Malenadu Mitra
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ಅರಳಸುರಳಿ:   ಕುಟುಂಬದ ನಾಲ್ವರ ಸಜೀವ ದಹನ ಪ್ರಕರಣ, ಮೆಗ್ಗಾನ್ ವೈದ್ಯ ಸೇರಿದಂತೆ ಮೂವರ ಮೇಲೆ ಎಫ್ ಐಆರ್

ಶಿವಮೊಗ್ಗ:   ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಬ್ರಾಹ್ಮಣ  ಕುಟುಂಬದ ನಾಲ್ವರ ಸಜೀವ ದಹನದ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಅ. ೮ ರಂದು ರಾಘವೇಂದ್ರ ಕೇಕುಡ, ಪತ್ನಿ ನಾಗರತ್ನ, ಮಕ್ಕಳಾದ ಶ್ರೀರಾಮ್  ಮತ್ತು ಭರತ್ ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನ ಮಾಡಿಕೊಂಡಿದ್ದರು. ಈ ಘಟನೆಯಲ್ಲಿ ರಾಘವೇಂದ್ರ ಕೇಕುಡ, ನಾಗರತ್ನ ಹಾಗೂ ಶ್ರೀರಾಮ್ ಸಾವನ್ನಪ್ಪಿದ್ದರು. ಎರಡು ದಿನಗಳ ಬಳಿಕ ಗಾಯಗೊಂಡಿದ್ದ ಭರತ್ ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು.
ಭರತ್ ಸಾವನ್ನಪ್ಪುವವರೆಗೂ ಪ್ರಕರಣವನ್ನ ಯುಡಿಆರ್  ದಾಖಲಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ಮೃತ ನಾಗರತ್ನಾ ಅವರ ಸಹೋದರ ನೀಡಿದ ಹೇಳಿಕೆಯ ಮೇಲೆ ಎಫ್ ಐಆರ್ ದಾಖಲಾಗಿದೆ. ಮೆಗ್ಗಾನ್ನಲ್ಲಿ ವೈದ್ಯರಾಗಿರುವ ಡಾ||ಸುಧೀಂದ್ರ,   ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಅವರ ನಾದಿನಿ ವಿನೋದಾ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಏನಾರ  ಕೊಪ್ಪ ತಾಲೂಕಿನ ಮೇಲಿನ ಪೇಟೆ ನಿವಾಸಿ ಮತ್ತು ನಾಗರತ್ನ ರಾಘವೇಂದ್ರ ಕೇಕುಡ ಅವರ ಕಿರಿಯ ಸಹೋದರ ತೇಜ್ ಪ್ರಕಾಶ್ ಅವರು ತಮ್ಮ ಅಕ್ಕ ನಾಗರತ್ನ, ಭಾವ ರಾಘವೇಂದ್ರ ಕೇಕುಡ, ಮಕ್ಕಳಾದ ಶ್ರೀರಾಮ ಮತ್ತು ಭರತ್ ಇವರ ಸಾವಿಗೆ ರಾಘವೇಂದ್ರ ಕೇಕುಡರ ಸಹೋದರರಾದ ಡಾ|| ಸುಧೀಂದ್ರ, ಕೃಷ್ಣಮೂರ್ತಿ ಹಾಗೂ ನಾದಿನಿ ವಿನೋದ ಕಾರಣ. ಅವರಿಂದಲೇ ಸಾವು ಸಂಭವಿಸಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.
ರಾಘವೇಂದ್ರ ಕೇಕುಡರಿಗೆ ಕೃಷ್ಣಮೂರ್ತಿ ಮಂಜುನಾಥ  ರಾಮಕೃಷ್ಣ, ಡಾ|| ಸುಧೀಂದ್ರ ಎಂಬ ನಾಲ್ವರು  ಸಹೋದರರಿದ್ದು ಇವರ ಪೈಕಿ ಮಂಜುನಾಥ ಪೌತಿದಾರರಾಗಿದ್ದು, ಇವರ ಹೆಂಡತಿ  ವಿನೋದಾ ಆಗಿದ್ದಾರೆ. ಇವರಿಗೆ ಜಮೀನಿಗೆ ಸಂಬಂಧಿಸಿದಂತೆ ಹಿಸ್ಸೆ ಯಾಗಿದ್ದು, ರಾಮಕೃಷ್ಣ ಕೇಕುಡ ಇವರು ಹಿಸ್ಸೆ ತೆಗೆದುಕೊಂಡು ಬೇರೆ ವಾಸವಾಗಿದ್ದರು.

