Malenadu Mitra
ರಾಜ್ಯ ಶಿವಮೊಗ್ಗ

ಕಲಗೋಡು ರತ್ನಾಕರ್‌ಗೆ ಪ್ರಶಸ್ತಿ ಗರಿ, ನಜೀರ್ ಸಾಬ್ ತವರೂರಲ್ಲಿ ಪಂಚಾಯತ್ ರಾಜ್ ಸೇವೆಗೆ ಸಂದ ಗೌರವ

ಶಿವಮೊಗ್ಗ,ಡಿ.೨೫: ಕಲಗೋಡು ರತ್ನಾಕರ್ ಎಂಬುದು ಶಿವಮೊಗ್ಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಪ್ರಮುಖ ಹೆಸರು. ರಾಜಕೀಯದಲ್ಲಿ ಅಜಾತ ಶತ್ರು ಎಂದೇ ಗುರುತಿಸಿಕೊಂಡಿರುವ ಕಲಗೋಡು ರತ್ನಾಕರ್ ಪಂಚಾಯತ್ ರಾಜ್ ವ್ಯವಸ್ಥೆಯ ಮೂರೂ ಹಂತದಲ್ಲಿ ಜನ ಸೇವೇ ಮಾಡಿ ಸೈ ಎನಿಸಿಕೊಂಡವರು. ಗ್ರಾಮ ಪಂಚಾಯಿತಿ ಸದಸ್ಯರಾಗಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಅವರು ಮಾಡಿದ ಅವಿರತ ಸೇವೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿನ ಆಡಳಿತವನ್ನು ಆಳವಾಗಿ ಬಲ್ಲವರಾಗಿದ್ದಾರೆ. ಆಡಲಿತ ವ್ಯವಸ್ಥೆಯಲ್ಲಿ ಬೇರು ಮಟ್ಟದಿಂದ ಜನ ಮಿಡಿತ ಅರಿತ  ಸಾರ್ಥಕ ಜನ ಸೇವಕನಿಗೆ ಡಾ.ಚಿಕ್ಕಕೋಮಾರಇಗೌಡ ದತ್ತಿ ಪ್ರಶಸ್ತಿ ಸಂದಿರುವುದು ಸಾಧನೆಯ ಶಿಖರಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.
ಅಬ್ದುಲ್ ನಜೀರ್ ಸಾಬ್ ಅವರ ತವರು ಜಿಲ್ಲೆ ಚಾಮರಾಜನಗರದಲ್ಲಿ ಅವರ ಜನ್ಮದಿನದ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಡಿ.೨೫ ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಪಂಚಾಯತ್ ರಾಜ್ ಪರಿಷತ್, ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ,ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ೩೪ ವರ್ಷಗಳ ಕಾಲ ಕಲಗೋಡು ರತ್ನಾಕರ್ ಅವರು ಮಾಡಿರುವ ಸೇವೆ ಗುರುತಿಸಿ ದತ್ತಿ ಪುರಸ್ಕಾರ ನೀಡಿ ಸಮ್ಮಾನಿಸಿವೆ.  ಮಾಜಿ ಸಂಸದರಾದ ಸಿ ನಾರಾಯಣ ಸ್ವಾಮಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕ ಡಿ.ಆರ್.ಪಾಟೀಲ್, ವಿ.ವೈ ಘೋರ್ಪಡೆ ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಭಾಗಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು.


