Malenadu Mitra
ರಾಜ್ಯ ಶಿವಮೊಗ್ಗ

ಗ್ರಾಮಗಳ ಏಳಿಗೆಯಾದಲ್ಲಿ ದೇಶದ ಪ್ರಗತಿ, ಪುರದಾಳಲ್ಲಿ ಅಭಿನಂದನೆ ಸ್ವೀಕರಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಅಭಿಮತ

ಶಿವಮೊಗ್ಗ,ಜೂ.ಹಳ್ಳಿಗಳ ದೇಶ ಭಾರತದಲ್ಲಿ ಗ್ರಾಮಗಳ ಅಭಿವೃದ್ಧಿಯಾದಲ್ಲಿ ಮಾತ್ರ ದೇಶದ ಏಳಿಗೆ ಕಾಣಬಹುದು. ಗ್ರಾಮಾಂತರದಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿಗಳು ಗ್ರಾಮ ಮಟ್ಟದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಪಾರದರ್ಶಕವಾಗಿ ಜಾತಿ ಭೇದವಿಲ್ಲದೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವ ಪಾಲನೆ ಮಾಡಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯಾನಾಯ್ಕ್ ಹೇಳಿದರು.
ಪುರದಾಳು ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನೆ ಹಾಗೂ ನೂತನ ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರದ ಯೋಜನೆಗಳನ್ನು ದೊರಕಿಸಿ ಕೊಡುವ ಜವಾಬ್ದಾರಿ ಗ್ರಾಮ ಪಂಚಾಯತ್ ಸದಸ್ಯರ ಮೇಲಿದೆ ಎಂದ ಅವರು, ತಮ್ಮ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮುಂದಿನ ದಿನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅತಿ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಮಾನ್ಯ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ರವರೊಂದಿಗೆ ಚರ್ಚಿಸಲಾಗಿದೆ. ಪುರದಾಳು ಗ್ರಾಮದ ಬಾರೆಹಳ್ಳ ಡ್ಯಾಮ್ ದುರಸ್ತಿ ಕಾಮಗಾರಿ ಬಗ್ಗೆ ಗಮನಹರಿಸುವೆ ಎಂದರು.

ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪ್ರದೀಪ್ ಎಸ್ ಹೆಬ್ಬೂರು ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಶಾಸಕರು ಗ್ರಾಮಕ್ಕೆ ಮಾಡಬೇಕಿರುವ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಬಸಪ್ಪಗೌಡ, ಕೆರೋಡಿ ನಾಗರಾಜ್, ಶೆಟ್ಟಿಹಳ್ಳಿ ಸುಧಾಕರ್, ಟಾಟಾಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಸುಮಾ ಜಗದೀಶ್, ಮಾಜಿ ಅಧ್ಯಕ್ಷೆ ಭಾರತಿ ನಾಗರಾಜ್, ಪ್ರೊ.ಕಲ್ಲನ್, ನಿವೃತ್ತ ಎಂಜನಿಯರ್ ಎಸ್.ಎಂ. ಹರೀಶ್,ಹೆಬ್ಬೂರು ನಾಗರಾಜ್, ಹೆಚ್.ಎಂ.ನಾಯ್ಕ, ಸದಸ್ಯೆ ಮಾನಸ ಸತೀಶ್,ನಾಗವೇಣಿ ಶಾಂತಕುಮಾರ್, ಲಕ್ಷ್ಮೀಬಾಯಿ ರಾಮಣ್ಣ, ಗ್ರಾಮದ ಪ್ರಮುಖರು ಹಾಜರಿದ್ದರು.

Ad Widget

Related posts

ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದ ಎಂ.ಶ್ರೀಕಾಂತ್

Malenadu Mirror Desk

ತೈಲ ಬೆಲೆ ಏರಿಕೆ ಖಂಡಿಸಿ ಪೆಟ್ರೋಲ್‌ ಬಂಕ್‌ಗೆ ಕಾಂಗ್ರೇಸ್‌ ಮುತ್ತಿಗೆ

Malenadu Mirror Desk

ಸಂಸ್ಕಾರದ ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.