Malenadu Mitra
ರಾಜ್ಯ ಶಿವಮೊಗ್ಗ

ಕರೋಕೆ ಗಾಯನ ಸ್ಪರ್ಧೆ,ಶಿವಮೊಗ್ಗ ಪ್ರೆಸ್ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜನೆ, ಜಿಲ್ಲೆಯ ವಿವಿಧೆಡೆಯಿಂದ 100 ಕ್ಕೂ ಹೆಚ್ಚು ಸ್ಪರ್ಧಿಗಳ ನೋಂದಣಿ

ಶಿವಮೊಗ್ಗ :ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆಯಲಿರುವ ಕರೋಕೆ ಸ್ಪರ್ಧೆಗೆ 100ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಂಘದ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಚಾಲಕ ರಾಮಚಂದ್ರ ಗುಣಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಎರಡು ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, 36 ರಿಂದ 55 ರ ವಯೋಮಿತಿಯವರ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಗಳು ಡಿ.22ರಂದು ಮಧ್ಯಾಹ್ನ 2ಕ್ಕೆ ಪ್ರಸ್‌ಟ್ರಸ್ಟ್ ನೂತನ ಸಂಭಾಗಣದಲ್ಲಿ ನಡೆಯಲಿದೆ. 20 ರಿಂದ 35 ರ ವಯೋಮಿತಿಯ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಗಳು ಡಿ.23 ರಂದು ಮಧ್ಯಾಹ್ನ 2ಕ್ಕೆ ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಈ ಎರಡು ವಿಭಾಗದದ 20ರಿಂದ 25 ಸ್ಪರ್ಧೆಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿ ಸ್ಪರ್ಧಿಗೆ ಹಾಡುಗಾರಿಕೆಗೆ 3ರಿಂದ 4 ನಿಮಿಷ ಕಾಲಾವಕಾಶವಿರುತ್ತದೆ. ಅಭ್ಯರ್ಥಿಯು 2 ಹಾಡುಗಳಿಗೆ ಸಿದ್ಧರಾಗಿ ಬರತಕ್ಕದ್ದು. ಸ್ಪರ್ಧಿಯು ಹಾಡಬಯಸುವ ಹಾಡಿನ ಕರೋಕೆ ಆಡಿಯೋ ಫೈಲನ್ನು ಪೆನ್ ಡ್ರೈವ್ ಅಥವಾ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಬರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪಯಣ ವೆಚ್ಚ, ಊಟ, ವಸತಿ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸತಕ್ಕದ್ದು. ಕಾರ್ಯಕ್ರಮ ವೇಳೆ ಹೈ ಟೀ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಹಾಡುಗಾರರಿಗೆ ಮುಂದಿನ ಸುತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅರ್ಹತಾ ಸುತ್ತಿನಲ್ಲಿ ಮೂವರು ತೀರ್ಪುಗಾರರು ಪಾಲ್ಗೊಳ್ಳುವರು.
ಆಯ್ಕೆ ಸುತ್ತುಗಳಲ್ಲಿ ಪ್ರತಿ ಸುತ್ತಿಗೆ ಒಬ್ಬ ಅತಿಥಿಯನ್ನು ಆಹ್ವಾನಿಸಲಾಗುವುದು. ಒಟ್ಟು 8 ಸುತ್ತುಗಳು ನಡೆಯುತ್ತವೆ. ಎಲ್ಲಾ ಸುತ್ತುಗಳು ವಿಷಯಾಧಾರಿತ ಸುತ್ತುಗಳಾಗಿರುತ್ತವೆ. ಈ ಸುತ್ತುಗಳಲ್ಲಿ ತೀರ್ಪುಗಾರರೇ ಮುಂಚಿತವಾಗಿ ಹಾಡುಗಳನ್ನು ಸೂಚಿಸುತ್ತಾರೆ. ಅಭ್ಯರ್ಥಿಗಳು ಈ ಹಾಡುಗಳಿಗೆ ಸಿದ್ಧರಿರಬೇಕು. ಉತ್ತಮ ಕಂಠ, ಸ್ವರ, ಲಯ ಹಾಗೂ ತಾಳಗಳನ್ನು ಗಮನಿಸಲಾಗುವುದು. ಹೊರಊರಿನಿಂದ ಬರುವ ಗಾಯಕರಿಗೆ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸ್ಪರ್ಧೆಯ ಹಾಡಿನ ರೆಕಾರ್ಡ್‌ಗಳನ್ನು ವಾರದಲ್ಲಿ ಒಂದು ದಿನ ಸ್ಥಳೀಯ ಕೇಬಲ್ ಹಾಗೂ ಡಿಜಿಟಲ್ ವಾಹಿನಿಗಳಾದ ಕನ್ನಡ ಮೀಡಿಯಂ 24*7 ಚಾನಲ್ ಹಾಗೂ ನಮ್ಮ ಶಿವಮೊಗ್ಗ ನ್ಯೂಸ್ ಚಾನಲ್ ನಲ್ಲಿ ಹಾಡುಗಳನ್ನು ಪ್ರಸಾರ ಪಡಿಸಲಾಗುವುದು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ವೇದಿಕೆ ಕಾರ್ಯಕ್ರಮ ಇರುತ್ತದೆ. ವಿಜೇತರಿಗೆ ನಗದು ಪುರಸ್ಕಾರ, ಟ್ರೋಫಿ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಖಜಾಂಚಿ ಜೇಸುದಾಸ್ ಇದ್ದರು.

