ಸೊರಬ ತಾಲೂಕು ಹರೂರು ಗ್ರಾಮದ ಪಾಟೀಲ್ ಕ್ರೀಡಾಂಗಣದಲ್ಲಿ ಶ್ರೀ ಕಲ್ಲೇಶ್ವರ ಕ್ರಿಕೆರ‍್ಸ್ ಹರೂರು ವತಿಯಿಂದ ಸೋಮವಾರ ನಡೆದ ಲೈಟ್ ಹಾರ್ಡ್ಬಾಲ್ ಸಿಕ್ಸರ್ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಸೊರಬ ಸ್ಟರ‍್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
ಶುಕ್ರವಾರದಿAದ ಸೊಮವಾರದವರೆಗೂ ಟೂರ್ನಮೆಂಟ್ ನಡೆದು, ಶ್ರೀ ಕಲ್ಲೇಶ್ವರ ಕ್ರಿಕೆರ‍್ಸ್ ಹರೂರು ತಂಡ ದ್ವಿತೀಯ ಬಹುಮಾನ, ಸಿ.ಸಿ ಬಾಯ್ಸ್ ಚೆನ್ನಾಪುರ ತಂಡ ತೃತೀಯ ಬಹುಮಾನ ಪಡೆದುಕೊಂಡರೆ, ಪ್ರಶಾಂತ್ ಸೊರಬ ಉತ್ತಮ ಬ್ಯಾಟ್ಸ್ಮ್ಯಾನ್, ಅನಿಲ್ ಕುಮಾರ್ ಕೆ.ಪಿ ಹರೂರು ಉತ್ತಮ ಬೋಲರ್, ರವಿ ಕುಮಾರ್ ಬಿ ಹರೂರು ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪ್ರಥಮ ಬಹುಮಾನ ಪ್ರಾಯೋಜಕ ಹಾಗೂ ಅಂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎಸ್. ಹೇಮಚಂದ್ರ ಶಾಂತಗೇರಿ ಬಹುಮಾನ ವಿತರಿಸಿ ಮಾತನಾಡಿ, ವ್ಯಕ್ತಿ ವಿಕಸನದಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಬೆಳೆಸಿಕೊಳ್ಳಲು ಸಾಧ್ಯ. ಯುವಕರು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಮಯ ವ್ಯರ್ಥ ಮಾಡದೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವತ್ತ ಮುಂದಾಗಬೇಕು ಎಂದರು.
ತೃತೀಯ ಬಹುಮಾನದ ಪ್ರಾಯೋಜಕ ಹಾಲೇಶ್ ಹರೂರು ಕೆ.ಇ.ಬಿ ಕಾಲೋನಿ ಸೊರಬ ಮಾತನಾಡಿದರು.
ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಂ.ನೀಲೇಶ್, ಮುಖಂಡ ಲಿಂಗರಾಜ್ ಹರೂರು, ಓಂಕಾರ್, ಗಣೇಶ್, ಮಂಜುನಾಥ್, ನೇಮರಾಜ್, ಉಮೇಶ್, ನಾಯಕ ಅನಿಲ್ ಕುಮಾರ್, ಉಪನಾಯಕ ರವಿ, ನಾಗರಾಜ್, ರಾಕೇಶ್, ರಾಘು, ಭರತ್, ಸುದೀಪ್, ಪೃಥ್ವಿ, ಮಧು, ಮಾಲತೇಶ್, ಸಂದೀಪ್, ತೀರ್ಥೇಶ್, ಶಶಾಂಕ್ ಇತರರಿದ್ದರು.
previous post