Malenadu Mitra
ಶಿವಮೊಗ್ಗ ಹೊಸನಗರ

ಮನೆ ಬಾಗಿಲಲ್ಲೇ ನಾಯಿ ಹೊತ್ತೊಯ್ದ ಚಿರತೆ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದ ರೈತರಿಗೆ ಮತ್ತೋಂದು ಸಮಸ್ಯೆ ಎದುರಾಗಿದೆ.
ಕಾಡಾನೆಗಳ ಕಾಟದ ನಡುವೆ ಇದೀಗ ಚಿರತೆ ಸಹ ಕಾಣಿಸಿಕೊಂಡಿದ್ದು, ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನ ಚಿರತೆ ಹೊತ್ತೋಯ್ದಿದೆ.
ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ತಡರಾತ್ರಿ ಚಿರತೆ ಕಾಣಿಸಿಕೊಂಡಿದೆ.
ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆ ಬಾಗಿಲು ಸಮೀಪವೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ.


ತಡರಾತ್ರಿ ಎರಡು ಗಂಟೆ ಸುಮಾರಿಗೆ ನಾಯಿಗಳು ಬೊಗಳಿದಾಗ ಮನೆಯವರು ಅಷ್ಟಾಗಿ ಪರೀಕ್ಷಿಸಿರಲಿಲ್ಲ. ಇಂದು ಬೆಳಿಗ್ಗೆ ಮನೆ ನಾಯಿ ಕಾಣಿಸದಿರುವಾಗ ಸಿಸಿ ಕ್ಯಾಮರವನ್ನು ಪರಿಶೀಲಿಸಿದ್ದು, ಚಿರತೆ ಬಂದು ನಾಯಿ ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ.
ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಆನೆಗಳ ಹಾವಳಿಯಿಂದ ಸ್ಥಳೀಯರು ಕಂಗೆಟ್ಟಿದ್ದು, ಇದೀಗ ಚಿರತೆ ಕಾಣಿಸಿಕೊಂಡಿದ್ದರಿಂದ ಆತಂಕಕ್ಕೊಳಗಾಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Ad Widget

Related posts

ಶಿವಮೊಗ್ಗ ಜಿಲ್ಲೆಯಲ್ಲಿ ತ್ರಿತಕ ದಾಟಿದ ಕೊರೊನ: ಸ್ಮಾರ್ಟ್ ಸಿಟಿಯಲ್ಲೇ ಸೋಂಕು ಹೆಚ್ಚು

Malenadu Mirror Desk

ಭದ್ರಾವತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಹಲ್ಲೆ

Malenadu Mirror Desk

ತೆಪ್ಪೋತ್ಸವ ವೈಭವ ಹೇಗಿತ್ತು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.