ಬಿಲ್ಲವ ಹಾಗೂ ನಾಮಧಾರಿ ಸಮಾಜದ ೨೬ ಉಪಪಂಗಡಗಳನ್ನು ಒಳಗೊಂಡ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿತು.
ಈಡಿಗ ಸಮಾಜವು ೨೬ ಉಪ ಪಂಗಡಗಳನ್ನು ಒಳಗೊಂಡಿದೆ. ರಾಜ್ಯ ದಲ್ಲಿ ೧ ಕೋಟಿಯಷ್ಟು ಜನಸಂಖ್ಯೆ ಇದ್ದಾರೆ. ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜ ವಾಗಿದೆ. ಜೊತೆಗೆ ಧಾರ್ಮಿಕವಾ ಗಿಯೂ ಅನ್ಯಾಯವಾಗಿದೆ. ಆದ ಕಾರಣ ಸಮಾಜದ ಸಮಗ್ರ ಅಭಿ ವೃದ್ದಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ, ಕನಿಷ್ಟ ೫೦೦ ಕೋಟಿ ರೂ.ಗಳನ್ನು ಮೀಸಲಿಡ ಬೇಕು ಎಂದು ಮನವಿದಾರರು ಆಗ್ರಹಿಸಿದರು.
ಇದಲ್ಲದೇ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ನೇಮಿಸಿರುವ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿಯನ್ನು ರದ್ದು ಮಾಡಿ ಧರ್ಮ ದರ್ಶಿಗಳಾಗಿದ್ದ ಡಾ.ರಾಮಪ್ಪನವರ ಕುಟುಂಬದ ನೇತೃತ್ವದಲ್ಲಿ ಯಥಾಸ್ಥಿತಿ ಮುಂದುವರೆಯಬೇಕು. ಆಡಳಿತದ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು. ಶರಾವತಿ ಸಂತ್ರಸ್ಥರಿಗೆ ಮನೆ ಮತ್ತು ಜಮೀನು ನೀಡಬೇಕು. ಮಂಗಳೂರು ಅಂತರರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯ ಎಂಬುವರ ಹೆಸರಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಮುಖರಾದ ಪ್ರವೀಣ್ ಹಿರೇ ಇಡಗೋಡು, ಪುನೀತ್ ಎಲ್. ಹೆಬ್ಬೂರ್, ಸುಧಾಕರ ಶೆಟ್ಟಿಹಳ್ಳಿ, ಸತ್ಯನಾರಾಯಣ, ಹರಿದ್ರಾವತಿ,ಶಶಿಕುಮಾರ್, ವಿನೋದ್ ಕುಮಾರ್, ಎನ್. ಹರೀಶ್ ಸೇರಿದಂತೆ ಹಲವರಿದ್ದರು.
ReplyForward |