Malenadu Mitra
ರಾಜ್ಯ

ಸಿಗಂದೂರು ದೇವಿ ಶಾಪದಿಂದ ಯಡಿಯೂರಪ್ಪ ಕುರ್ಚಿಗೆ ಕಂಟಕ

ಸಿಗಂದೂರು ಚೌಡೇಶ್ವರಿ ಶಾಪದಿಂದಾಗಿ ಯಡಿಯೂರಪ್ಪ ಅವರಿಗೆ ಡಿನೋಟಿಫಿಕೇಷನ್ ಕಂಟಕ ಅಂಟಿಕೊಂಡಿದ್ದು, ಜನವರಿ ೧೫ ರ ನಂತರ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರದ್ದೋ ಮಾತು ಕೇಳಿಕೊಂಡು ಸಿಗಂದೂರು ದೇವಾಲಯದ ವಿರುದ್ದ ಇಲ್ಲದ ತಗಾದೆ ತೆಗೆದು ಸಲಹಾ ಸಮಿತಿ ರಚನೆ ಮಾಡಿದರು. ಈಗ ಮತ್ತೆ ಅವರಿಗೆ ಡಿನೋಟಿಫಿಕೇಷನ್ ಕಂಟಕ ಅಂಟಿದೆ. ಆರೋಪ ಇದ್ದವರನ್ನು ಅಧಿಕಾರದಲ್ಲಿ ಇರಲು ಬಿಡುವುದಿಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರೆ ಮೋದಿ ಅವರು ಈಗ ಯಡಿಯೂರಪ್ಪ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬೇಳೂರು ಹೇಳಿದರು.
ಬಿಜೆಪಿಯ ಉತ್ತರ ಕರ್ನಾಟಕ ಮುಖಂಡರು ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಪಕ್ಷದ ಕೆಲ ಶಾಸಕರು ಸಂಕ್ರಾಂತಿಗೆ ಸಿಹಿಸುದ್ದಿ ಎಂದು ಹೇಳುತ್ತಿದ್ದಾರೆ. ಅವರ ಪಕ್ಷದವರಿಗೆ ಯಡಿಯೂರಪ್ಪ ಅವರು ಕುರ್ಚಿ ಕಳೆದುಕೊಳ್ಳುವುದು ಸಿಹಿ ಸುದ್ದಿ ಎನ್ನುತ್ತಿರುವುದು ಇವರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಬೇಳೂರು ಆರೋಪಿಸಿದರು.
ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ಹಣ
ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೆ ೧೫ ರಿಂದ ೨೫ ಸಾವಿರ ಹಣ ನೀಡಿದ್ದಾರೆ. ಶಿಕಾರಿಪುರದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಸಾಗರ ಕ್ಷೇತ್ರದಲ್ಲಿಯೂ ಇದೇ ರೀತಿ ಮಾಡಲಾಗಿದೆ. ಭ್ರಸ್ಟಾಚಾರದ ಹಣವನು ಚುನಾವಣೆಗೆ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರಿಗೆ ನಂಬಿಕೆ ಇಲ್ಲ. ಆ ಕಾರಣದಿಂದಾಗಿಯೇ ಹಣ ಸುರಿಯುತ್ತಿದ್ದಾರೆ. ಭ್ರಷ್ಟಾಚಾಋ ಹಣ ಸುರಿಯೋದು ಗೆಲ್ಲೋದು ಇದೇ ಇವರ ಪರಿಪಾಠ. ರಾಜ್ಯದಲ್ಲಿ ಯಾರಿಗೂ ನಿವೇಶನ, ಮನೆ ಕೊಟ್ಟಿಲ್ಲ. ರೈತರಿಗೆ ಒಂದೂ ಹಕ್ಕು ಪತ್ರ ಕೊಟ್ಟಿಲ್ಲ. ಇವರ ಉದ್ಧಾರಕ್ಕೆ ಸರಕಾರ ಇಟ್ಟುಕೊಂಡಿದ್ದಾರೆ ಎಂ ಗಂಭೀರ ಆರೋಪನ್ನು ಗೋಪಾಲಕೃಷ್ಣ ಮಾಡಿದರು.