ಆಯ್ಕೆ ಸುತ್ತುಗಳಲ್ಲಿ ಪ್ರತಿ ಸುತ್ತಿಗೆ ಒಬ್ಬ ಅತಿಥಿಯನ್ನು ಆಹ್ವಾನಿಸಲಾಗುವುದು. ಒಟ್ಟು 8 ಸುತ್ತುಗಳು ನಡೆಯುತ್ತವೆ. ಎಲ್ಲಾ ಸುತ್ತುಗಳು ವಿಷಯಾಧಾರಿತ ಸುತ್ತುಗಳಾಗಿರುತ್ತವೆ. ಈ ಸುತ್ತುಗಳಲ್ಲಿ ತೀರ್ಪುಗಾರರೇ ಮುಂಚಿತವಾಗಿ ಹಾಡುಗಳನ್ನು ಸೂಚಿಸುತ್ತಾರೆ. ಅಭ್ಯರ್ಥಿಗಳು ಈ ಹಾಡುಗಳಿಗೆ ಸಿದ್ಧರಿರಬೇಕು. ಉತ್ತಮ ಕಂಠ, ಸ್ವರ, ಲಯ ಹಾಗೂ ತಾಳಗಳನ್ನು ಗಮನಿಸಲಾಗುವುದು. ಹೊರಊರಿನಿಂದ ಬರುವ ಗಾಯಕರಿಗೆ ಆಧ್ಯತೆ ನೀಡಲಾಗುವುದು

ರಾಮಚಂದ್ರ ಗುಣಾರಿ

Ad Widget

Related posts

ಕುಮಾರ್ ಬಂಗಾರಪ್ಪ ಹುಟ್ಟುಹಬ್ಬ, ಅಭಿಮಾನಿಗಳಿಂದ ಶುಭಾಶಯ

Malenadu Mirror Desk

ವಸತಿಗೃಹಗಳಿಗೆ ಮೂಲಸೌಲಭ್ಯ ಕಲ್ಪಿಸಲು 7.61ಕೋಟಿ ರೂ. ಕ್ರಿಯಾ ಯೋಜನೆ: ಸಚಿವ ಕೆ.ಎಸ್.ಈಶ್ವರಪ್ಪ

Malenadu Mirror Desk

ಯತ್ನಾಳ್ ಗಿಣಿ ಶಾಸ್ತ್ರಕ್ಕೆ ಅವರ ಪಕ್ಷದಲ್ಲೇ ಮನ್ನಣೆ ಇಲ್ಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.