ಶಿವಮೊಗ್ಗ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಪಕ್ಷ ಸಂಘಟನೆಗೆ ಶಕ್ತಿ ತುಂಬಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ರಾಜ್ಯ ಬಿಜೆಪಿ ನಾಯಕರ ಆದೇಶದಂತೆ ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ, ಮಂಡಲ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಗೋಡೆ ಬರಹಕ್ಕೆ ಒತ್ತು ನೀಡಲು ಖಾಸಗಿ ಸ್ಥಳಗಳ ಮಾಲೀಕರ ಬಳಿ ಚರ್ಚಿಸಲಾಗಿದೆ. ಗೋಡೆ ಬರಹ ಕಾರ್ಯಕ್ರಮ ಜ.30 ರಿಂದ ಜಾರಿಗೊಳ್ಳಲಿದೆ ಎಂದರು.
ಜಿಲ್ಲೆಯ 10 ಮಂಡಲಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುತ್ತಿದೆ. ತೀರ್ಥಹಳ್ಳಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ನವೀನ್ ಹೆದ್ದೂರು, ಪ್ರಧಾನ ಕಾರ್ಯದರ್ಶಿಗಳಾಗಿ ರಕ್ಷಿತ್ ಮೇಘರವಳ್ಳಿ, ಮೋಹನ್ ಕುಮಾರ್, ಹೊಸನಗರ ತಾಲ್ಲೂಕು ಮಂಡಲ ಅಧ್ಯಕ್ಷ ಸ್ಥಾನಕ್ಕೆ ಸುಬ್ರಹ್ಮಣ್ಯ ಮತ್ತಿಮನೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ನಾಗರ್ಜುನ ಸ್ವಾಮಿ, ಸತೀಶ್ ಕಾಲಸಸಿ ಅವರನ್ನು ನೇಮಿಸಲಾಗುತ್ತಿದೆ ಎಂದರು.
ಸಾಗರ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಕಂಠ ಗೌಡ್ರು, ರಮೇಶ್ ಹಾರೋಗೊಪ್ಪ, ಸಾಗರ ನಗರ ಮಂಡಲ ಅಧ್ಯಕ್ಷರಾಗಿ ಕೆ.ಆರ್.ಗಣೇಶ್ ಪ್ರಸಾದ್, ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಮೊಗವೀರ, ಸಂತೋಷ್ ರಾಯಲ್, ಸೊರಬ ಮಂಡಲ ಅಧ್ಯಕ್ಷರಾಗಿ ಬಿ.ಎಸ್.ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಕುಮಾರ್ ಕಡಸೂರು, ಪ್ರಕಾಶ್ ಅಗಸನಹಳ್ಳಿ ಅವರನ್ನು ನೇಮಿಸಲಾಗಿದೆ ಎಂದರು.
ಶಿಕಾರಿಪುರ ಮಂಡಲ ಅಧ್ಯಕ್ಷರಾಗಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಬಂಗಾರಿನಾಯ್ಕ್, ಅಶೋಕ್ ಮಾರುವಳ್ಳಿ, ಭದ್ರಾವತಿ ಮಂಡಲ ಅಧ್ಯಕ್ಷರಾಗಿ ಜಿ.ಧರ್ಮ ಪ್ರಸಾದ್, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಚನ್ನೇಶ್, ಅಣ್ಣಪ್ಪ, ಹೊಳೆಹೊನ್ನೂರು ಮಂಡಲ ಅಧ್ಯಕ್ಷರಾಗಿ ಮಲ್ಲೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಶಂಕರ್ ನಿಂಬೆಗೊಂದಿ, ಪ್ರಶಾಂತ್ ಅರೆಬಿಳಚಿ, ಶಿವಮೊಗ್ಗ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಸುರೇಶ್ ಸಿಂಗನಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಅಣ್ಣಪ್ಪ ಆಯನೂರು, ಗಣೇಶ್ ಪಿಳ್ಳಂಗೆರೆ, ಮತ್ತು ಶಿವಮೊಗ್ಗ ನಗರ ಮಂಡಲ ಅಧ್ಯಕ್ಷರಾಗಿ ಡಿ.ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಚ್. ದೀನದಯಾಳ್, ಮಂಜುನಾಥ್ ನವುಲೆ ಅವರನ್ನು ನೇಮಕ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿ ಪ್ರಶಾಂತ್ ಕುಕ್ಕೆ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗಾಯಿತ್ರಿ ದೇವಿ ಮಲ್ಲಪ್ಪ, ರೈತ ಮೋರ್ಚಾ ಅಧ್ಯಕ್ಷರಾಗಿ ಎಸ್.ಸಿದ್ದಲಿಂಗಪ್ಪ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಎಂ.ಎನ್ ಸುಧಾಕರ್, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ರಾಮು ನಾಯ್ಕ ಮತ್ತು ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ಹರೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಪ್ರಮುಖರಾದ ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಜಗದೀಶ್, ಶಿವರಾಜ್, ವಿನ್ಸೆಂಟ್, ಚಂದ್ರ ಶೇಖರ್, ಕೆ.ವಿ. ಅಣ್ಣಪ್ಪ ಇದ್ದರು.
ಗಾವ್ ಚಲೋ’: ಚಾಲನೆ
ಕೇಂದ್ರ ಸರ್ಕಾರದ ಯೋಜನೆಗಳ ಕುರಿತ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕಿದೆ. ಆದ್ದರಿಂದ ಜ.29 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ‘ಗಾವ್ ಚಲೋ ಕಾರ್ಯಕ್ರಮ’ದ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಚುನಾವಣಾ ನಿರ್ವಹರಣಾ ಸಮಿತಿಗೆ ಚಾಲನೆ ನೀಡಲಾಗುವುದು ಎಂದು ಎಂದು ಟಿ.ಡಿ. ಮೇಘರಾಜ್ ಹೇಳಿದರು.
ಡಾ. ಸರ್ಜಿ ಜಿಲ್ಲಾ ಉಪಾಧ್ಯಕ್ಷ
ಜಿಲ್ಲೆಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಧನಂಜಯ್ ಸರ್ಜಿ, ಪದ್ಮಿನಿ ಹುಚ್ಚುರಾವ್, ಗೀತಾ ಮಲ್ಲಿಕಾರ್ಜುನ್, ಕುಪೇಂದ್ರ, ಎಸ್.ರಮೇಶ್(ರಾಮು), ರಾಘವೇಂದ್ರ ಬಾಳೆಬೈಲು, ಆನಂದ, ವಿರೇಂದ್ರ ಪಾಟೀಲ್ ಅವರು ಆಯ್ಕೆ ಆಗಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜು, ಎಂ.ಬಿ ಹರಿಕೃಷ್ಣ, ಸಿ.ಎಚ್ ಮಾಲತೇಶ್, ಕಾರ್ಯದರ್ಶಿಯಾಗಿ ಗಣಪತಿ ಪುರಪ್ಪೆಮನೆ, ಎನ್.ಕೆ ಜಗದೀಶ್, ವಿನ್ಸೆಂಟ್ ರೋಡ್ರಿಗಸ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ಸುಮಲತಾ ಭೂಪಾಳಂ, ನಿವೇದಿತಾ ರಾಜು, ರೇಖಾ ಬೋಸ್ಲೆ ಮತ್ತು ಜಿಲ್ಲಾ ಖಜಾಂಚಿಯಾಗಿ ಎನ್.ಡಿ ಸತೀಶ್ ಅವರನ್ನು ನೇಮಕ ಮಾಡಲಾಗಿದೆ.