Malenadu Mitra
ರಾಜ್ಯ ಶಿವಮೊಗ್ಗ

ರಾಗಿಗುಡ್ಡದಲ್ಲಿ ಸೌಹಾರ್ದ ಕ್ರಿಕೆಟ್‌, ಸರ್ವಧರ್ಮದ ಟೀಮ್‌, ಪೊಲೀಸರ ಕಾರ್ಯಕ್ಕೆ ಪ್ರಶಂಸೆ

ಶಿವಮೊಗ್ಗ,: ಗಣಪತಿ ಹಬ್ಬದ ಸಂದರ್ಭ ನಡೆದಿದ್ದ ಕಲ್ಲುತೂರಾಟದ ಕಾರಣಕ್ಕೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ನಗರದ ರಾಗಿಗುಡ್ಡದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಸೌಹಾರ್ದ ಕ್ರಿಕೆಟ್‌ ಪಂದ್ಯ ನಡೆಸುವ ಮೂಲಕ ಮಾದರಿ ಕೆಲಸ ಮಾಡಿದೆ.
ಬುಧವಾರ ನಡೆದ ಈ ಪಂದ್ಯಾವಳಿಯಲ್ಲಿ ಪ್ರತಿ ತಂಡದಲ್ಲಿ ಸರ್ವಧರ್ಮಗಳನ್ನು ಪ್ರತಿನಿಧಿಸುವ ಯುವಕರನ್ನು ಸೇರಿಸಿಕೊಳ್ಳಲಾಗಿತ್ತು. ಇಷ್ಟುಮಾತ್ರವಲ್ಲದೆ, ಪ್ರತಿ ತಂಡದಲ್ಲಿ ತಲಾ ಒಬ್ಬ ಪೊಲೀಸ್‌ ಇಲಾಖೆ ಹಾಗೂ ಪತ್ರಕರ್ತರ ಪ್ರತಿನಿಧಿಯನ್ನು ಸೇರಿಸಿಕೊಂಡು ರಿಪಬ್ಲಿಕ್‌ ಕಪ್‌ ಕ್ರಿಕೆಟ್‌ ಪಂದ್ಯ ನಡೆಸಲಾಯಿತು.
ಪಂದ್ಯಾವಳಿ ಉ ಉದ್ಘಾಟಿಸಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ ಕುಮಾರ್‌ ಅವರು, ಕ್ರೀಡಾ ಸ್ಪೂರ್ತಿ ಪ್ರತಿಯೊಬ್ಬರಲ್ಲೂ ಇರಬೇಕು. ಸೌಹಾರ್ದತೆ ಮತ್ತು ಶಾಂತಿಗಾಗಿ ಪ್ರತಿಯೊಬ್ಬರಲ್ಲೂ ಪರಸ್ಪರ ಪ್ರೀತಿಗಾಗಿ ಈ ಕ್ರೀಡಾ ಕೂಟವನ್ನು ಏರ್ಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದು, ಸಂತೋಷ ತಂದಿದೆ ಎಂದು ಹೇಳಿದರು.

ರಾಗಿಗುಡ್ಡದ ನಿವಾಸಿಗಳಿಗಾಗಿ ರಾಗಿಗುಡ್ಡದ ಕ್ರಿಕೆಟ್ ಮೈದಾನದಲ್ಲಿ ಈ ಕ್ರೀಡಾ ಕೂಟ ಆಯೋಜಿಸಿದ್ದು, ಪೊಲೀಸ್ ಇಲಾಖೆ ಸಾರಥ್ಯ ವಹಿಸಿತ್ತು. ಪ್ರತಿಯೊಂದು ತಂಡದಲ್ಲಿ ಇಲಾಖಾ ವತಿಯಿಂದಲೇ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ೪ ಜನ ಹಿಂದೂ ಯುವಕರು, ೪ ಮುಸ್ಲಿಂ, ಒಬ್ಬ ಕ್ರಿಶ್ಚಿಯನ್, ೨ ಪೊಲೀಸ್, ಒಬ್ಬ ಪತ್ರಕರ್ತರನ್ನು ಒಳಗೊಂಡ ೧೧ ಜನರ ತಂಡ ರಚಿಸಿದ್ದು, 9ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
೧೫೦ ಕ್ಕೂ ಹೆಚ್ಚು ಕ್ರೀಡಾಸಕ್ತರು ಹೆಸರು ನೋಂದಾಯಿಸಿಕೊಂಡಿದ್ದರು. ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಜ.25 ರಂದು ೩ರಿಂದ ೬ ಗಂಟೆಯವರಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿಗಳು ನಡೆಯಲಿವೆ.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಕಹಿ ಘಟನೆ ನಡೆದಿತ್ತು. ಸಾಮರಸ್ಯದ ಬದುಕಿಗಾಗಿ ಎಲ್ಲಾ ಧರ್ಮಿಯರು ಒಟ್ಟಾಗಿ ಇರುವ ಶಾಂತಿನಗರ ಮತ್ತು ರಾಗಿಗುಡ್ಡದ ಜನಸಾಮಾನ್ಯರಲ್ಲಿ ಸಹೋದರತೆಯ ಮನೋಭಾವನೆ ಬೆಳೆಯುವಂತಾಗಲಿ ಮತ್ತು ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು ಎನ್ನುವ ಸದುದ್ದೇಶದಿಂದ ಪೊಲೀಸ್‌ ಇಲಾಖೆ ಮಾಡಿರುವ ಪಂದ್ಯಾವಳಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್‌ಕುಮಾರ್ ಭೂಮರೆಡ್ಡಿ, ಕಾರ್ಯಪ್ಪ ಎ.ಜಿ., ಉಪಾಧೀಕ್ಷಕರಾದ ಸುರೇಶ್, ಪೊಲೀಸ್ ಅಧಿಕಾರಿಗಳಾದ ರವಿ ಪಾಟೀಲ್, ಕುಮಾರ್, ಸಿ.ಆರ್.ಕೊಪ್ಪನ್, ಟಿ.ಹರ್ಷ ಮತ್ತಿತರರು ಇದ್ದರು.

Ad Widget

Related posts

ಬಹಿರಂಗ ಪ್ರಚಾರ ಅಂತಿಮ, ರೋಡ್‌ಶೋ ಮೂಲಕ ಗಮನ ಸೆಳೆದ ಅಭ್ಯರ್ಥಿಗಳು

Malenadu Mirror Desk

ಮುಂದುವರಿದ ಮಳೆ, ಘಟ್ಟದ ಸಾಲಿನಲ್ಲಿ ಜಲಪಾತಗಳ ಚತ್ತಾರೆ ತುಂಬಿದ ಪುರದಾಳು ಡ್ಯಾಂ

Malenadu Mirror Desk

ಶಿವಮೊಗ್ಗದಲ್ಲಿ ಶ್ರೀರಾಮಾಯಣ ಕಥಾಮೃತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.