Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿನ ಕುತೂಹಲ ಇನ್ನೂ ಉಳಿದಿದೆ,ಬೀಳ್ಕೊಡುಗೆ ಸಮಾರಂಭದಲ್ಲಿ ವಾರ್ತಾಧಿಕಾರಿ ಶಫಿ ಹೇಳಿಕೆ

ಶಿವಮೊಗ್ಗ : ಮಲೆನಾಡಿನಲ್ಲಿ ೬ ವರ್ಷಗಳ ಕಾಲ ಕೆಲಸ ನಿರ್ವಹಿಸಿ ಸಂತೃಪ್ತನಾಗಿದ್ದು, ಈನಾಡಿನ ಬಗ್ಗೆ ನನಗೆ ಇನ್ನೂ ಕುತೂಹಲ ಉಳಿದುಕೊಂಡಿದೆ. ಹೋರಾಟದ ಭೂಮಿ ಎಂಬ ಹೆಗ್ಗಳಿಕೆಗೆ ತಕ್ಕಂತೆ ಇಲ್ಲಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಪ್ರತಿಸ್ಪಂದಿಸುತ್ತದೆ ಎಂದು ವಾರ್ತಾ ಇಲಾಖೆ ಉಪನಿರ್ದೇಶಕ ಶಫಿ ಸಾದುದ್ಧೀನ್ ಹೇಳಿದರು.
ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಚಹಾ ಕೂಟದಲ್ಲಿ ಅವರು ಮಾತನಾಡಿದರು.
ವಾರ್ತಾ ಇಲಾಖೆ ಇತಿಮಿತಿಯಲ್ಲಿ ಶಿವಮೊಗ್ಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಆಡಳಿತ ವರ್ಗದ ಗಮನ ಸೆಳೆಯುವ ಕೆಲಸವಾಗಿದೆ. ಇಲ್ಲಿನ ಪತ್ರಕರ್ತರ ಸಂಘಟನೆ ಪ್ರಬಲವಾಗಿದ್ದು, ಜನಪರವಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಇಲ್ಲಿನ ಪತ್ರಕರ್ತರು ಪ್ರತಿಸ್ಪಂದಿಸುವ ರೀತಿ ನಿಜಕ್ಕೂ ಅಚ್ಚರಿಯಾಗಿದೆ. ಈ ಮಣ್ಣಿನ ಗುಣವೇ ಒಂದು ರೀತಿಯ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಮಾತನಾಡಿ, ಶಫಿ ಅವರ ಸಾತ್ವಿಕ ನಡೆ ಅವರನ್ನು ದೊಡ್ಡ ವ್ಯಕ್ತಿತ್ವದ ಮನುಷ್ಯರನ್ನಾಗಿಸಿದೆ ಎಂದೂ ಗಟ್ಟಿಯಾಗಿ ಮಾತನಾಡದ ಅವರು, ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಿದ ವಾರ್ತಾಽಕಾರಿಗಳಲ್ಲಿ ಶಫಿ ಅವರು ಮೇರುಪಂಕ್ತಿಯಲ್ಲಿ ಕಾಣುತ್ತಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಪತ್ರಕರ್ತರಾದ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಜೇಸುದಾಸ್.ಪಿ, ಶಿವಮೊಗ್ಗ ನಂದನ್, ಗಿರೀಶ್ ಉಮ್ರಾಯ್ ಮಾತನಾಡಿದರು.
ಪತ್ರಕರ್ತರಾದ ಆರಗ ರವಿ, ಜಿ.ಟಿ.ಸತೀಶ್, ಆತಿಶ್, ಗೊ.ವ.ಮೋಹನ್, ವಿ.ಸಿ.ಪ್ರಸನ್ನ, ನಿತಿನ್ ಕೈದೊಟ್ಲು, ರಾಕೇಶ್ ಡಿಸೋಜಾ, ಗಣೇಶ, ಭರತ್, ಶರತ್ ಭದ್ರಾವತಿ, ಲಿಯಾಖತ್, ಶರತ್ ಕೋಟೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ad Widget

Related posts

ಅರಸು ಎಂಬ ಪುಣ್ಯಾತ್ಮನಿಂದ ಪರಿಶಿಷ್ಟರು, ಹಿಂದುಳಿದವರು ಭೂ ಒಡೆಯರಾದರು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಭೂ ಹೋರಾಟ ಮೆಲುಕು ಹಾಕಿದ ಕಾಗೋಡು ತಿಮ್ಮಪ್ಪ

Malenadu Mirror Desk

ಗೋಮಾತೆಗೆ ಪೂಜೆ ಸಲ್ಲಿಸಿ ಹತ್ಯೆ ನಿಷೇಧ ಕಾನೂನು ಜಾರಿ ಘೋಷಣೆ

Malenadu Mirror Desk

ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.