ಶಿವಮೊಗ್ಗ: ವಿಮಾನ ನಿಲ್ದಾಣದ ಭದ್ರತೆ ಹಾಗೂ ಪ್ರಯಾಣಿಕರ ಸುರಕ್ಷತಾ ಕ್ರಮದ ಭಾಗಿವಾಗಿ ಇಂದು ಮಾಕ್ ಡ್ರಿಲ್ ( ಅಣಕು ಪ್ರದರ್ಶನ) ನಡೆಸಲಾಯ್ತು.
ಶಿವಮೊಗ್ಗದ ಸೋಗಾನೆ ಬಳಿಯಿರುವ ಕುವೆಂಪು ಏರ್ಪೋರ್ಟ್ ನಲ್ಲಿ ಏರ್ಪೋರ್ಟ್ ರಕ್ಷಣಾ ಸಿಬ್ಬಂದಿ ಮತ್ತು ಅಗ್ನಿಶಾಮಕ ವಿಭಾಗದಿಂದ ಇಂದು ಬೆಳಿಗ್ಗೆ 10.20 ರಿಂದ 10.39 ರವರೆಗೆ ಮಾಕ್ ಡ್ರಿಲ್ ನಡೆಸಲಾಯ್ತು.
ತುರ್ತು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದ ಸಿಬ್ಬಂದಿ:
ಇನ್ನು ಮಾಕ್ ಡ್ರಿಲ್ ನ ಭಾಗವಾಗಿ ವಿಮಾನ ನಿಲ್ದಾಣದ ರನ್ ವೇ ಸಮೀಪದಲ್ಲಿ ಏರ್ ಕ್ರಾಫ್ಟ್ ಮಾದರಿಯೊಂದಕ್ಕೆ ಬೆಂಕಿಯನ್ನು ಹಚ್ಚಲಾಗಿತ್ತು. ಏರ್ಪೋರ್ಟ್ ನಲ್ಲಿ ಬೆಂಕಿ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದ ಎರಡು ವಾಹನದಲ್ಲಿ ಬಂದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬಳಿಕ ಪ್ರಯಾಣಿಕರನ್ನ ರಕ್ಷಿಸಿ, ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡುವ ಅಣುಕು ಕಾರ್ಯಾಚರಣೆಯನ್ನು ಸಹ ಯಶಸ್ವಿಯಾಗಿ ನಡೆಸಿದ್ರು.,
ಈ ವೇಳೆ ಏರ್ಪೋರ್ಟ್ ರಕ್ಷಣಾ ವಿಭಾಗದ ಮುಖ್ಯಸ್ಥ ಚಂದ್ರಶೇಖರ್, ವಿವಿಧ ವಿಮಾನಯಾನ ಸಂಸ್ಥೆಗಳ ಶಿವಮೊಗ್ಗದ ಪ್ರತಿನಿಧಿಗಳು ಉಪಸ್ಥಿತರಿದ್ದರು.