ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ತಾಲೂಕುಗಳಲ್ಲ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮಧ್ಯಾಹ್ನ ೧ ಗಂಟೆ ಹೊತ್ತಿಗೆ ಶೇ.೪೬.೧೭ ರಷ್ಟು ಮತದಾನವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಶೆ.೪೬.೫೮ ,ಭದ್ರಾವತಿಯಲ್ಲಿ ೪೩.೪೧ ಹಾಗೂ ತೀರ್ಥಹಳ್ಳಿಯಲ್ಲಿ ೪೮.೪೧ ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದನೇ ಚುರುಕಾಗಿದ್ದ ಮತದಾನ ಮಧ್ಯಾಹ್ನದ ನಂತರ ಮತ್ತಷ್ಟು ಬಿರುಸಾಗಿದೆ. ಸುಗ್ಗಿಯ ಕಾಲವಾದ್ದರಿಂದ ರೈತಾಪಿ ಜನರು ತಮ್ಮ ಕೆಲಸ ಕಾರ್ಯಗಳ ನಡುವೆಯೇ ಬಿಡುವು ಮಾಡಿಕೊಂಡು ಮತಗಟ್ಟೆಗೆ ಬಂದು ತಮ್ಮ ಹಲ್ಲು ಚಲಾಯಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ,ಬಿ.ಅಶೋಕನಾಯ್ಕ್ ಅವರು ಶಿವಮೊಗ್ಗ ತಾಲೂಕು ಹಸೂಡಿಯಲ್ಲಿ ತಮ್ಮ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು,
ಸ್ಟಾçಂಗ್ ರೂಮಿಗೆ ಎಸ್ಪಿ ಭೇಟಿ
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕೆ.ಎನ್.ಶಾಂತರಾಜ್ ಅವರು ಶಿವಮೊಗ್ಗದ ಎಚ್.ಎಸ್.ರುದ್ರಪ್ಪ ಮೆಮೋರಿಯಲ್ ನ್ಯಾಷನಲ್ ಕಾಲೇಜಿನಲ್ಲಿರುವ ಸ್ಟಾçಂಗ್ ರೂಮಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಹಿರಿಯ ಅಧಿಕಾರಿಗಳು ಹಾಜರಿದ್ದರು. ಅಲ್ಲಿನ ಭದ್ರತೆ ಇತ್ಯಾದಿ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲಾಯಿತು.