ಸೊರಬ: ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಅಧಿಕಾರ ಹಿಡಿಯುವ ಮೂಲಕ ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು. ಇಲ್ಲದಿದ್ದಲ್ಲಿ ಜನಸಾಮಾನ್ಯರ ಬದುಕು ಬೀದಿಗೆ ಬರಲಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಚಂದ್ರಗುತ್ತಿ, ಉಳವಿ, ಹಾಗೂ ಮಾವಲಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ಸೋಮವಾರ ಸಂಜೆ ಏರ್ಪಡಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕುಮಾರ್ ಬಂಗಾರಪ್ಪ ಅವರ ಸರ್ವಾಧಿಕಾರಿ ಧೋರಣೆಯಿಂದ ಒಡೆದ ಬಿಜೆಪಿ ಮನೆಯನ್ನು ಕಟ್ಟುವುದಕ್ಕೆ ಪಕ್ಷದ ಹಿರಿಯರು ಮುಂದಾಗುವಂತ ಸಂದರ್ಭ ಏರ್ಪಟ್ಟಿದ್ದು ವಿಪರ್ಯಾಸ. ಸ್ವಾರ್ಥ ಮನೋಭಾವ ಹೊಂದಿದ ಕುಮಾರ್ ಬಂಗಾರಪ್ಪ ಯಾವುದೇ ವ್ಯಕ್ತಿ ಗುರುತಿಸಿಕೊಳ್ಳುವುದನ್ನು, ಬೆಳೆಯುವುದನ್ನು ಸಹಿಸದೆ ಜೀವನದುದ್ದಕ್ಕೂ ತೊಂದರೆ ಕೊಡುತ್ತಾ ಬಂದಿದ್ದಾರೆ. ಅವರ ಕೀಳು ಮಟ್ಟದ ರಾಜಕಾರಣಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಟುಕಿದರು.
ಕುಮಾರ್ ಬಂಗಾರಪ್ಪ ಅವರ ಚರಿತ್ರೆ ಜನರಿಗೆ ಗೊತ್ತಿದ್ದರೆ ಗೆಲ್ಲಿಸುತ್ತಿರಲಿಲ್ಲ. ಜನಸಾಮಾನ್ಯರು ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ನೀಚ ರಾಜಕಾರಣ ಅವರದ್ದಾಗಿದ್ದು, ಗೆಲ್ಲಿಸಿದ ಜನರೆ ವ್ಯಥೆ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿ.ಪಂ ಸದಸ್ಯೆ ತಾರ ಶಿವಾನಂದಪ್ಪ, ತಾ.ಪಂ ಸದಸ್ಯರಾದ ಬಂಗಾರಪ್ಪ ಗೌಡ, ಜ್ಯೋತಿ ನಾರಾಯಣಪ್ಪ, ಶಿವಕುಮಾರ್ ಕಾಸ್ವಾಡಿಕೊಪ್ಪ, ಹೆಚ್.ಗಣಪತಿ, ಪರಶುರಾಮ್ ಮಳಲಗದ್ದೆ, ಅಶೋಕ್ ಮಳಲಗದ್ದೆ, ಗಣಪತಿ ಮೈಸಾಮಿ, ತನ್ವೀರ್, ರವಿ, ಸೋಮಶೇಖರ್, ಪ್ರಕಾಕರ್ ಶಿಗ್ಗಾ, ಜಗದೀಶ್ ಕುಪ್ಪೆ, ಪರಶುರಾಮಪ್ಪ, ಭೀಮಪ್ಪ ಕಾಸ್ವಾಡಿಕೊಪ್ಪ, ಈಶ್ವರಪ್ಪ ಆರೇಕೊಪ್ಪ, ನಾಗರಾಜ್, ಮಂಜುನಾಥ್, ಬಸಪ್ಪ ಚೀಲನೂರು, ಭಾಸ್ಕರ್ ಬರಗಿ, ಅಲ್ತಪ್ ಇದ್ದರು.
previous post