ರಾಜ್ಯಸರಕಾರ ಸಂಸ್ಕೃತ ವಿವಿಗೆ ಅನುದಾನ ಹೆಚ್ಚುಕೊಟ್ಟು ಕನ್ನಡ ವಿವಿಗೆ ಅನುದಾನ ಕಡಿತಮಾಡುವ ಮೂಲಕ ಕನ್ನಡಕ್ಕೆ ದ್ರೋಹ ಮಾಡುತ್ತಿದೆ ಎಂದು ಜೆಡಿಎಸ್ ನಾಯಕ ವೈಎಸ್.ವಿದತ್ತಾ ಆರೋಪಿಸಿದ್ದಾರೆ.
ಶುಕ್ರವಾರ ಶಿವಮೊಗ್ಗದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ಕನ್ನಡ ವಿವಿಗೆ ಶೇ ೭೦ ರಷ್ಟು ಅನುದಾನ ಕಡಿತಮಾಡಲಾಗಿದೆ. ಅದೇ ಹೊತ್ತಲ್ಲಿ ಸಂಸ್ಕೃತ ವಿವಿಗೆ ಅನುದಾಣ ಹೆಚ್ಚು ಮಾಡಲಾಗಿದೆ. ನಾವೇನು ಸಂಸ್ಕೃತದ ವಿರೋಧಿ ಅಲ್ಲ ಆದರೆ ಮಾತೃಭಾಷೆಗೆ ಆಗುತ್ತಿರುವ ದ್ರೋಹವನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಸರಕಾರದ ನಿಲುವಿನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಡೆಸುತ್ತಿರುವ ಅಭಿಯಾನ ಸ್ವಾಗತಾರ್ಹ. ಸಾಹಿತಿಗಳು, ವಿಚಾರವಂತರು ಇದನ್ನು ಬೆಂಬಲಿಸಬೇಕು. ಸರಕಾರದ ಧೋರಣೆ ನೋಡಿದರೆ ಈಗ ಮತ್ತೊಂದು ಗೋಕಾಕ್ ಚಳವಳಿಯ ಅಗತ್ಯವಿದೆ ಎಂದು ದತ್ತಾ ಅಭಿಪ್ರಾಯಪಟ್ಟರು.
ರಾಜ್ಯ ಸರಕಾರ ಕ್ರೀಡಾ ಮತ್ತು ಯುವಜನ ಇಲಾಖೆ ನಡೆಸುವ ಯುವಜನೋತ್ಸವದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಸ್ಪರ್ಧೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದನ್ನು ನೋಡಿದರೆ ಕೇಂದ್ರ ಸರಕಾರ ದ್ವಿಭಾಷಾ ನೀತಿ ಹೇರುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳು ಸುಮ್ಮನೇ ಬರಲಿಲ್ಲ .ಪ್ರಾದೇಶಿಕ ಭಾಷೆಗಳ ಮಹತ್ವ ಕೇಂದ್ರಕ್ಕೆ ತಿಳಿಯಬೇಕು ಎಂದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾAತ್, ತ್ಯಾಗರಾಜ್ ಇದ್ದರು.
ಎಡಬಿಡಂಗಿತನ ನಂಬಲ್ಲ
ಜೆಡಿಎಸ್ ಪಕ್ಷ ಎಡಬಿಡಂಗಿತನ ತೋರಿದರೆ ಜನ ನಮ್ಮನ್ನು ನಂಬುವಿದಿಲ್ಲ ಎಂದು ವೈಎಸ್‌ವಿ ದತ್ತಾ ಹೇಳಿದರು.
ಬಿಜೆಪಿ ಜತೆ ವಿಲೀನ ಅಥವಾ ಬೆಂಬಲಕ್ಕೆ ನನ್ನ ಸ್ಪಷ್ಟ ವಿರೋಧವಿದೆ. ಒಂದು ಕಡೆ ರೈತರ ಪ್ರತಿಭಟನೆ ಬೆಂಬಲಿಸುವುದು ಮತ್ತೊಂದು ಕಡೆ ಕೇಂದ್ರದ ಕೃಷಿವಿರೋಧಿ ಕಾಯ್ದೆ ಬೆಂಬಲಿಸುವ ನಮ್ಮ ಪಕ್ಷದ ನಿರ್ಧಾರಕ್ಕೆ ಜನ ಒಪ್ಪುವುದಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಏನೂ ಹೇಳಿಲ್ಲ. ಅವರ ಅನುಯಾಯಿಗಳಾದ ನಾವು ಅವರ ನಿಲುವಿನ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೆವೆ. ಜೆಡಿಎಸ್ ಹುಟ್ಟಿದ್ದೇ ಬಿಜೆಪಿಯ ವಿರುದ್ಧದ ಸೈದ್ಧಾಂತಿಕೆಯ ಮೇಲೆ ನಂಬಿಕೆ ಇಟ್ಟುಕೊಂಡು. ಆದರೆ ಈಗ ಬಿಜೆಪಿ ಜತೆ ನಮ್ಮ ವರಿಷ್ಠರು ಹೋಗುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ದತ್ತಾ ವಿಶ್ವಾಸ ವ್ಯಕ್ತಪಡಿಸಿದರು.