Malenadu Mitra
ರಾಜ್ಯ ಶಿವಮೊಗ್ಗ

ಕುಲಪತಿಯಿಲ್ಲದ ಕುವೆಂಪು ವಿವಿ, ಅಧಿಕಾರ ಹಸ್ತಾಂತರಿಸದೆ ಬಿಡುಗೆಹೊಂದಿದ ನಿರ್ಗಮಿತ ಕುಲಪತಿ!

ಶಿವಮೊಗ್ಗ,ಆ.೩: ಕುವೆಂಪು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಲಪತಿ ಇಲ್ಲವಾಗಿದೆ. ನಿಯಮದ ಪ್ರಕಾರ ಒಬ್ಬ ಕುಲಪತಿಯ ಅವಧಿ ಮುಗಿದ ಬಳಿಕ ಸರಕಾರ ನೂತನ ವಿಸಿ ನೇಮಕ ಮಾಡುವ ತನಕ ಹಂಗಾಮಿಯಾಗಿ ಹಿರಿಯ ಡೀನ್ ಅವರಿಗೆ ಪ್ರಭಾರ ಜವಾಬ್ದಾರಿ ಕೊಡಲಾಗುತ್ತದೆ. ಆದರೆ ಆ.೧ ರಂದು ಹಿಂದಿನ ಕುಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ ಅವರ ಅವಧಿ ಮುಗಿದಿದ್ದು, ಅವರು ಕರ್ತವ್ಯದಿಂದ ಬಿಡುಗಡೆ ಹೊಂದಿದ್ದಾರೆ. ಆ ಸಂದರ್ಭವೇ ಕುಲಾಧಿಪತಿಗಳಾದ ರಾಜ್ಯಪಾಲರ ಕಚೇರಿಯ ನಿರ್ದೇಶನದಂತೆ ನಿಗದಿತ ವ್ಯಕ್ತಿಗೆ ನಿರ್ಗಮಿತ ಕುಲಪತಿ ಅಧಿಕಾರ ಹಸ್ತಾಂತರ ಮಾಡಬೇಕಿದೆ. ಆದರೆ ವಿವಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಬಾರ ಕುಲಪತಿಯೂ ಇಲ್ಲದ ವಿಶ್ವವಿದ್ಯಾಲಯ ಎಂಬ ಅಪಖ್ಯಾತಿ ಬಂದೊದಗಿದೆ.

ಹಾಲಿ ಕುಲಪತಿಗಳ ಅವಧಿ ಮುಗಿಯುವ ಹೊತ್ತಿನಲ್ಲಿ ವಿವಿಯಲ್ಲಿನ ಡೀನ್‌ಗಳ ಸೀನಿಯಾರಿಟಿ ಪಟ್ಟಿಯನ್ನು ರಾಜ್ಯಪಾಲರ ಕಾರ್ಯಾಲಯಕ್ಕೆ ಕಳಿಸುವುದು ವಾಡಿಕೆ. ಈ ಪಟ್ಟಿಯನ್ನು ಆಧರಿಸಿ ರಾಜ್ಯಪಾಲರ ಕಚೇರಿಯಿಂದ ಇಂತವರಿಗೆ ಅಧಿಕಾರ ಹಸ್ತಾಂತರ ಮಾಡಿ ಬಿಡುಗಡೆ ಹೊಂದಬೇಕಿರುತ್ತದೆ. . ರಾಜ್ಯಪಾಲರ ಕಚೇರಿ ಅಥವಾ ಉನ್ನತ ಶಿಕ್ಷಣ ಇಲಾಖೆಯಿಂದ ಯಾವುದೇ ನಿರ್ದೇಶನ ಬಾರದ ಕಾರಣ ಅಧಿಕಾರ ಹಸ್ತಾಂತರ ಮಾಡಿಲ್ಲ. ಸೀನಿಯಾರಿಟಿ ಹುದ್ದೆ ಸಂಬಂಧ ತಗಾದೆ ಇರುವ ಕಾರಣವಿಳಂಬವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಅರ್ಜಿಗಳ ಸುರಿಮಳೆ:
ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾದಂದಿನಿಂದ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗಿದ್ದ, ಪ್ರೊ.ವೀರಭದ್ರಪ್ಪ ಅವರು ಹೋಗುವಾಗಲೂ ನಿಯಮಾನುಸಾರ ಅಧಿಕಾರ ಹಸ್ತಾಂತರ ಮಾಡಿಲ್ಲ ಎನ್ನಲಾಗಿದೆ. ಖಾಲಿ ಇರುವ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅ.೪ ಅರ್ಜಿ ಸಲ್ಲಿಸಲು ಕಡೇ ದಿನವಾಗಿದೆ. ಈಗಾಗಲೇ ವಿವಿ ಒಳಗಿನ ಹಾಗೂ ಹೊರಗಿನ ೯೦ ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಬಲ್ಲಮೂಲಗಳು ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಕೊನೇದಿನವಾದ ಬಳಿಕ ಸರಕಾರ ನೂತನ ಕುಲಪತಿ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕಿದೆ. ಇದಕ್ಕಾಗಿ ಶೋಧನಾ ಸಮಿತಿ ಆಯ್ಕೆ ಮಾಡಬೇಕಿದ್ದು, ಅರ್ಹತೆಗನುಸಾರವಾಗಿ ಸಮಿತಿ ಅಂತಿಮವಾಗಿ ಮೂರು ಹೆಸರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಬೇಕಿದೆ. ಅಲ್ಲಿ ರಾಜ್ಯಪಾಲರು ಅಂತಿಮವಾಗಿ ನೂತನ ಕುಲಪತಿಯನ್ನು ನೇಮಕ ಮಾಡಲಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳಿಗೆ ಕಾಲಾವಕಾಶ ಬೇಕಾಗಿರುವುದರಿಂದ ಅಲ್ಲಿವರೆಗೆ ಹಂಗಾಮಿ ಕುಲಪತಿಯನ್ನು ನೇಮಕ ಮಾಡಬೇಕಿದೆ.

Ad Widget

Related posts

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದೆ: ಕೆ.ಎಸ್. ಈಶ್ವರಪ್ಪ

Malenadu Mirror Desk

ಬಿಜೆಪಿ ಸರ್ಕಾರ ಶ್ರೀಮಂತರ ಪರ

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್‍ನಲ್ಲೇ ಖೇಲೋ ಇಂಡಿಯಾ, ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ ಸಂಸದ ರಾಘವೇಂದ್ರ ಅವರ ಮನವರಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.