ಶಿವಮೊಗ್ಗ: ರಾಜ್ಯದಲ್ಲಿ ಕಾನೂನು ಇದೆ. ಎಂಎಲ್ಸಿ ಸಿ.ಟಿ. ರವಿಯವರನ್ನ ಅರೆಸ್ಟ್ ಮಾಡಿದ್ದೇ ಒಳ್ಳೆಯದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಜಿಲ್ಲೆಯ ಸೊರಬದ ಆನವಟ್ಟಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗ ಬಿಜೆಪಿ ನಾಯಕ ಅಮಿತ್ ಶಾ ಅವರು ಅಂಬೇಡ್ಕರ್ ಬೇಡ, ದೇವರು ಜಪ ಮಾಡಿ ಅಂತಾರೆ.
ಬಿಜೆಪಿಯವರ ಹಣೆಬರಹ ಗೊತ್ತಾಯ್ತಲ್ಲಾ… ಸಿ.ಟಿ. ರವಿಯವರ ಹಣೆಬರಹ ಗೊತ್ತಾಯ್ತಲ್ಲಾ ಎಂದಿದ್ದಾರೆ.
ಪ್ರಜಾಪ್ರಭುತ್ವ ದೇಗುಲದಂತ ಪವಿತ್ರ ಸ್ಥಳದಲ್ಲಿ ಆ ರೀತಿ ಪದಬಳಕೆ ಮಾಡಬಾರದು. ಪದಬಳಕೆ ಮಾಡಿದ ಮೇಲೆ ಕೆಲವೊಮ್ಮೆ ನಾವು ಕ್ಷಮೆ ಕೇಳ್ತೆವೆ.. ಅವರಿಗೆ ಆ ಪರಿಜ್ಞಾನ ಇಲ್ಲ. ಅದನ್ನ ಟ್ವಿಸ್ಟ್ ಮಾಡಲು ನೋಡ್ತಿದ್ದಾರೆ. ಬಾಬ ಬುಡನ್ ಗಿರಿಯಿಂದ ಅವರ ಇತಿಹಾಸವನ್ನ ಒಮ್ಮೆ ಗಮನಿಸಿ ಗೊತ್ತಾಗುತ್ತೆ ಎಂದರು.
ಇದು ಬಿಜೆಪಿಯವರ ಸ್ಟಂಟ್. ಮಹಾತ್ಮ ಗಾಂಧಿ ಬಗ್ಗೆ ಮಾತಾಡಿದ್ರೇ ಡೈವರ್ಟ್ ಮಾಡ್ತಾರೆ. ಗಾಂಧಿ, ಅಂಬೇಡ್ಕರ್ ಅವರ ವಿಚಾರ, ಚಿಂತನೆ ಜನರಿಗೆ ಗೊತ್ತಾಗಬಾರದು. ಬಿಜೆಪಿಯವರದ್ದು ಕ್ರಿಮಿನಲ್ ಚಿಂತನೆ. ಬ್ರಿಟಿಷರ ರೀತಿ ಒಡೆದು ಆಳೋ ಕೆಲಸ ಮಾಡ್ತಾರೆ. ಕಾನೂನಿನ ಪ್ರಕಾರ ಸಿ.ಟಿ. ರವಿಯವರಿಗೆ ಕಠಿಣ ಶಿಕ್ಷೆಯಾಗಬೇಕು.. ನಾನು ಕೂಡ ಒತ್ತಾಯ ಮಾಡ್ತೇನೆ ಎಂದ ಅವರು, ಆರ್.ಆಶೋಕ್ ಅವರು ಸರ್ಕಾರದ ಗುಂಡಾಗಿರಿ ಎಂದು ಹೇಳುತ್ತಾ ಪೊಲೀಸ್ ಠಾಣೆ ಬಳಿ ಗುಂಡಾಗಿರಿ ಮಾಡಿದ್ದಾರೆ. ಪೊಲೀಸರು ಸಿಟಿ ರವಿಯವರನ್ನ ರಕ್ಷಣೆ ಮಾಡಿದ್ದಾರೆ. ಆದರೇ, ಈಗ ಬ್ಯಾಂಡೆಜ್ ಹಾಕೋಂಡು ಓಡಾಡ್ತಿದ್ದಾರೆ. ಬಿಜೆಪಿಯವರನ್ನ ಬಿಟ್ಟರೇ, ಗೂಡ್ಸೇ ಫೋಟೋ ಕೂಡ ಹಾಕ್ತಾರೆ. ಗಾಂಧಿ ಕೊಂದ ಗೂಡ್ಸೆಯನ್ನ ಬಿಜೆಪಿಯವರು ದೇವರ ರೀತಿ ನೋಡ್ತಾರೆ. ದೇಶದ ಅತ್ಯಂತ ಕೆಟ್ಟ ವಿಚಾರ ಇದ್ರೇ ಅದು ಸಿಟಿ ರವಿ ಮಾತಾಡಿರೋ ವಿಚಾರ.
ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತೆ ಎಂದ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.