ಚುನಾವಣೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಮತದಾರರ ಮನವೊಲಿಕೆಗೆ ಕೊನೆ ಹಂತದ ಕಸರತ್ತು ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಅಭ್ಯರ್ಥಿಗಳು ಮತ್ತು ಬೆಂಬಲಗರು ಮನೆಮನೆ ಭೇಟಿ ನೀಡಿ ಮತಯಾಚನೆ ಮಾಡಿದರು. ಸೊರಬ ಕ್ಷೇತ್ರದಲ್ಲಿ ಅಭ್ಯರ್ಥಿ ಮಧುಬಂಗಾರಪ್ಪ ಅವರ ಪತ್ನಿ ಅನಿತಾ ಅವರು. ಕ್ಷೇತ್ರದಲ್ಲಿ ಪ್ರಚಾರಕ್ಕೆ ಕೊಂಚ ಬಿಡುವು ಮಾಡಿಕೊಂಡು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಾಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕುಶಲೋಪಚಾರದ ಮಾತುಕತೆ ನಡುವೆ ರಾಜಕೀಯ ಚರ್ಚೆಯನ್ನೂಮಾಡಿದ ಕಾಗೋಡು ತಿಮ್ಮಪ್ಪ ಅವರು, ತಮ್ಮ ಹೋರಾಟ, ಜನರಿಗೆ ಇರುವ ಭೂಮಿ ಸಮಸ್ಯೆ ಇತ್ಯಾದಿಗಳ. ಬಗ್ಗೆ ಮಾತುಕತೆ ನಡೆಯಿತೆನ್ನಲಾಗಿದೆ