Malenadu Mitra
ರಾಜ್ಯ ಸಾಗರ

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೂ ಇನ್ನೂ ಅಂತಿಮವಾಗಿಲ್ಲ

ಶಿವಮೊಗ್ಗ:ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೂ ಇನ್ನೂ ಅಂತಿಮವಾಗಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವನ್ನು ಕೇವಲ ಮಾಧ್ಯಮದಲ್ಲಿ ಕೇಳಿ ತಿಳಿದುಕೊಂಡಿದ್ದೇನೆ.

ಅದಕ್ಕಿಂತ ಹೆಚ್ಚು ಮಾಹಿತಿಯಿಲ್ಲ.ಚರ್ಚೆ ಆದರೆ ಬಹಿರಂಗ ಆಗಲೇ ಬೇಕು.ಯಡಿಯೂರಪ್ಪ, ಕುಮಾರಸ್ವಾಮಿ ಹೇಳಿಕೆ ಗಮನಿಸಿದ್ದೇನೆ.ವರಿಷ್ಠರು ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ನಾವೆಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಲೋಕಸಭೆ ಚುನಾವಣೆಗೆ ಬಿಜೆಪಿ ಗಮನಹರಿಸಿದೆ.28 ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆ ನಡೆಯುತ್ತಿದೆ ಎಂದರು.

ವಿರೋಧಪಕ್ಷ ನಾಯಕ, ರಾಜ್ಯಾಧ್ಯಕ್ಷ ನೇಮಕ ವಿಳಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಕಾರಣವಿಲ್ಲದೆ ನಿರ್ಣಯ ಮುಂದೂಡಿಲ್ಲ.ಆ ಬಲವಾದ ನಂಬಿಕೆ ನನ್ನದು.ಸೇನಾನಿ ಇಲ್ಲದೆ ಯುದ್ಧ ಗೆದ್ದ ಉದಾಹರಣೆಯೂ ಇದೆ.ಆದರೆ ಸೇನಾನಿ ಬೇಕೇ ಬೇಕು.ಪ್ರಯೋಗಗಳು ಬೇಕೇ ಬೇಕು, ಇದೂ ಒಂದು ಪ್ರಯೋಗ ಎಂದರು.

ರಾಜ್ಯದ ಅಭಿವೃದ್ಧಿಗೆ ಮೂಲಸೌಕರ್ಯ, ಸ್ವಾವಲಂಬಿ ಮಾಡುವುದು ಅಗತ್ಯ.ಆದರೆ ಬೇಡುವ ಮಾನಸಿಕತೆ ದೀರ್ಘ ಕಾಲ ಇರುವುದು ಒಳ್ಳೆಯದಲ್ಲ.ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಆಗಬೇಕು. ಆದರೆ ಕಾಂಗ್ರೆಸ್ ನವರಿಗೆ ಪ್ರೇರಣೆ ಆಗಿದ್ದು, ಟಿಪ್ಪು. ಸರ್ಕಾರ 100 ದಿನಗಳ ಒಳಗೆ ಪ್ರತಿಭಟನೆ ಎದುರಿಸಬೇಕಾಗಿದೆ. ರೈತರದ್ದಾಯಿತು, ಈಗ ಖಾಸಗಿ ವಾಹನ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.

ಚುನಾವಣೆ ತಯಾರಿಗೆ ನಾವು ನಮ್ಮ ತಪ್ಪು ಸರಿಪಡಿಸಿಕೊಳ್ಳುತ್ತೇವೆ. ಇಡೀ ಜಗತ್ತು ಭಾರತಕ್ಕೆ ಬಂದು ಹೊಗಳುತ್ತಿದ್ದರೆ, ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತವನ್ನು ತೆಗೆಳುತ್ತಿದ್ದಾರೆ. ಭಯೋತ್ಪಾದಕರು ಮಾತ್ರ ರಾಷ್ಟ್ರದ್ರೋಹಿಗಳಲ್ಲ. ಭಾರತದ ವಿರುದ್ಧ ಅಪಪ್ರಚಾರ ಮಾಡುವವರೂ ದೇಶದ್ರೋಹಿಗಳು.ಆ ಸಾಲಿಗೆ ರಾಹುಲ್ ಗಾಂಧಿ ಸೇರದಿರಲಿ. ಕಾಂಗ್ರೆಸ್ ಅಸಮಾಧಾನ ಇನ್ನಷ್ಟು ಹೆಚ್ಚಾಗಲಿ, ಅದು ನಮಗೆ ಸಂಬಂಧಿಸಿದ್ದಲ್ಲ. ನಾವ್ಯಾಕೆ ದುಃಖಪಡಲಿ ಎಂದರು.

ಬಿಜೆಪಿಯವರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಪ್ರೊಡ್ಯುಸರ್, ಡೈರೆಕ್ಟರ್ ಇರಬಹುದು.ನನಗೆ ಗೊತ್ತಿಲ್ಲ, ಇಂಟಲಿಜೆನ್ಸಿ ಸಿದ್ದರಾಮಯ್ಯ ಬಳಿ ಇದೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ, ಗೊತ್ತಿರಲಾರದಷ್ಟು ಅಮಾಯಕರಲ್ಲ ಎಂದರು.

ReplyForward
Ad Widget

Related posts

ಮಲೆನಾಡಲ್ಲಿ ಮುಂದುವರಿದ ವರ್ಷಧಾರೆ, ಯಾವ ಡ್ಯಾಂ ಎಷ್ಟು ನೀರು ?

Malenadu Mirror Desk

ಶಿವಮೊಗ್ಗದಲ್ಲಿ 635 ಮಂದಿಗೆ ಕೊರೊನ, ಒಂದು ಸಾವು

Malenadu Mirror Desk

ವಿಧಿ ನೀನೆಂತ ಕ್ರೂರಿ, ಮುಗ್ಧ ಗೆಳತಿಯ ಕಿತ್ತುಕೊಂಡೆಯಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.