ಕಲಗೋಡು ರಾಜಕೀಯ ಹಾದಿ :
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಯಳಗಲ್ಲು ಗ್ರಾಮದ ಯೋಗೇಂದ್ರ ರಾವ್ ಮತ್ತು ಶ್ರೀಮತಿ ಪದ್ಮಾವತಿ ದಂಪತಿ ಪುತ್ರರಾದ ಕಲಗೋಡು ರತ್ನಾಕರ್ ಜನಿಸಿದ್ದು,೧೯೬೨ರ ಜೂನ್-೩೦ ರಂದು.
  ಪ್ರಾಥಮಿಕ ವಿಧ್ಯಾಭ್ಯಾಸ ವನ್ನು ಯಳಗಲ್ಲು ಹಾಗೂ ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿರುತ್ತಾರೆ.  ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ
ಪಡೆದು, ಸಾಗರದ ಎಲ್.ಬಿ.ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ.   ೧೯೮೭ ರಲ್ಲಿ ಕೋಡೂರು ಮಂಡಲ್ ಪಂಚಾಯಿತಿಗೆ ಯಳಗಲ್ಲು ಕ್ಷೇತ್ರದಿಂದ ಮೊದಲ ಬಾರಿ ಆಯ್ಕೆಯಾದ ರತ್ನಾಕರ್,
 ೧೯೮೭  ರಿಂದ ೧೯೯೨ ರವರೆಗೆ ಉಪ-ಪ್ರಧಾನರಾಗಿ ಜನ ಮನ್ನಣೆಗಳಿಸಿದರು. ಸಮಾಜವಾದಿಗಳ ಕುಟುಂಬದಿಂದ ಬಂದ ಇವರು ಕಾಂಗ್ರೆಸ್‌ನ ಕಟ್ಟಾಳು. ಬೇಕಾದಷ್ಟು ಅವಕಾಶಗಳು ಹುಡುಕಿ ಬಂದರೂ, ಅನ್ಯ ಪಕ್ಷಗಳತ್ತ ಹೋಗದೆ ಕಾಂಗ್ರೆಸ್ ನಿಷ್ಟೆ ಮೆರೆದವರು.  ೧೯೯೫ ರಲ್ಲಿ ಹೊಸನಗರ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಆಶ್ರಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಸ್ಥಳೀಯ ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿದ್ದಾರೆ.
ರಿಂದ ೨೦೨೧ ರವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತಿಗೆ ಸತತವಾಗಿ ಹೊಸನಗರದ ಕಸಬಾ ಹಾಗೂ ರಿಪ್ಪನ್ ಪೇಟೆ
ಕ್ಷೇತ್ರದಿಂದ ೪ ಬಾರಿ  ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುವ  ಸಾಮರ್ಥ್ಯ ಹೊಂದಿದ್ದಾರೆ.  ೨೦೦೦ ರಿಂದ ೨೦೦೨ ರವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಹಾಗೂ ೨೦೧೪ ರಿಂದ ೨೦೧೫
ರವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
  ಹಾಲಿ ಕರ್ನಾಟಕ ಪ್ರದೇಶ ಕಾಂಗ್ರಸ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಜನಸೇವೆಗಾಗಿ ಹತ್ತಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಕಲಗೋಡು ರತ್ನಾಕರ್‌೩೪ ವರ್ಷಗಳ ರಾಜಕೀಯ ಜೀವನದಲ್ಲಿ ೬ ಬಾರಿ ಚುನಾಯಿತ ಪ್ರತಿನಿಧಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಆಡಳಿತದಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಕಲಗೋಡು ರತ್ನಾಕರ್ ಮಾಡಿರುವ ಸೇವೆ ಅನನ್ಯವಾದುದು. ಅಪಾರವಾದ ರಾಜಕೀಯ ಅನುಭವ ಮತ್ತು ಪಕ್ಷ ನಿಷ್ಠೆಯಿಂದ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ. ತಳಮಟ್ಟದ ಜನಸೇವಕನಿಂದ ನಜೀರ್ ಸಾಬ್ ತವರಿನಲ್ಲಿ ಅವರ ಜನ್ಮದಿನದ ಅಂಗವಾಗಿ ನೀಡಿರುವ ಪ್ರಶಸ್ತಿ ಜನ ಸೇವೆಗೆ ಅವರಿಗೆ ಇನ್ನಷ್ಟು ಸ್ಫೂರ್ತಿ ನೀಡಲಿ.

ರಾಜಕೀಯದಲ್ಲಿ ತಳಮಟ್ಟದ ಅನುಭವ ಇದೆ. ಪ್ರಶಸ್ತಿ ಸಿಕ್ಕಿರುವುದು ಸಂತಸವಾಗಿದೆ. ಈ ಕೀರ್ತಿ ಎಲ್ಲವೂ ನನ್ನನ್ನು ಗೆಲ್ಲಿಸಿದ ಜನರು, ರಾಜಕೀಯವಾಗಿ ಬೆಳೆಸಿದ ನಾಯಕರಿಗೆ ಸಲ್ಲಬೇಕು. ಸೇವೆ ಗುರುತಿಸಿ ಗೌರವಿಸಿರುವುದು ಮತ್ತಷ್ಟು ಜನ ಸೇವೆ ಮಾಡಲು ಸ್ಫೂರ್ತಿ ನೀಡಿದೆ

ಕಲಗೋಡು ರತ್ನಾಕರ್‌

Ad Widget

Related posts

ಕಾಡಾನೆ ಕಾಡಿಗಟ್ಟುವ ಕಾರ್ಯ ಯಶಸ್ವಿ

Malenadu Mirror Desk

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Malenadu Mirror Desk

ಕುವೆಂಪು ವಿವಿ: ಜುಲೈ 26ರಿಂದ ಆಫ್‍ಲೈನ್ ತರಗತಿಗಳು ಪುನರಾರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.