Malenadu Mitra
ರಾಜ್ಯ

ಎರಡು ದಿನ ಅಡಕೆ ಖರೀದಿ ಇಲ್ಲ ಯಾಕೆ ಗೊತ್ತಾ ?

ರಾಜ್ಯಸರಕಾರ ಎಪಿಎಂಸಿ ವರ್ತಕರು ನಡೆಸುವ ಖರೀದಿ ಮೇಲೆ ಶೇ.೧೦೦ ಸೆಸ್ ವಿಧಿಸಿರುವುದನ್ನು ಖಂಡಿಸಿ ಶಿವಮೊಗ್ಗ ಎಪಿಎಂಸಿ ಅಡಕೆ ಮಂಡಿ ವರ್ತಕರು ಎರಡು ದಿನಗಳ ವಹಿವಾಟು ಬಂದ್‌ಮಾಡಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿರುವುದರಿಂದ ಎಪಿಎಂಸಿಯಿಂದ ಹೊರಗೆ ಖರೀದಿಸುವ ಅಡಕೆಗೆ ಯಾವುದೇ ಸೆಸ್ ಇರುವುದಿಲ್ಲ. ಆದರೆ ಮಂಡಿಯಲ್ಲಿ ಖರೀದಿಸುವ ಮಾಲಿಗೆ ಸೆಸ್ ವಿಧಿಸುವ ಮೂಲಕ ಅವೈಜ್ಞಾನಿಕ ಕಾನೂನು ತಂದಿದೆ. ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಕಾರಣ ಶೇ.೩೫ ಕ್ಕೆ ಸೆಸ್ ಹಾಕಲಾಗಿತ್ತು. ಆದರೆ ಈಗ ಏಕಾಏಕಿ ಮತ್ತೆ ಶೇ.೧೦೦ ಸೆಸ್ ವಿಧಿಸಿರುವ ರಾಜ್ಯ ಸರಕಾರದ ಕ್ರಮ ಖಂಡನೀಯ, ಹೀಗಾದಲ್ಲಿ ವಹಿವಾಟು ನಡೆಸುವುದು ಅಸಾಧ್ಯ ಎಂಬ ಕಾರಣಕ್ಕೆ ಅಡಿಕೆ ವರ್ತಕರ ಸಂಘ ಡಿ.೨೧ ಮತ್ತು ೨೨ ರಂದು ಅಡಕೆ ವಹಿವಾಟು ಸ್ಥಗಿತಗೊಳಿಸಿದೆ.
ಸೋಮವಾರ ಎಲ್ಲ ವರ್ತಕರು ತಮ್ಮ ವಹಿವಾಟು ಬಂದ್ ಮಾಡಿ ಎಪಿಎಂಎಸಿ ಪ್ರಾಂಗಣದ ಹೊರಗೆ ಬಂದು ಸರಕಾರದ ಕ್ರಮ ಖಂಡಿಸಿ ತಮ್ಮ ಆಕ್ರೋಶ ಹೊರಹಾಕಿದರು. ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಕಾರ್ಯದರ್ಶಿ ಕೆ.ಸಿ.ಮಂಜುನಾಥ್, ಎಸ್.ಮಂಜುನಾಥ್ ಸೇರಿದಂತೆ ಅನೇಕ ವರ್ತಕರು ಭಾಗವಹಿಸಿದ್ದರು.

Ad Widget

Related posts

ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ ನಿಷೇದಾಜ್ಞೆ ಜಾರಿ, ನಗರದಲ್ಲಿ ಪ್ರಕ್ಷುಬ್ಧ ವಾತಾವರಣ

Malenadu Mirror Desk

ಭದ್ರಾವತಿಯಲ್ಲಿ ಮಾ.೧೩ಕ್ಕೆ ಪ್ರತಿಭಟನೆ: ಖರ್ಗೆ,ಸಿದ್ದರಾಮಯ್ಯ ಭಾಗಿ

Malenadu Mirror Desk

ಸೊರಬ ನಿವಾಸಿಗಳ ಸಮ್ಮೀಲನ -24 : ಟ್ರೋಲ್ ಬಗ್ಗೆ ಡೋಂಟ್ ಕೇರ್ ಎಂದ ಮಧು ಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.