Malenadu Mitra
ರಾಜ್ಯ ಶಿವಮೊಗ್ಗ

ಪಠ್ಯದಲ್ಲಿ ಇಂಡಿಯಾ ಹೆಸರು ಬದಲಾವಣೆ: ಶಿಕ್ಷಣ ಸಚಿವ ಬೇಸರ

ಶಿವಮೊಗ್ಗ: ಶಾಲೆ ಪಠ್ಯದಲ್ಲಿ ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದು ಬದಲಿಸುವ ಎನ್ಸಿಇಆರ್‍ಟಿ ಸಮಿತಿ ಶಿಫಾರಸಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಇಂಡಿಯಾ,ಭಾರತ ಎನ್ನುವುದು ಸರಿಯಿತ್ತು.ಚುನಾವಣೆ ಬರುವ ಸಮಯಕ್ಕೆ ಈ ರೀತಿಯ ಸುದ್ದಿಗಳ ಲಗಾಮನ್ನು ಕೇಂದ್ರ ಸರ್ಕಾರ ಹಿಡಿಯುತ್ತಿದೆ. ಶಿಕ್ಷಣದಲ್ಲೂ ಕೇಸರಿಕರಣ ಮಾಡಲು ಹೊರಟಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಬದಿಗಿಡಬೇಕು ಎಂದರು.
ಏಕಾಏಕಿ ಈ ರೀತಿ ಚರ್ಚೆ ನಡೆಯುತ್ತಿದೆ. ಇದರಿಂದ ಹೊಟ್ಟೆ ತುಂಬುತ್ತೇನ್ರಿ. ಭಾರತವನ್ನು ಒಪ್ಪೋಣ,ಇಂಡಿಯಾವನ್ನು ಒಪ್ಪೋಣ. ಆದರೆ ಇಷ್ಟು ದಿನ ಬಂದಾಗಿದೆ. ಇದು ಆಗಬಾರದು. ಸಂಪ್ರದಾಯ ಇರಬೇಕು. ರಾಜ್ಯ ಶಿಕ್ಷಣ ನೀತಿ ಯಾಕೆ ಬೇಕು ಅಂದರೆ ಒಂದು ವ್ಯವಸ್ಥೆ. ನಮ್ಮ ಸಂಸ್ಕೃತಿ. ನಾವು ಮಾತೃಭಾಷೆ ಬಿಟ್ಟುಕೊಡಲ್ಲ ಎಂದರು.
ಮಕ್ಕಳಿಗೆ ಅವಶ್ಯಕತೆ ಇದ್ದರೆ ಸ್ವಾಗತಿಸುತ್ತೇನೆ. ಮಕ್ಕಳಿಗೆ ಗೊಂದಲ ಸೃಷ್ಟಿ ಮಾಡುತ್ತಿರುವುದು, ಧಾರ್ಮಿಕ ಬೇಧಭಾವ ತರುವುದು, ಸಮಾಜದಲ್ಲಿ ಅಸುರಕ್ಷತೆ ತರುವುದನ್ನು ದಿಕ್ಕರಿಸುತ್ತೇವೆ.ಮಕ್ಕಳು ಬೆಳೆಯುವವರಿಗೆ ಶುದ್ದವಾಗಿ ಬೆಳೆಸುವ ಮನೋಭಾವನೆಯನ್ನು ದೇವರು ಬಿಜೆಪಿಯವರಿಗೆ ಕಲಿಸಲಿ ಎಂದರು.
ಹುಲಿ ಉಗುರು ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನಿನ ಪರಿಜ್ಞಾನ ಇಟ್ಟುಕೊಳ್ಳಬೇಕು. ದೊಡ್ಡವರಾಗಲಿ ಚಿಕ್ಕವರಾಗಲಿ ಸೂಕ್ಷ್ಮವಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.
ಬಿಜೆಪಿಯವರು ಸರ್ಕಾರವನ್ನು ಟೀಕಿಸುವ ಮುಂಚೆ, ಮಾನ ಮಾರ್ಯಾದೆ ಇದ್ದರೆ ರಾಜ್ಯದ ಜಿಎಸ್‌ಟಿ ಪಾಲನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ. ಕಾವೇರಿ ವಿಚಾರ ಮಾತನಾಡಲ್ಲ,ಬರಗಾಲದಿಂದ ನಷ್ಟ ಪರಿಹಾರ ಕೊಡಿಸುವ ಬಗ್ಗೆ ಚಕಾರ ಎತ್ತಲ್ಲ, ಬಗರ್ ಹುಕುಂ ರೈತರ ಬಗ್ಗೆ ಮಾತನಾಡಲ್ಲ, ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಯಾಕೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Ad Widget

Related posts

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಮುಖ್ಯಮಂತ್ರಿ ನಿರ್ದೇಶನ: ಗೃಹ ಸಚಿವ ಆರಗ ಜ್ಞಾನೇಂದ್ರ

Malenadu Mirror Desk

ಡಾ.ಹೆಚ್.ಎಸ್.ಮೋಹನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Malenadu Mirror Desk

ಮಾರ್ಗಸೂಚಿ ಅನ್ವಯ ರಂಜಾನ್ ಆಚರಣೆ: ಚಿದಾನಂದ ವಟಾರೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.