Malenadu Mitra
ರಾಜ್ಯ ಶಿವಮೊಗ್ಗ

ಪ್ರಿಯದರ್ಶಿನಿ ಆಂಗ್ಲ ಶಾಲೆ ಅದ್ವಿತೀಯ ಸಾಧನೆ

ಶಿವಮೊಗ್ಗ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಹನ್ನೊಂದು ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದು ಶಾಲೆಗೆ ಮತ್ತು ಶಿವಮೊಗ್ಗ ನಗರಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಆರಂಭವಾಗಿ ಹನ್ನೆರಡು ವರ್ಷಗಳಾಗಿವೆ. ಹನ್ನೆರಡು ವರ್ಷಗಳಿಂದ 100ಕ್ಕೆ 100ರಷ್ಟು ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದ್ದೇವೆ ಎಂದರು.
ಶೋಭಿತ್ ಎಂಬ ವಿದ್ಯಾರ್ಥಿ 625ಕ್ಕೆ 622 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಅದೇ ರೀತಿ ಹೃಷಿಕಾ 612, ಗೌರವ್ 617, ಗೌತಮಿ611 ತನುಜ್ 610 ಭೂಮಿಕಾ 607 ರಭಿಯಾ 605 ದಿಶಾ ಎಂ. 605 ಸಾಹಿತ್ಯ 602, ಸಾನಿಕಾ ಜಿ.ಎಸ್.602, ತೇಜಸ್600 ಅಂಕಗಳನ್ನು ಪಡೆದಿದ್ದಾರೆ ಎಂದು ವಿವರಿಸಿದರು.
14ವಿದ್ಯಾರ್ಥಿಗಳು ಗಣಿತದಲ್ಲಿ, 6ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ 7 ವಿದ್ಯಾರ್ಥಿಗಳು ಕನ್ನಡದಲ್ಲಿ , 9 ವಿದ್ಯಾರ್ಥಿಗಳು ಹಿಂದಿಯಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ 134ಹೈಸ್ಕೂಲ್‌ಗಳಿದ್ದು, ಅದರಲ್ಲಿ ನಮ್ಮ ಶಾಲೆಯೂ ಸೇರಿದಂತೆ 9ಶಾಲೆಗಳಲ್ಲಿ ಮಾತ್ರ 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ. ವಿಶೇಷವೆಂದರೆ ಹನ್ನೆರಡು ವರ್ಷಗಳಿಂದಲೂ ನಾವು100ಕ್ಕೆ 100ರಷ್ಟು ಫಲಿತಾಂಶ ಪಡೆಯುತ್ತಿದ್ದೇವೆ ಎಂದರು.
ಪ್ರಾಂಶುಪಾಲೆ ಸುನೀತಾದೇವಿ ಬಿ.ಜೆ. ಮಾತನಾಡಿ, ನಮ್ಮ ಶಾಲೆಯಲ್ಲಿ ಕೇವಲ ಅಂಕಗಳಿಗೆ ಮಾತ್ರ ಮಹತ್ವ ನೀಡದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಗಮನಹರಿಸುತ್ತೇವೆ. ವಿಶೇಷ ತರಗತಿಗಳನ್ನು ನಡೆಸುತ್ತೇವೆ. ಪಠ್ಯಗಳನ್ನು ಬೇಗನೆ ಮುಗಿಸುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ವ್ಯಾಸಂಗವನ್ನು ಗಮನಿಸುತ್ತೇವೆ. ಕ್ರೀಡೆ, ಕಲೆ, ಸಾಹಿತ್ಯ, ಹೀಗೆ ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇವೆ ಎಂದ ಅವರು, ಮುಂದೆ ೫ನೇ ಹಾಗೂ ೮ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬರಲಿದ್ದು ಅದಕ್ಕೂ ಕೂಡ ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಪ್ರಾಂಶುಪಾಲ ಪ್ರವೀಣ್ ಮತ್ತು ೬೦೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ad Widget

Related posts

ಎನ್ ಎಸ್ ಎಸ್‌ ನಿಂದ ಸ್ವಚ್ಛತಾ ಅಭಿಯಾನ

Malenadu Mirror Desk

ಅವೈಜ್ಞಾನಿಕ ನೀರಿನ ಬಿಲ್ ಕಟ್ಟಬೇಡಿ: ನಾಗರೀಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ

Malenadu Mirror Desk

ಶಿವಮೊಗ್ಗ ಪೊಲೀಸ್ ಕಮಿಷನರೇಟ್ ಆಗಲಿದೆಯೆ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.