ಉಳಿದ ಸಹೋದರರಾದ ಡಾ|| ಸುಧೀಂದ್ರ, ಮತ್ತು ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂದಿಸಿದಂತೆ ಜಿಪಿಎ ಮಾಡಿಕೊಂಡಿದ್ದರು. ರಾಘವೇಂದ್ರ ಕೇಕುಡ ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು, ಇವರ ಎರಡನೇ ಸಹೋದರ ಮಂಜುನಾಥ್ ಅವರ ಪತ್ನಿ ವಿನೋದಾ ಜಮೀನಿನ ಬಾಬ್ತಾಗಿ, ೧೦ ಲಕ್ಷ ರೂಪಾಯಿಗಳನ್ನು ರಾಘವೇಂದ್ರ ಕೇಕುಡರಿಂದ ಪಡೆದಿದ್ದರು, ಆದರೆ ಪಡೆದ ಹಣದ ಬಗ್ಗೆ ಪತ್ರ ನೊಂದಣಿಯಾಗಿರಲಿಲ್ಲ.


ಸುಮಾರು ೨ ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ  ಡಾ|| ಸುಧೀಂದ್ರ, ಕೃಷ್ಣ ಮೂರ್ತಿ,  ವಿನೋದಾ  ರಾಘವೇಂದ್ರರ ಕುಟುಂಬಕ್ಕೆ ಹಲವಾರು ಬೈದು ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಮಾನಸಿಕ ಹಿಂಸೆ ನೀಡಿದ್ದರು.
ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ, ಶಿವಮೊಗ್ಗದಿಂದ ಗುಂಡಾಗಳನ್ನು ಕರೆಯಿಸಿ ಮನೆಯಿಂದ ಹೊರ ಹಾಕಿಸುವುದಾಗಿ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು, ಈ ವಿಚಾರದಲ್ಲಿ, ರಾಘವೇಂದ್ರ ಕುಟುಂಬ ಅವರ ಬೆದರಿಕೆಗೆ ಮನನೊಂದು, ಮಾನಸಿಕ ಹಿಂಸೆಯನ್ನು ತಡೆಯಲಾಗದೆ ದಹನದ ಮೂಲಕ ಆತ್ಮಹತ್ಯೆ (ದೇಹ ತ್ಯಾಗ) ಮಾಡಿಕೊಂಡಿದ್ದಾರೆ ಎಂದು ತೇಜ್‌ಪ್ರಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.
ಅದ್ದರಿಂದ  ರಾಘವೇಂದ್ರ ಕುಟುಂಬ ವರ್ಗದವರ ಮರಣಕ್ಕೆ ಕಾರಣರಾದ  ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ|| ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್‌ನಲ್ಲಿ ವೈದ್ಯರಾಗಿದ್ದಾರೆ.ಕೃಷ್ಣಮೂರ್ತಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

Ad Widget

Related posts

ಕೋವಿಡ್ ಮೂರನೇ ಅಲೆ : ಭೀತಿಪಡುವ ಅಗತ್ಯವಿಲ್ಲ

Malenadu Mirror Desk

ಮತ ನೀಡುವ ಮೂಲಕ ಗೀತಾರ ಉಡಿತುಂಬಿ, ಹಾರನಹಳ್ಳಿಯ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಆಯನೂರು ಮಂಜುನಾಥ್‌ ಮನವಿ

Malenadu Mirror Desk

ದುರಾಡಳಿತ ಮಾಡಿದ ಸೊರಬ ಶಾಸಕರನ್ನು ಸೋಲಿಸಿ: ಮಧುಬಂಗಾರಪ್ಪ ಕರೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.