿದ್ದರು.

Ad Widget

Related posts

ಪ್ರಮುಖ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

Malenadu Mirror Desk

ಬ್ರಹ್ಮರ್ಷಿ ನಾರಾಯಣ ಗುರುಗಳು ಮನುಕುಲದ ಮಾರ್ಗದರ್ಶಕ: ಕೆ.ಎಸ್.ಈಶ್ವರಪ್ಪ

Malenadu Mirror Desk

ಮಲೆನಾಡಿನಲ್ಲೀಗ ಮಳೆ…ಮಳೆ… ಮತ್ತು ಮಳೆ…,ಮಂಜು ಮೋಡದಾಟಕ್ಕೆ ಕಾಣಸಿಗದ ಜೋಗದ ಜಲವೈಭವ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.