ಶಿವಮೊಗ :ಆನೆ ದಾಳಿಯಿಂದ ಹಾನಿಗೊಳಾದ ರೈತರ ಜಮೀನುಗಳಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಭೇಟಿ ನೀಡಿ ಸ್ಥಳಳ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಮಂಜರಿಕೊಪ್ಪ, ಮಲೆ ಶಂಕರ ಸಂಪಿಗೆ ಹಳ್ಳ, ತಮ್ಮಡಿಹಳ್ಳಿ ಕೂಡಿ,ಎರೆಬೀಸು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು,ರೈತರ ಸಮಸ್ಯೆಗಳನ್ನು ಆಲಿಸಿದರು.
ಜಿಲ್ಲೆಯಲ್ಲಿ ಬರವಿದೆ.ವಾಡಿಕೆಯಂತೆ ಮಳೆಯಾಗಿಲ್ಲ,ಬಂದ ಅಲ್ಪಸ್ವಲ್ಪ ಮಳೆಯಲ್ಲಿ ರೈತರು ಬೆಳೆಯನ್ನು ಬೆಳೆದಿದ್ದಾರೆ.ಬಂದ ಬೆಳೆಗಳನ್ನು ಆನೆಗಳ ಹಿಂಡು ಹಾನಿ ಮಾಡಿದರೇ ರೈತರೇನು ಮಾಡಬೇಕು ಎಂದು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಆನೆಗಳ ದಾಳಿಯಿಂದ ರೈತರ ಬೆಳೆಗಳು ಹಾಳಾಗಿದ್ದು ತುರ್ತಾಗಿ ಪರಿಹಾರದ ವ್ಯವಸ್ಥೆ ಮಾಡುವಂತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ಮುಖಂಡರಾದ ಬಸಪ್ಪ ಗೌಡರು,ಕೆರೋಡಿ ನಾಗರಾಜ್,ನಾರಾಯಣ ಗೌಡ, ಪ್ರದೀಪ್ ಎಸ್ ಹೆಬ್ಬೂರ್, ಮತ್ತಿತರರರು ಇದ್ದರು.
ಆನೆ ದಾಳಿಯಿಂದ ಪುರದಾಳು, ಕೌಲಾಪುರ,ಸಂಪಿಗೆಹಳ್ಳ, ಮಂಜರಿಕೊಪ್ಪ, ಮಲೇಶಂಕರ, ಏರೆಬಿಸು, ಕೂಣೆ ಹೊಸೂರು, ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ.ಬೆಳೆ ನಷ್ಟ ದಿಂದ ರೈತರು ಅತೀವ ತೊಂದರೆ ಪಡುತ್ತಿದ್ದು ಕೂಡಲೇ ಸರ್ಕಾರ ಮತ್ತು ಆರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು.
-ಪ್ರದೀಪ್ ಎಸ್ ಹೆಬ್ಬೂರ್,ಉಪಾಧ್ಯಕ್ಷರು, ಪುರದಾಳು ಗ್ರಾಮ ಪಂಚಾಯತ್