Malenadu Mitra
ರಾಜ್ಯ ಶಿವಮೊಗ್ಗ

ಮತ್ತೆ ಕಾಂಗ್ರೆಸ್‌ಗೆ ಬಂದ ಆಯನೂರು ಮಂಜುನಾಥ್, ಇದು ಕೊನೇ ಸ್ಟಾಪ್ ಎಂದ ಮಾಜಿ ಸಂಸದ

ಆಯನೂರು ಜರ್ನಿ, ಜನಸಂಘ-ಬಿಜೆಪಿ-ಜನತಾಪಾರ್ಟಿ-ಕಾಂಗ್ರೆಸ್-ಬಿಜೆಪಿ-ಜೆಡಿಎಸ್-ಕಾಂಗ್ರೆಸ್


ಶಿವಮೊಗ್ಗ:  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ತಾನು ಮತ್ತು ತನ್ನ ಹಲವು ಬೆಂಬಲಿಗರು ಆ. ೨೪ರ ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ ೧೦:೩೦ಕ್ಕೆ ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾಗಿ  ವಿಧಾನಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಹಲವು ದಿನಗಳಿಂದ ತಾನು ಕಾಂಗ್ರೆಸ್ ಸೇರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಎಲ್ಲರ ನಿರೀಕ್ಷೆಯಂತೆ ಇದು ನಿಜವಾಗಿದೆ. ಈ ಬಗ್ಗೆ ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಯಾವುದೇ ಶರತ್ತುಗಳಿಲ್ಲದೆ ಕಾಂಗ್ರೆಸ್ ಸೇರುತ್ತಿರುವುದಾಗಿ ಮಾಹಿತಿ ನೀಡಿದರು.
 ವಿಧಾನಸಭಾ ಚುನಾವಣೆ ವೇಳೆಯೇ ಕಾಂಗ್ರೆಸ್ ಸೇರಲು ಮುಂದಾಗಿದ್ದೆ. ಆದರೆ ಅವಕಾಶ ಸಿಗದೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಬೇಕಾಯಿತು. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯನ್ನು  ಹೊತ್ತು  ಆ ಪಕ್ಷ ಸೇರುತ್ತಿದ್ದೇವೆ ಎಂದ ಅವರು, ಕಾಂಗ್ರೆಸ್‌ನಿಂದ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಕೇಳಿದ್ದು ನಿಜ. ಆದರೆ ಅಲ್ಲಿ ೧೦-೧೨ ಸ್ಪರ್ಧಾಕಾಂಕ್ಷಿಗಳಿದ್ದರು. ಇದು ನನ್ನ ಸೇರ್ಪಡೆಗೆ ತೊಂದರೆಯಾಯಿತು. ನನಗೆ ಅವಕಾಶ ಸಿಗದಿದ್ದಾಗ ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ ಎಚ್ ಡಿ ಕುಮಾರಸ್ವಾಮಿ ಅವಕಾಶ ಕೊಟ್ಟು ಜೆಡಿಎಸ್‌ನಿಂದ ಸ್ಪಧಿಸುವಂತೆ ಮಾಡಿದರು ಎಂದರು.
. ಸದ್ಯಕ್ಕೆ ಕೆ ಬಿ ಪ್ರಸನ್ನಕುಮಾರ್ ಮತ್ತು ಕೆಲವರು ಜೆಡಿಎಸ್‌ನಲ್ಲೇ ಇರುತ್ತಾರೆ. ನನ್ನ ಉದ್ದೇಶ ಅಧಿಕಾರ ಹಿಡಿಯುವುದಲ್ಲ. ಬದಲಾಗಿ ನನ್ನನ್ನು ನಂಬಿದವರಿಗೆ ನ್ಯಾಯ ಕೊಡಿಸುವುದಾಗಿದೆ. ನೌಕರರು ಮ್ತತು ಕಾರ್ಮಿಕರ ಹಿತ ಕಾಯಲು, ಸಮಾನತೆಗೆ  ನಾನು ಬದ್ಧನಾಗಿದ್ದೇನೆ ಎಂದರು.  

