ಶಿವಮೊಗ್ಗ ಸಮೀಪದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್ ಅನ್ನು ದೇಶದಲ್ಲಿಯೇ ಮಾದರಿಯಾಗಿ ನಿರ್ಮಿಸುವ ಪ್ರಸ್ತಾವನೆಗೆ ಬೆಂಗಳೂರು ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಶಿವಮೊಗ್ಗದ ಹಲವು ಪರಿಸರ ಸಂಘಟನೆಗಳ ಸಮ್ಮುಖದಲ್ಲಿ ಅರಣ್ಯ ