Malenadu Mitra
ರಾಜ್ಯ ಶಿವಮೊಗ್ಗ

ಜಿಲ್ಲಾ ಮಟ್ಟದ ಕರೋಕೆ ಸ್ಪರ್ಧೆ

ಶಿವಮೊಗ್ಗ: ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ  ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರೋಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘದ ನಿರ್ದೇಶಕರಾದ ರಾಮಚಂದ್ರ ಗುಣಾರಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಈ ಸ್ಪರ್ಧೆಯಲ್ಲಿ   ಜಿಲ್ಲೆಯ ಆಸಕ್ತ ಹಾಗೂ ಹವ್ಯಾಸಿ ಗಾಯಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈ ಸ್ಪರ್ಧೆಯು ಅರ್ಹತಾ ಸುತ್ತು ಒಳಗೊಂಡಿದ್ದು, ಇದರಲ್ಲಿ ಆಯ್ಕೆಯಾಗುವ ಸ್ಪರ್ಧಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯಾಗದವರು ಸ್ಪರ್ಧೆಯಿಂದ ನಿರ್ಗಮಿಸುತ್ತಾರೆ. ವಿವಿಧ ಹಂತಗಳ ಸ್ಪರ್ಧೆಯು ನಡೆಯಲಿದ್ದು ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ. ನಂತರ ಈ ಪೈಕಿ ಅಂತಿಮವಾಗಿ ಆಯ್ಕೆಯಾಗುವ ಸ್ಪರ್ಧಿಗಳ ನಡುವೆ ಫೈನಲ್ ಹಣಾಹಣಿ ನಡೆಯಲಿದೆ ಎಂದರು.
ಹೆಸರು  ನೋಂದಾವಣಿಗೆ ಡಿಸೆಂಬರ್ ೧೪ ,೨೦೨೩ ಕೊನೆಯ ದಿನವಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ   ೧೦೦ ರೂಪಾಯಿಗಳ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.  ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ೨೦ ರಿಂದ ೩೫ ರ ವಯೋಮಿತಿ ಹಾಗೂ  ೩೬ ರಿಂದ ೫೫ ರ ವಯೋಮಿತಿಯವರ ನಡುವೆ ಸ್ಪರ್ಧೆ ನಡೆಯಲಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಲಿಚ್ಚಿಸುವವರು ನಗರದ ಆರ್‌ಟಿಓ ರಸ್ತೆಯಲ್ಲಿರುವ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ಗೆ  ನೇರವಾಗಿ ಭೇಟಿಯಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅಥವಾ ಹೊನ್ನಾಳಿ ಚಂದ್ರಶೇಖರ್ : ೯೮೪೪೫೧೮೮೬೬ , ರಾಮಚಂದ್ರ ಗುಣಾರಿ ೯೪೪೮೦೯೩೩೬೨ , ಸಂತೋಷ್- ೯೬೩೨೫೪೧೪೦೮  ಇವರನ್ನ ವಾಟ್ಸ್ಯಾಪ್ ಮೆಸೇಜ್ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ  ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಗೋಪಾಲಯಡೆಗೆರೆ,ಪ್ರೆಸ್‌ಟ್ರಸ್ಟ್‌ನ ಜೇಸುದಾಸ್ ಇದ್ದರು.

Ad Widget

Related posts

ಕೊರೊನ ಸಂಕಟ ನಿವಾರಣೆಗೆ ಸರಕಾರ ಸರ್ವಪ್ರಯತ್ನ: ಕುಮಾರ್ ಬಂಗಾರಪ್ಪ

Malenadu Mirror Desk

ಶಿವಮೊಗ್ಗ ಮಾರಿಕಾಂಬೆ ಜಾತ್ರೆಗೆ ಅದ್ದೂರಿ ಚಾಲನೆ, ದೇವಿ ದರ್ಶನಕ್ಕೆ ನೆರೆದ ಭಕ್ತ ಸಾಗರ

Malenadu Mirror Desk

ಮಲೆನಾಡಿನಲ್ಲಿ ಹಿಜಾಬ್- ಕೇಸರಿ ಶಾಲ್ ವಿವಾದ ತಾರಕಕ್ಕೆ ಕಲ್ಲುತೂರಾಟ, ಕಾಲೇಜಿಗೆ ರಜೆ: ನಿಷೇಧಾಜ್ಞೆ ಹೇರಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.