ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿ ಪುರಸ್ಕೃತ ಹಿರಿಯ ಸಮಾಜವಾದಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.
ಸಾಗರದ ಅವರ ಮನೆಗ ಬರುತ್ತಿರುವ ಅಭಿಮಾನಿಗಳು ಮತ್ತು ಬೆಂಬಲಿಗರು, ಸಾಮಾಜಿಕ ನ್ಯಾಯ ಪರಿಪಾಲನೆಯ ಹರಿಕಾರ ಕಾಗೋಡು ಅವರಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜಕೀಯ ಜೀವನದುದ್ದಕ್ಕೂ ಬಡವರು ಮತ್ತು ತುಳಿತಕ್ಕೊಳಗಾದವರ ಪರವಾಗಿ ಕೆಲಸ ಮಾಡಿದ ನಿಜನಾಯಕನಿಗೆ ಸರಕಾರ ಗೌರವಿಸಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚುವಂತೆ ಮಾಡಿದೆ ಎಂದು ಕೊಂಡಾಡಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಸಾಗರದ ಅವರ ನಿವಾಸದಲ್ಲಿ ಸನ್ಮಾನಿಸಿದರು. ಪ್ರಮುಖರಾದ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್ ಮತ್ತಿತರರು ಇದ್ದರು. ಕಾಂಗ್ರೆಸ್ ಮುಖಂಡ ಎನ್. ರಮೇಶ್ ಕೂಡಾ ಕಾಗೋಡು ತಿಮ್ಮಪ್ಪ ಅವರನ್ನು ಗೌರವಿಸಿದರು.
ನೌಕರರ ಸಂಘದಿಂದ ಸನ್ಮಾನ:
ಸಾಗರ ತಾಲೂಕು ಈಡಿಗ ನೌಕರರ ಸಂಘದ ಪ್ರಮುಖರು ಕಾಗೋಡು ಅವರನ್ನು ಭೇಟಿ ಮಾಡಿ ಅವರ ಮನೆಯಲ್ಲಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಸಾಗರ ಬಿ.ಇ.ಒ.ಪರಶುರಾಮಪ್ಪ, ಮುಖ್ಕೋದ್ಯಾಯರ ಸಂಘದ ಅಧ್ಯಕ್ಷ ಮಹಾಬಲೇಶ್ವರ್, ಅನುದಾನಿ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ ಮತ್ತಿತರರು ಇದ್ದರು. ದೀವರ ಯುವವೇದಿಕೆ ಪ್ರಮುಖರು ಹಿರಿಯ ನಾಯಕನಿಗೆ ಸಿಕ್ಕ ಗೌರವಕ್ಕೆ ಸನ್ಮಾನಿಸಿದರು. ಈ ಸಂದರ್ಭ ವೆಂಕಟೇಶ್ ಮೆಳವರಿಗೆ, ಪರಶುರಾಂ, ದೇವರಾಜ್, ಕರೂರು ಹೋಬಳಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷ ಸಂಧ್ಯಾ ಸಿಗಂದೂರು, ಡಾ.ರಾಜನಂದಿನಿ ಕಾಗೋಡು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಕಾಗೋಡು ತಿಮ್ಮಪ್ಪ ಕುಶಲೋಪರಿ ವಿಚಾರಿಸಿದರಲ್ಲದೆ, ದೇವರಾಜು ಅರಸು ಮತ್ತು ತಮ್ಮ ಒಡನಾಟವನ್ನು ಮೆಲುಕು ಹಾಕಿದರು.