ಮಲೆನಾಡಿಗೂ ಕಾಡಲಿದೆಯೇ ಬ್ರಿಟನ್ ಗುಮ್ಮಾ! ಹೌದು ಹೀಗೊಂದು ಅನುಮಾನ ಜಿಲ್ಲಾಡಳಿತಕ್ಕೂ ಇದೆ. ಯಾಕೆಂದರೆ ಬ್ರಿಟನ್‌ನಿಂದ ಜಿಲ್ಲೆಗೆ ೨೩ ಜನರು ಬಂದಿದ್ದಾರೆ. ಈ ಎಲ್ಲರಿಗೂ ಕೊರೊನ ಪರೀಕ್ಷೆ ಮಾಡಲಾಗಿದೆ. ಎಲ್ಲರೂ ಈಗ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ. ಎಲ್ಲರ ಕೊರೊನ ಪರೀಕ್ಷಾ ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಅವರಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಸಚಿವ ಈಶ್ವರಪ್ಪ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಲಂಡನ್‌ನಿAದ ಬಂದವರಲ್ಲಿ ಕೊರೊನ ಪಾಸಿಟಿವ್ ಬಂದಿದೆ ಎಂಬ ಸುದ್ದಿಗಳಲ್ಲಿ ಸಧ್ಯಕ್ಕೆ ಸತ್ಯಾಂಶವಿಲ್ಲ. ಆದರೆ ವರದಿ ಬಂದ ಮೇಲೆ ಈ ಬಗ್ಗೆ ನಿಖರ ಮಾಹಿತಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭ ಸಚಿವರು ಹಾಲಿ ಇರುವ ಕೊರೊನ ಕೇಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಮತ್ತು ಬರಬಹುದಾದ ಸಮಸ್ಯೆಗಳಿಗೂ ಇಲಾಖೆ ಸಿದ್ದವಾಗಿರಲಿ ಎಂದು ಹೇಳಿದರು.
ಐದು ಪಾಸಿಟಿವ್?
ಬ್ರಿಟನ್‌ನಿಂದ ಬಂದ ಐದು ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆಯ ಅನಧಿಕೃತ ಮೂಲಗಳು ತಿಳಿಸಿವೆ. ಆದರೆ ಅವುಗಳು ರೂಪಾಂತರ ಆಗಿರುವ ಕೊರೊನ ಪ್ರಕಣವಾ ಅಥವಾ ಮಾಮೂಲಿ ಕೊರೊನವಾ ಎಂಬುದು ದೃಢಪಟ್ಟಿಲ್ಲ. ಬೆಂಗಳೂರಿಂದ ನಾಳೆ ಸಂಜೆ ಬರಲಿರುವ ವರದಿಯು ವಾಸ್ತವವನ್ನು ತಿಳಿಸಲಿವೆ. ಆದರೂ ಮಲೆನಾಡಿಗೂ ಬ್ರಿಟನ್ ಗುಮ್ಮ ಕಾಡಲಿದೆಯೇ ಎಂಬ ಆತಂಕ ಇದ್ದೇ ಇದೆ.
previous post
next post