ರಾಜ್ಯದ ತಳಸಮುದಾಯದ ಅಸ್ಮಿತೆಯಾಗಿರುವ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದೆಂದು ಆಗ್ರಹಿಸಿ ಸೊರಬದಲ್ಲಿ ಬ್ರಹ್ಮಶ್ರೀನಾರಾಯಣ ಗುರು ಧರ್ಮಪರಿಪಾಲನಾ ಸಂಘದಿAದ ಮಂಗಳವಾರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ್ ಮೂಲಕ ನೀಡಿದ ಮನವಿಯಲ್ಲಿ ಸಿಗಂದೂರು ದೇವಾಲಯದಲ್ಲಿ ಸರಕಾರ ಹಸ್ತಕ್ಷೇಪ ಮಾಡಿರುವುದು ತಳಸಮುದಾಯದ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಧರ್ಮದರ್ಶಿ ರಾಮಪ್ಪ ಅವರು ನೇತೃತ್ವದ ಆಡಳಿತ ಮಂಡಳಿಗೆ ಹಿಂದಿನAತೆಯೇ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು. ರಾಜಕೀಯ ಲಾಭದ ಉದ್ದೇಶದಿಂದ ಸರಕಾರ ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು.
ರಾಜ್ಯ ಹಾಗೂ ದೇಶಾದ್ಯಂತ ಭಕ್ತಗಣ ಹೊಂದಿರುವ ದೇವಾಲಯದಲ್ಲಿನ ಹಸ್ತಕ್ಷೇಪ ಸಲ್ಲದು. ಸರಕಾರ ರಚನೆಮಾಡಿರುವ ಸಲಹಾ ಸಮಿತಿಯನ್ನು ಕೂಡಲೇ ರದ್ದುಮಾಡಬೇಕೆಂದು ಆಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಈಡಿಗ ಸಮುದಾಯದ ಏಳಿಗೆಗಾಗಿ ಈಡಿಗ ಪ್ರಾಧಿಕಾರ ರಚನೆ ಮಾಡಬೇಕೆಂದು ಸರಕಾರಕ್ಕೆ ಮನವಿಮಾಡಲಾಯಿತು.
ಈ ಸಂದರ್ಭದಲ್ಲಿ ಬಿಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ಪ್ರವೀಣ ಹಿರೇಇಡಗೋಡು, ಸೊರಬ ತಾಲೂಕು ಅಧ್ಯಕ್ಷ ಶಿವಕುಮಾರ್ ಬಿಳವಗೋಡು, ಕಲ್ಲಪ್ಪ ಚತ್ರಟ್ಟಿಹಳ್ಳಿ, ಉಪಾಧ್ಯಕ್ಷ ತ್ಯಾಗರಾಜ್ ಹುಲ್ತಿಕೊಪ್ಪ, ಪ್ರಧಾನ ಕಾರ್ಯದರ್ಶಿ ನಾಗೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಬರಗಿ, ಮುಖಂಡರುಗಳಾದ ಜಗದೀಶ್ ಕೊಡಕಣಿ, ನಾಗರಾಜ್ ಮುಟುಗುಪ್ಪೆ, ನಾಗರಾಜ್ ಕೈಸೋಡಿ, ಗಣಪತಿ ಕೆರೆಹಳ್ಳಿ, ಕೀರ್ತಿ ಕಾಳಪ್ಪ ಹುಲ್ತಿಕೊಪ್ಪ ಮತ್ತಿತರರು ಭಾಗವಹಿಸಿದ್ದರು.
previous post
next post