ಶಿವಮೊಗ್ಗ ನಗರದಲ್ಲಿ ಬುಧವಾರ ಹಾಡಹಾಗಲೇ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಯುವಕರನ್ನ ಬರ್ಬರವಾಗಿ ಸಾಯಿಸಲಾಗಿದೆ.
ಮುಸ್ಲಿಂ ಸಮುದಾಯದ ಎರಡು ರೌಡಿ ಗುಂಪುಗಳ ನಡುವಿನ ಸಂಘರ್ಷ ಇದಾಗಿದೆ. ಲಷ್ಕರ್ ಮೊಹಲ್ಲಾದಲ್ಲಿ ಸಂಜೆ ನಡೆದ ಘರ್ಷಣೆಯಲ್ಲಿ ಶೋಯೆಬ್ ಮತ್ತು ಗೌಸ್ ಎಂಬುವವರು ಕೊಲೆಯಾಗಿದ್ದಾರೆ. ಬಡಾವಣೆಯಿಂದ ಬಂದ ಗ್ಯಾಂಗ್ ಲಷ್ಕರ್ ಮೊಹಲ್ಲಾದ ವ್ಯಕ್ತಿಯೊಬ್ಬನ ಟಾರ್ಗೆಟ್ ಮಾಡಿ ಬಂದಿತ್ತು ಆದರೆ ಅಲರ್ಟ್ ಆಗಿದ್ದ ಎದುರಾಳಿ ಗ್ಯಾಂಗ್ ಹೊಡೆಯಲು ಬಂದವರನ್ನೇ ಕೊಲೆಮಾಡಿದೆ ಎನ್ನಲಾಗಿದೆ. ಸ್ಥಳಕ್ಕೆ ಪೋಲಿಸರು ಬಂದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