Malenadu Mitra
ರಾಜ್ಯ ಶಿವಮೊಗ್ಗ

ಪ್ರೊ.ಬಿ.ಕೃಷ್ಣಪ್ಪ ಆದರ್ಶವಾದಿಯಾಗಿದ್ದರು: ದಸಂಸ ಸುವರ್ಣ ಸಂಭ್ರಮದಲ್ಲಿ ಆಯನೂರು ಮಂಜುನಾಥ್‌ ಹೇಳಿಕೆ

ಶಿವಮೊಗ್ಗ: ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ. ಬಿ ಕೃಷ್ಣಪ್ಪ ನವರು ಅವಕಾಶ ವಾದಿಯಾಗಿರಲಿಲ್ಲ. ಅವರು ಆದರ್ಶವಾದಿಯಾಗಿದ್ದರು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಪ್ರೊ. ಬಿ ಕೃಷ್ಣಪ್ಪ ನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ” ಕರ್ನಾಟಕದ ದಲಿತ ಚಳುವಳಿಗೆ ೫೦ ರ ಸಂಭ್ರಮ “ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುಷಃ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಚಳುವಳಿಯು ಇಷ್ಟು ಸುದೀರ್ಘ ಅವಧಿಗೆ ನಡೆದ ಉದಾಹರಣೆಯಿಲ್ಲ. ಅಂತಹದೊಂದು ಬೃಹತ್ ರಾಜಕೀಯ ವಿದ್ಯಾಮಾನವನ್ನು ಮುನ್ನಡೆಸಿದ ಮಹಾನಾಯಕ ಪ್ರೊ ಬಿ ಕೃಷ್ಣಪ್ಪ ನವರು ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ ಅಜರಾಮರವಾಗಿ ಉಳಿಯುತ್ತಾರೆ. ಇದು ಎಲ್ಲರ ಪಾಲಿಗೆ ಸ್ವಾಭಿಮಾನದ ಸಂಗತಿ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ ಶ್ರೀಕಾಂತ್, ನ್ಯಾಯವಾದಿಗಳಾದ ಕೆಪಿ ಶ್ರೀಪಾಲ್, ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಬಿ ಎಲ್ ರಾಜು, ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕುಂಸಿ ಉಮೇಶ್,ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮೇಟಿ ಮಲ್ಲಿಕಾರ್ಜುನ್, ಡಿಎಸ್‌ಎಸ್ ನ ರಾಜ್ಯ ಖಜಾಂಚಿ ಬಿ.ಎ ಕಾಟ್ಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ ಏಳು ಕೋಟಿ, ಭದ್ರಾವತಿಯ ಶ್ರೀ ಕೃಷ್ಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಿವಬಸಪ್ಪ, ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್, ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿಯಾದ ಗಂಗಮಾಳಮ್ಮ ಸೊರಬ ಮೊದಲಾದವರಿದ್ದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟ ಮುನ್ನಡೆಯಬೇಕಾದ ಹಾದಿಯ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು.

Ad Widget

Related posts

ಫ್ಲೆಕ್ಸ್ ಗಲಾಟೆ ಚಾಕು ಇರಿತ ಒಬ್ಬನಿಗೆ ಮಾತ್ರ, ಅಮಾಯಕನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು, ನಗರಾದ್ಯಂತ ಮೂರು ದಿನ ನಿಷೇದಾಜ್ಞೆ, ಶಾಲೆಗಳಿಗೆ ಮಂಗಳವಾರ ರಜೆ

Malenadu Mirror Desk

ಜಗಳ ಬಿಡಿಸಿದ್ದ ಸ್ನೇಹಿತರಿಬ್ಬರ ಕೊಲೆ, ಸೂಳೆಬೈಲಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ

Malenadu Mirror Desk

ಪೊಲೀಸ್ ಪೇದೆ ಎದೆಗೆ ಚಾಕು ಹಾಕಿದ್ದ ಆರೋಪಿಯ ಕಾಲಿಗೆ ಫೈರಿಂಗ್ ಮೆಗ್ಗಾನ್‌ನಲ್ಲಿ ಚಿಕಿತ್ಸೆ, ಪೇದೆಗೆ ಗಾಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.