ಹೊಸವರ್ಷ ಆಚರಣೆ ಇರಲಿ
ಸರಕಾರ ಈ ಬಾರಿ ನೂತನ ವರ್ಷಆಚರಣೆಗೆ ನಿರ್ಬಂಧ ಹೇರವ ಮೂಲಕ ಯುವಕರ ವಿರೋಧಿ ಎಂಬುದನ್ನು ಸಾಬೀತು ಮಾಡಿದೆ. ಉದ್ಯೋಗ ಇಲ್ಲದೆ ನಿರುದ್ಯೋಗಿಗಳನ್ನು ಮಾಡಿರುವ ಸರಕಾರ ಈಗ ಅವರು ಸಂಭ್ರಮಕ್ಕೂ ಕಡಿವಾಣ ಹಾಕಿದೆ.ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ೨೦ ಸಾವಿರಗಟ್ಟಲೆ ಜನ ಸೇರಿಸಿಕೊಂಡು ಯಾವುದೇ ಸಾಮಾಜಿಕ ಅಂತರ ಇಲ್ಲದೆ ಚುನಾವಣೆ ಮಾಡಿದ್ದಾರೆ.ಆದರೆ ಈಗ ನೀವು ಹೊಸ ವರ್ಷ ಆಚರಿಸಬೇಡಿ ಎಂದು ಹೇಳುತ್ತಾರೆ. ಇದಕ್ಕೆ ನನ್ನ ಸ್ಪಷ್ಟ ವಿರೋಧವಿದೆ. ಹುಡುಗರ ಸಂಭ್ರಮಕ್ಕೆ ಕಡಿವಾಣ ಹಾಕಬಾರದು. ವಯಸ್ಸಾದವರು ಅಧಿಕಾರಲ್ಲಿ ಇದ್ದರೆ ಇದೇ ಆಗೋದು. ಆರ್.ಎಸ್.ಎಸ್. ಹುನ್ನಾರದಿಂದ ಈ ನಿರ್ಧಾರವನ್ನು ಸರಕಾರ ಮಾಡಿದೆ. ಲಂಡನ್‌ನಿAದ ಜನರು ಬಂದಾಗ ಹಿಡೀಲಿಲ್ಲ. ಸಾವಿರಾರು ಜನ ಬಂದಿದ್ದರೂ ೧೫೦ ಜನ ಎಂದು ಹೇಳುತ್ತಿದೆ. ಕೊರೊನ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ ಈಗ ನೂತನ ವರ್ಷಾಚರಣೆ ಬೇಡ ಅಂತಿದೆ. ಕರ್ಫ್ಯೂ ವಿಚಾರದಲ್ಲಿಯೂ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದೆ ನಗೆಪಾಟಲಿಗೀಡಾಗಿದೆ ಎಂದು ಬೇಳೂರು ದೂರಿದರು. ಮುಖಂಡರಾದ ಹುಲ್ತಿಕೊಪ್ಪ ಶ್ರೀಧರ್ ಇದ್ದರು. ಂ

Ad Widget

Related posts

ತೆರಿಗೆ ಹೆಚ್ಚಳ ವಿರೋಧಿಸಿ ಕರಪತ್ರ

Malenadu Mirror Desk

ಅರುಣ್ ಸಾವಿಗೆ ಯಾವ ಕಾರಣವಿತ್ತು ?

Malenadu Mirror Desk

ಶಿವಮೊಗ್ಗದಲ್ಲಿ ಬಿಗಿ ಲಾಕ್‍ಡೌನ್ ಮುಂದುವರಿಕೆ: ಕೆ.ಎಸ್.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.