Malenadu Mitra
ರಾಜ್ಯ

ಕಟ್ದಡದಿಂದ ಜಿಗಿದು ಆದಿಚುಂಚನಗಿರಿ ಕಾಲೇಜು ವಿದ್ಯಾರ್ಥಿನಿ ಸಾವು,ಪೋಷಕರ ಆಕ್ರಂದನ

ಶಿವಮೊಗ್ಗ :ನಗರದ   ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ದ್ವಿತೀಯ ಪಿಯುಸಿ ಓದುತ್ತಿದ್ದ ಮೇಘಶ್ರೀ(೧೮) ಮೃತ ವಿದ್ಯಾರ್ಥಿನಿ.ಮೃತ ಮೇಘಶ್ರೀ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ ಓಂಕಾರಯ್ಯ ಎಂಬುವರ ಪುತ್ರಿ. ಆದಿಚುಂಚನಗಿರಿ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಡಿ.೦೫ರಂದು  ಬಯಾಲಾಜಿ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ನಡುವೆ ವಾಶ್ ರೂಂಗೆ ಹೋಗುವುದಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಸದ್ಯ ಮೇಘಶ್ರೀ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ಮಗಳ ಸಾವಿಗೆ ವಾರ್ಡನ್, ಕಾಲೇಜು ಆಡಳಿತ ಮಂಡಳಿ ಕಾರಣ:
ಮಗಳು ಮೇಘಶ್ರಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಷಕರು ಆಗಮಿಸಿದರು. ಈ ವೇಳೆ ಕಾಲೇಜು ಸಿಬ್ಬಂದಿ ಪೋಷಕರನ್ನು ಕಾಲೇಜು ಒಳಗಡೆ ಬಿಡಲಿಲ್ಲ. ಇದರಿಂದ ಕೋಪಗೊಂಡ ಮೇಘಶ್ರೀ ತಂದೆ ಓಂಕಾರಯ್ಯ ಕಾಲೇಜಿನ ಗೇಟ್ ಮುಂಭಾಗ ಆಕ್ರೋಶ ಹೊರಹಾಕಿದರು. ಪೋಷಕರ ಆಕ್ರೋಶದ ಬಳಿಕ ಕಾಲೇಜು ಸಿಬ್ಬಂದಿ ಗೇಟ್ ಓಪನ್ ಮಾಡಿದರು. ಒಳ ಹೋದ ಪೋಷಕರು ಪ್ರಾಂಶುಪಾಲರ ಚೇಂಬರ್ ಹಾಗೂ ಕಾಲೇಜು ಆವರಣದಲ್ಲಿ ರೋದಿಸಿದರು. ಈ ವೇಳೆ ಮಗಳ ಸಾವಿಗೆ ವಾರ್ಡನ್, ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿದರು. ನಾಲ್ಕೂವರೆ ಲಕ್ಷ ಫೀಸ್ ಕಟ್ಟಿದ್ದೇವೆ ಎಂದು ಅಳಲು ತೋಡಿಕೊಂಡರು.
 ಸ್ಥಳಕ್ಕೆ ಡಿವೈಎಸ್‌ಪಿ ಸುರೇಶ್ ಭೇಟಿ ನೀಡಿದರು. ಈ ವೇಳೆ ಪೋಷಕರು ಡಿವೈಎಸ್‌ಪಿ ಅವರ ಜೊತೆ ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿ ಬಿಗುವಿನ ವಾತವರಣವಿದ್ದು,  ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.ವಿದ್ಯಾರ್ಥಿನಿ ಮೇಘಶ್ರೀ ಹೋಮ್ ಸಿಕ್‌ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೆಸೆಟ್ ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಪೆಸಿಟ್ ಕಾಲೇಜು ಕಟ್ಟಡ ಮೇಲಿನಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ರಚನಾ (೨೧)ಗಾಯಗೊಂಡ ವಿದ್ಯಾರ್ಥಿನಿ. ರಚನಾ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮೂಲ ದವರಾಗಿದ್ದು, ಪೆಸಿಟ್ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾರೆ. ವಿದ್ಯಾರ್ಥಿನಿ ರಚನಾ ಅವರಿಗೆ ಆರೋಗ್ಯ ಸಮಸ್ಯೆಯಾಗಿ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಡಿ.೦೫ ಬೆಳಿಗ್ಗೆ ೧೦ ಗಂಟೆಗೆ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದರು. ಸದ್ಯ ರಚನಾ ಅವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ರಚನಾಗೆ ಆಪರೇಶನ್ ಮಾಡಿದ್ದು, ಸದ್ಯ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ. 

Ad Widget

Related posts

9ನೇ ದಿನಕ್ಕೆ ಕಾಲಿಟ್ಟ ಭೂ ಹಕ್ಕಿನ ಹೋರಾಟ : ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೀಟಿಂಗ್ ಫಿಕ್ಸ್

Malenadu Mirror Desk

ಕೇಂದ್ರ ಸರಕಾರದ ಜನವಿರೋಧಿ ಖಂಡಿಸಿ ಉಪವಾಸ ಸತ್ಯಾಗ್ರಹ

Malenadu Mirror Desk

ರಾಜ್ಯದ ಎಲ್ಲಾ ಕ್ವಾರಿಗಳ ಸರ್ವೇಗೆ ಹೈಕೋರ್ಟ್ ಸೂಚನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.