ಹಂಚಿ ತಿನ್ನುವುದರಲ್ಲಿ ಪರಮಸುಖವಿದೆ, ಪಕ್ಷಿ ಪ್ರಾಣಿಗಳಲ್ಲೂ ಈ ಸಂಸ್ಕಾರವಿದೆ. ನಾವು ಮನುಷ್ಯರು ಈ ಸಹಬಾಳ್ವೆ ಅಳವಡಿಸಿಕೊಳ್ಳಬೇಕು ಎಂದು ನಾರಾಯಣ ಗುರು ಈಡಿಗ ಮಹಾ ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಿಪ್ಪನ್ ಪೇಟೆಯಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಶಾಮಿಯಾನದ ದಶಮಾನೋತ್ಸವ ಹಾಗೂ ದಿ.ಅಡುಗೆ ವಾಸಣ್ಣ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಶಾಮಿಯಾನ ಮಂಜಣ್ಣ ಅವರು ತಮಗೆ ನೆರವಾದವರನ್ನು ಸ್ಮರಿಸುವುದಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗೆ ಸನ್ಮಾನ ಮಾಡುತ್ತಿರುವುದು ಅಭಿನಂದನೀಯ ಕಾರ್ಯಕ್ರಮ. ದುಡಿಮೆ ಮಾಡುವವರೆಲ್ಲರಿಗೂ ಒಳ್ಳೆಯ ಮನಸ್ಸಿರುವುದಿಲ್ಲ. ಒಳ್ಳೆಯ ಕೆಲಸ ಮಾಡಿದವರು ಎಲ್ಲರ ಹೃದಯದಲ್ಲಿ ನೆಲೆನಿಲ್ಲುತ್ತಾರೆ ಎಂದು ಹೇಳಿದರು. ಈ ಸಂದರ್ಭ ಶ್ರೀಗಳು ಎಂಬಿಬಿಎಸ್ ಕೋರ್ಸ್‍ಗೆ ಆಯ್ಕೆಯಾದ ಭರತ್ ಮತ್ತು ಆತನ ತಾಯಿ ಶೋಭಾ ಅವರನ್ನು ಸನ್ಮಾನಿಸಿದರು.
ಸ್ಥಳೀಯ ಮುಸ್ಲಿಂ ಗುರುಗಳಾದ ಜಬ್ಬಾರ್ ಶಾ ಅದಿ, ಮಾತನಾಡಿ ಹಸಿವಿಗೆ ಯಾವುದೇ ಜಾತಿ ಬೇದವಿಲ್ಲ. ಅನ್ನದ ಮಹತ್ವ ಸಾರುವ ಸಂದೇಶಹೊತ್ತ ಎಸ್‍ಎಲ್‍ವಿ ಷಾಮಿಯಾನ ಸಂಸ್ಥೆಯವರ ಬಡವರ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆ ಮಾಲೀಕರಾದ ಬಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದು, ನಾವು ಉಣ್ಣುವುದರಲ್ಲಿ ಕೊಂಚ ಬಡವರಿಗೆ ಕೊಡುವ ಉದಾತ್ತ ದ್ಯೇಯ ಹೊಂದಿದ್ದೇನೆ. ಬಡವರ ಮನೆಯ ಶವಸಂಸ್ಕಾರಕ್ಕೆ ಅಗತ್ಯವಿರುದ್ದ ಪರಿಕರಗಳನ್ನು ಉಚಿತವಾಗಿ ನೀಡಲಾಗುವುದು. ಒಂದು ಬಡ ಕುಟುಂಬದ ಶುಭಕಾರ್ಯಕ್ಕೆ ಉಚಿತ ಶಾಮಿಯಾನ ಹಾಕಿಕೊಡಲಾಗುವುದು ಎಂದು ಹೇಳಿದರು.
ಮುಖಂಡರಾದ ಲಕ್ಷ್ಮಣ್‍ಗೌಡ, ಚಾಬೂಸಾಬ್, ಪ್ರಭಾಕರ್ ಭಟ್, ವೆಂಕಪ್ಪ, ತುಳೋಜಿರಾವ್. ಬಿ.ಪಿ.ಜಯಪ್ಪ,ಜ್ಯೋತಿ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು. ಲಕ್ಷ್ಮಣ್ ಹಾರಂಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕರಿಬಸಪ್ಪ ಎಲ್ಲರನ್ನೂ ವಂದಿಸಿದರು. ಇದೇ ಸಂದರ್ಭ ಕಷ್ಟಕ್ಕೆ ನೆರವಾದ ರೇಣುಕಾನಂದ ಶ್ರೀಗಳಿಗೆ ಮಂಜುನಾಥ್ ಮತ್ತು ಸುಜಾತ ದಂಪತಿ ಸನ್ಮಾನಿಸಿ ಗೌರವಿಸಿದರು.
previous post
next post