ಶಿವಮೊಗ್ಗ: ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್ ಸಿಂಗ್ ಅಧಿಕಾರ ಸ್ವೀಕರಿಸಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್, ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರ ಕಲ್ಯಾಣವನ್ನೇ ಮರೆತಿದೆ. ಗ್ಯಾರಂಟಿ ಯೋಜನೆಗಳೆಲ್ಲ ವಿಫಲವಾಗಿವೆ. ಅಧಿಕಾರಿಗಳು ಕೂಡ ಕೆಲಸ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಬಡವರಿಗೆ ಒಂದು ಮನೆಯೂ ರ್ಮಣ ವಾಗಿಲ್ಲ. ಆಶ್ರಯ ಮನೆಗಾಗಿ ಹಣ ಕಟ್ಟಿ ಕಾಯುತ್ತಿರುವವರು ಸಂಕಟ ಅನುಭವಿಸುತ್ತಿದ್ದಾರೆ ಎಂದರು.
ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಆದರೆ, ಭಯೋತ್ಪಾದ ಕರಿಗೆ ಶಿಕ್ಷೆ ಕೊಡಿಸಬೇಕಾದುದು ಸರ್ಕಾರದ ಕೆಲಸವಾಗಿದೆ. ಸರ್ಕಾರ ತಿದ್ದುವ ಕೆಲಸ ವಿರೋಧ ಪಕ್ಷಗಳ ದ್ದು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಮಾತನಾಡಿಸುವಂತೆಯೇ ಇಲ್ಲ. ಯಾವ ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಿಗಮ- ಮಂಡಳಿ ಗಳತ್ತ ನೋಡುತ್ತಿದ್ದಾರೆ ವಿನಃ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದರು.
ಪಾಲಿಕೆ ಅಧಿಕಾರಿಗಳು ತುಂಗಾ ನದಿಗೆ ಚರಂಡಿ ನೀರು ಸೇರುತ್ತಿದ್ದರೂ ಕಣ್ಮುಚ್ಚಿ ಕುಳಿತು ಜನರಿಗೆ ಶುದ್ಧ ನೀರು ಪೂರೈಸುವಲ್ಲಿ ವಿಫಲರಾಗಿದ್ದಾರೆ. ನಗರದಲ್ಲಿ ಹಲವಾರು ಕಾಯಿಲೆ ಗಳಿಂದ ಜನ ನರಳುತ್ತಿದ್ದರೂ ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಇತ್ತ ಕಡೆ ಗಮನಹರಿಸುತ್ತಿಲ್ಲ. ಇದರ ವಿರುದ್ಧ ನಗರ ಜೆಡಿಎಸ್ ಹೋರಾಟ ನಡೆಸಬೇಕಾಗಿದೆ. ಹಾಗೂ ಬಡವರ ಶೋಷಿತರ ಪರ ಧ್ವ ಎತ್ತಬೇಕು ಎಂದು ಕರೆ ಡಿದರು.
ದೀಪಕ್ ಸಿಂಗ್ ನಗರ ಅಧ್ಯಕ್ಷ ರಾಗಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಅವರ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಅರಿತುಕೊಂಡು ಅವರ ಪರವಾಗಿ ಧ್ವನಿ ಎತ್ತುತ್ತೇವೆ. ಜೆಡಿಎಸ್ ಪಕ್ಷವೇ ಬಡವರ ಉದ್ಧಾರ ಮಾಡುವ ಪಕ್ಷವಾಗಿದೆ. ನಗರದಲ್ಲಿ ಮತ್ತಷ್ಟು ಸಂಘಟನೆ ಮಾಡಿಪಕ್ಷ ಗಟ್ಟಿಗೊಳಿಸುತ್ತೇವೆ ಎಂದರಅಧಿಕಾರ ಸ್ವೀಕರಿಸಿದ ದೀಪಕ್ ಸಿಂಗ್ ಮಾತನಾಡಿದರು. ಕೆ.ಎನ್. ರಾಮಕೃಷ್ಣ, ಗೋವಿಂ ದಪ್ಪ, ಬೊಮ್ಮನಕಟ್ಟೆ ಮಂಜುನಾಥ್, ಸಿದ್ದಪ್ಪ, ಗೀತಾ ಸತೀಶ್, ಎಸ್.ವಿ. ರಾಜಮ್ಮ, ಪುಷ್ಪಾ, ನಾಗೇಶ್, ರೇಷ್ಮಾ, ಅಬ್ದುಲ್ ವಾಜಿದ್, ಹೆಚ್.ಎನ್. ಸಂಗಯ್ಯ, ಉಷಾ ನಾಯಕ್, ಆಯನೂರು ಶಿವಾ ನಾಯ್ಕ್, ರಮೇಶ್ ನಾಯಕ್, ಶಾಮು ಇತರರು ಉಪಸ್ಥಿತರಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿನಯ್ ಸ್ವಾಗತಿಸಿ, ನರಸಿಂಹ ಗಂಧದಮನೆ ರೂಪಿಸಿದರು.