Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡು ಕರ್ನಾಟಕ ರೂಪುರೇಷೆ, ಹೋರಾಟ ಕುರಿತು ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ : ಮಲೆನಾಡು ಕರಾವಳಿಜನಪರ ಒಕ್ಕೂಟ

ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯಲು ಮಾಡಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲು ಅ. ೩೧ ರಂದು ಬೆಂಗಳೂರಿನಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಮುರೊಳ್ಳಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಭಾಂಗಣದಲ್ಲಿ ಜನಪರ ಒಕ್ಕೂಟದ ಈ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ಸಂಘಟನೆಯ ಹೋರಾಟದ ದಿಕ್ಕು ದೆಸೆಯ ಚರ್ಚೆ, ಧ್ವಜ ಮತ್ತು ಲೋಗೋ ಲೋಕಾರ್ಪಣೆ ನಡೆಯಲಿದೆ ಎಂದರು.
ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ನಮ್ಮನ್ನಾಳುವ ಸರ್ಕಾರಗಳನ್ನು ಎಚ್ಚರಿಸುವ ಸಂವಿಧಾನ ಬದ್ಧ ಹೋರಾಟವು ಸರ್ವ ಧರ್ಮ ಮನೋಭಾವದ ಚಿಂತನೆಯ ಅಡಿಗಲ್ಲು ಆಗಲಿದೆ.

ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಮಸ್ಯೆಗಳು ಏಕರೂಪದಲ್ಲಿವೆ. ಮುಖ್ಯವಾಗಿ ಈ ಎಲ್ಲಾ ಜಿಲ್ಲೆಗಳಲ್ಲೂ ಭೂ ಹಕ್ಕು ಸಮಸ್ಯೆ ನಿರಂತರವಾಗಿದೆ. ಕಲ್ಯಾಣ ಕರ್ನಾಟದ ಸಮಸ್ಯೆಗಳ ಬಗ್ಗೆ ಸರ್ಕಾರಗಳು ಎಚ್ಚೆತ್ತುಕೊಂಡಂತೆ ನಮ್ಮ ಮಲೆನಾಡು, ಕರಾವಳಿ ಭಾಗದ ಸಮಸ್ಯೆಗಳನ್ನು ಬಗೆಹರಿಸಿ ಸ್ಪಂದಿಸುವಂತೆ ಮಾಡುವುದು ಈ ಹೋರಾಟದ ಗುರಿ ಎಂದರು.

ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಅವು ಯಾವುವೂ ಜಾರಿಯಾಗುತ್ತಿಲ್ಲ. ಪರಿಸರ ಕೇಂದ್ರಿತ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಮಲೆನಾಡಿನಲ್ಲಿ ಹೆಬ್ಬಾಗಿಲಿನಂತೆ ತೆರೆದಿದ್ದರೂ ಅದು ಬಳಕೆಯಾಗುತ್ತಿಲ್ಲ. ಒಬ್ಬ ಆಟೋ ಚಾಲಕನಿಂದ ಹಿಡಿದು ರೈತರಾದಿಯಾಗಿ ಎಲ್ಲರಿಗೂ ಹಲವು ಸಮಸ್ಯೆಗಳಿವೆ. ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಮಲೆನಾಡಿನ ತರಕಾರಿ ಬೆಳೆಗಳಿಗೆ ಜಾಗತಿಕ ಮನ್ನಣೆ, ಹೈಕೋರ್ಟ್ ಪೀಠ, ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿ, ಕೃಷಿ ಸಮಸ್ಯೆ, ಕಲ್ಯಾಣ ಕರ್ನಾಟಕದಂತೆ ಮಲೆನಾಡು ಕರ್ನಾಟಕ ರೂಪಿಸುವ ಬಗ್ಗೆ, ಮಲೆನಾಡಿನಲ್ಲಿ ವಿಶೇಷ ಕೃಷಿ ವಲಯ ಸೇರಿದಂತೆ ಹಲವು ವಿಚಾರಗಳ ಹಕ್ಕೊತ್ತಾಯ ನಮ್ಮ ಸಂಘಟನೆಯ ಹೋರಾಟವಾಗಲಿದೆ ಎಂದರು.

ಈ ಹೋರಾಟಕ್ಕೆ ಜನ ಕಲ್ಯಾಣವೇ ಮುಖ್ಯ ವಿಷಯವಾಗಿದ್ದು, ಜನಸಾಮಾನ್ಯರಾಗಲಿ, ಯಾವುದೇ ರಾಜಕೀಯ ಪಕ್ಷದವರಾಗಲಿ ಮುಕ್ತವಾಗಿ ಬರಬಹುದು, ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತ ಹೋರಾಟ ಇದಾಗಿದೆ ಎಂದು ಹೇಳಿದರು.
ವಕೀಲ ಹಾಗೂ ಜನಪರ ಹೋರಾಟಗಾರ ಕೆ ಪಿ ಶ್ರೀಪಾಲ್, ಅನಿಲ್ ಹೊಸಕೊಪ್ಪ, ಫಾದರ್ ವೀರೇಶ್ ಮೊರಾಸ್, ನವೀನ್ ಕರುವಾನೆ, ಹಿಳ್ಳೋಡಿ ಕೃಷ್ಣಮೂರ್ತಿ, ಸುರೇಶ್ ಅರಸಾಳು, ಶ್ರೀಜಿತ್, ನಿವೃತ್ತ ಡಿಎಸ್ಪಿ ಪಿ.ಒ ಶಿವಕುಮಾರ್, ನಿವೃತ್ತ ಡಿಎಫ್ ಓ ರವಿಕುಮಾರ್ ಮತ್ತಿತರರಿದ್ದರು.

ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಮಸ್ಯೆಗಳು ಏಕರೂಪದಲ್ಲಿವೆ. ಮುಖ್ಯವಾಗಿ ಈ ಎಲ್ಲಾ ಜಿಲ್ಲೆಗಳಲ್ಲೂ ಭೂ ಹಕ್ಕು ಸಮಸ್ಯೆ ನಿರಂತರವಾಗಿದೆ. ಕಲ್ಯಾಣ ಕರ್ನಾಟದ ಸಮಸ್ಯೆಗಳ ಬಗ್ಗೆ ಸರ್ಕಾರಗಳು ಎಚ್ಚೆತ್ತುಕೊಂಡಂತೆ ನಮ್ಮ ಮಲೆನಾಡು, ಕರಾವಳಿ ಭಾಗದ ಸಮಸ್ಯೆಗಳನ್ನು ಬಗೆಹರಿಸಿ ಸ್ಪಂದಿಸುವಂತೆ ಮಾಡುವುದು ಈ ಹೋರಾಟದ ಗುರಿ

-ಸುಧೀರ್‌ಕುಮಾರ್ ಮುರೊಳ್ಳಿ

Ad Widget

Related posts

ನಾಯಕತ್ವ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿ : ಭೀಮಣ್ಣ ಕೆ.ನಾಯ್ಕ್

Malenadu Mirror Desk

ರಿಲ್ಯಾಕ್ಸ್ ಮೂಡಲ್ಲಿ ಬಿಎಸ್‌ವೈ, ಹಾಲಪ್ಪ ಭೇಟಿ

Malenadu Mirror Desk

ಕಂಟೈನ್ ಮೆಂಟ್ ಜೋನ್ ನಲ್ಲಿ ಕಟ್ಟುನಿಟ್ಟಿನ ನಿರ್ವಹಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.