ಶಿವಮೊಗ್ಗ: ಜಿಲ್ಲಾ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಮುಂದಿನ ತಿಂಗಳು ಡಿಸೆಂಬರ್ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸ್ವದೇಶಿ ಮೇಳ ಆಯೋಜನೆಗೊಂಡಿದ್ದು,ಈಗಾಗಲೇ ಮಳಿಗೆ ಹಾಕಲು ಬುಕ್ಕಿಂಗ್ ಆರಂಭಗೊಂಡಿದೆ.
ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ 250ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿವೆ. 1 ಲಕ್ಷಕ್ಕೂ ಹೆಚ್ಚು ವಿವಿಧ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ರೀತಿಯ ತರಬೇತಿಗಳು, ದೇಶೀಯ ಕ್ರೀಡೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಮೇಳದಲ್ಲಿ ಕೇಂದ್ರದ ಮಂತ್ರಿಗಳು, ರಾಜ್ಯದ ಪ್ರಮುಖ ಸ್ವಾಮೀಜಿಗಳು ಹಾಗೂ ರಾಜ್ಯದ ಮತ್ತು ಜಿಲ್ಲೆಯ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಮಳಿಗೆ ಹಾಕಲು ಆಸಕ್ತರು ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಲು ಕೋರುವಂತೆ ಸ್ವದೇಶಿ ಮೇಳದ ಸಂಯೋಜಕರಾದ ಡಾ ಧನಂಜಯ ಸರ್ಜಿ, ಸಂಚಾಲಕರಾದ ಡಿ. ಎಸ್. ಅರುಣ್ ಹಾಗೂ ಸಂಘಟಕರಾದ ಹರ್ಷ ಬಿ. ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.