Malenadu Mitra
ರಾಜ್ಯ ಶಿವಮೊಗ್ಗ

ಕುವೆಂಪು ವಿವಿ ಘಟಿಕೋತ್ಸವ, ಪದ್ಮಭೂಷಣ ಡಾ.ಸುರೇಶ್ ಬಿ.ಎನ್ ಅವರಿಂದ ಘಟಿಕೋತ್ಸವ ಭಾಷಣ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಜು.22ರ ಬೆಳಿಗ್ಗೆ 10-30ಕ್ಕೆ ವಿವಿಯ ಜ್ಞಾನ ಸಹ್ಯಾದ್ರಿ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅಗ್ರ ಸ್ಥಾನ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿ ಹಾಗೂ ಬೆಂಗಳೂರಿನ ಇಸ್ರೋದ ವಿಶಿಷ್ಟ ಪ್ರಾಧ್ಯಾಪಕ ಪದ್ಮಭೂಷಣ, ಪದ್ಮಶ್ರೀ ಡಾ. ಸುರೇಶ್ ಬಿ.ಎನ್. ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಯ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದರು.

ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಪಡೆಯಲು 98 ಪುರುಷರು ಹಾಗೂ 61 ಮಹಿಳೆಯರು ಸೇರಿ ಒಟ್ಟು 159 ಅಭ್ಯರ್ಥಿಗಳು ಅರ್ಹರಾಗಿದ್ದು, 5499 ಪುರುಷರು ಹಾಗೂ 9251 ಮಹಿಳೆಯರು ಸೇರಿ ಒಟ್ಟು 14750 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ 141 ಸ್ವರ್ಣ ಪದಕವನ್ನು 16 ಪುರುಷರು ಹಾಗೂ 58 ಮಹಿಳೆಯರು ಸೇರಿ ಒಟ್ಟು 74 ವಿದ್ಯಾರ್ಥಿಗಳು ಹಂಚಿಕೊAಡಿದ್ದಾರೆ. 18 ನಗದು ಬಹುಮಾನವಿದ್ದು, ಅವುಗಳನ್ನು ಮೂವರು ಪುರುಷರು ಮತ್ತು 13 ಮಹಿಳೆಯರು ಸೇರಿ ಒಟ್ಟು 16 ವಿದ್ಯಾರ್ಥಿಗಳು ಹಂಚಿಕೊAಡಿದ್ದಾರೆ ಎಂದರು.

ಎಂ.ಎ(ಕನ್ನಡ)ದಲ್ಲಿ ವಿ. ವಿಸ್ಮಿತಾ ಅವರು ಅತಿಹೆಚ್ಚು 12 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ. ವಿವಿಧ ಅಧ್ಯಯನ ವಿಭಾಗಗಳಲ್ಲಿ ಆರ್. ಆಶಾ, ಆರ್.ನೇಹಾ, ಯು. ರೋಹಿಣಿ, ಎ.ತೃಪ್ತಿ, ಎಸ್.ರಮ್ಯ, ಇವರು ತಲಾ 5 ಸ್ವರ್ಣ ಪದಕ ಪಡೆದಿದ್ದು, ಎಂಎಸ್ಸಿ ಗಣಿತ ಶಾಸ್ತçದಲ್ಲಿ ಎಂ. ಧನುಷ್ ಚೌಹಾಣ್ 4 ಸ್ವರ್ಣ ಹಾಗೂ 2 ನಗದು ಬಹುಮಾನ, ತರನುಮ್ ಬಾನು, ವಿ.ಎನ್. ಶ್ರೀನಿವಾಸ, ಪಿ.ಎಂ. ಪ್ರಿಯಾಂಕ ಹಾಗೂ ಬಿಂದು ದಿನೇಶ್ ನಾಯಕ್ ಇವರು ತಲಾ 4 ಸ್ವರ್ಣ ಪದಕ ಮತ್ತು ಬಿ.ಇಡಿ ನಲ್ಲಿ ಎ. ಗಜಲಾ ಹಫೀಜ್ ಇವರು ಮೂರು ಸ್ವರ್ಣ, 1 ನಗದು ಬಹುಮಾನ ಹಾಗೂ ಎಂ.ಪಿ. ಸೌಮ್ಯ, ರಾಕೇಶ್ ಆರ್. ಸುಣಗಾರ, ರಮೇಶ್ ರಾಜಪ್ಪ ಗುಡ್ಡದಮತಿಹಳ್ಳಿ, ಹೆಚ್.ಸಿ. ಅಂಕಿತ, ಕೆ.ವಿ. ಸಿಂಚನಾ ಅವರು ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ ಎಂದರು.

ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ ಉಡುಪಿಯ ಸದಾನಂದ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ವಿಜಯಪುರ ಜಿಲ್ಲೆಯ ಕಲಗೇರಿಯ ಪಂ.ರಾಜಗುರು ಗುರುಸ್ವಾಮಿ, ಶಾಸಕರಾದ ದಾವಣಗರೆ ಜಿಲ್ಲೆಯ ಅಣಜಿಗೊಲ್ಲರಹಳ್ಳಿಯ ಎಂ. ಚಂದ್ರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವೆ ಪ್ರೊ. ಸಿ. ಗೀತಾ, ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಎಸ್.ಕೆ. ನವೀನ್‌ಕುಮಾರ್, ಹಣಕಾಸು ವಿಭಾಗದ ಮುಖ್ಯಸ್ಥ ನರಸಿಂಹಮೂರ್ತಿ, ಪಿಆರ್‌ಒ ಸತ್ಯಪ್ರಕಾಶ್, ಉಪಕುಲಸಚಿವ ಮಂಜುನಾಥ್ ಉಪಸ್ಥಿತರಿದ್ದರು.

Ad Widget

Related posts

ಮಲೆನಾಡಿನಲ್ಲಿ ಸಂಭ್ರಮದ ಗೌರಿಹಬ್ಬ

Malenadu Mirror Desk

ಕೋವಿಡ್ ವಿಷಯದಲ್ಲಿ ಸಂಸದರ ಸಾಧನೆ ಶೂನ್ಯ

Malenadu Mirror Desk

ಸೋಲುವ ಹತಾಷೆಯಿಂದ ಸಿದ್ದರಾಮಯ್ಯ ಆಪಾದನೆ: ಸಿ.ಟಿ ರವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.