ಪಾಲಿಕೆ ಸದಸ್ಯ ಎಚ್ ಸಿ ಯೋಗೇಶ್ ನನ್ನ ಸೇರ್ಪಡೆಯನ್ನು ವಿರೋಧಿಸಿದ್ದಾರೆ. ಯೋಗೇಶ್ ನನ್ನ ಕಿರಿಯ ಗೆಳೆಯ. ಅವರ ಮಾತಿಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅವರ ಅಪ್ಪ ಚಂದ್ರಶೇಖರಪ ಸಹ ನನ್ನೊಂದಿಗೆ ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ ಬೈದಿದ್ದರು. ಆದರೆ ನಂತರ ಕಾಂಗ್ರೆಸ್ ಸೇರಿ ಶಾಸಕರಾಗಲಿಲ್ಲವೇ? ಕಳೆದ ಬಾರಿ ಕಾಂಗ್ರೆಸ್ ಗೆಲ್ಲುವ ಎಲ್ಲ ವಾತಾವರಣ ಇದ್ದರೂ ಯೋಗೇಶ್ ಸೋತರು. ಆದರೆ ಪ್ರಸನ್ನಕುಮಾರ್ ಬಲಿಷ್ಠ ಈಶ್ವರಪ್ಪ ವಿರುದ್ಧ ಬಿಜೆಪಿ ಪರ ಇದ್ದ ವಾತಾವರದಲ್ಲೂ ೫೮ ಸಾವಿರ ಮತ ಪಡೆದಿದ್ದಾರೆ. ಆದರೆ ಅವರ ವಿರುದ್ಧ ಕೆಲವರು ಷಡ್ಯಂತ್ರ ನಡೆಸಿದ ಬಗ್ಗೆ ಅವರಿಗೆ ಬೇಸರವಿದೆ. ಹಾಗಾಗಿ ಕಾಂಗ್ರೆಸ್ ತ್ಯಜಿಸಿದರು ಎಂದರು.    
ಪತ್ರಿಕಾಗೋಷ್ಠಿಯಲ್ಲಿ ಆಯನೂರು ಬೆಂಬಲಿಗರಾದ ಲಕ್ಷ್ಮಣಪ್ಪ, ನಗರಸಭೆ ಮಾಜಿ ಸದಸ್ಯ ಪರಂಧಾಮ ರೆಡ್ಡಿ, ಪಾಲಿಕೆಯ ಹಾಲಿ ಸದಸ್ಯ  ಧೀರರಾಜ್ ಹೊನ್ನವಿಲೆ, ಮಹೇಂದ್ರನಾಥ, ಶಿ. ಜು.ಪಾಶ. ರಿಯಾಜ್ ಅಹಮದ್, ಆಯನೂರು ಅವರ ಪುತ್ರ ಸಂತೋಷ್ ಮೊದಲಾದವರಿದ್ದರು.

ಮತ್ತೆ ಬಿಜೆಪಿಗೆ ಯಾವ ಕಾರಣಕ್ಕೂ ಮರಳುವುದಿಲ್ಲ.  ಬೇರೆ ಪಕ್ಷಗಳಿಗೂ ಹೋಗುವುದಿಲ್ಲ. ಶೇ. ೯೯ರಷ್ಟು ಕಾಂಗ್ರೆಸ್ಸಿಗರು ನನ್ನ ಸೇರ್ಪಡೆಯನ್ನು ಒಪ್ಪಿದ್ದಾರೆ. ಸಚಿವರು, ಹಿರಿಯ ಮುಖಂಡರೂ ಸಹ ನನ್ನ ಸೇರ್ಪಡೆಗೆ ಸಮ್ಮತಿಸಿದ್ದಾರೆ. ಆದರೆ ನನ್ನನ್ನು ವಿರೋಧಿಸುವವರಿಗೆ ಯಾವುದೇ ರೀತಿಯಲ್ಲೂ ನಾನು ಅಡ್ಡಿಯಾಗುವುದಿಲ್ಲ. ಅವರ ಆತಂಕಕ್ಕೆ ಕಾರಣವೇನೆನ್ನುವುದು ಅರ್ಥವಾಗುತ್ತಿಲ್ಲ. ಇದು ನನ್ನ ಕೊನೆಯ ಬಸ್ ಸ್ಟಾಪ್.

-ಆಯನೂರು ಮಂಜುನಾಥ

Ad Widget

Related posts

ಬೈಕ್‍ಗೆ ಗುದ್ದಿದ ಕಾರಣ ಜಗಳ, ಯುವಕನ ಕೊಲೆ

Malenadu Mirror Desk

ಕಳೆಗಟ್ಟಿದ ಮಳೆನಾಡು, ಮೈದುಂಬಿದ ಜೀವನದಿಗಳು, ಜಲಾಶಯಗಳ ಒಳಹರಿವು ಹೆಚ್ಚಳ

Malenadu Mirror Desk

ಹಿಂದೂ ಧರ್ಮದಲ್ಲಿ ಸಾಮಾಜಿಕ ಪರಿವರ್ತನೆ ಆಗತ್ಯ: ಜಡೆ ಮಹಾಂತ ಸ್ವಾಮೀಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.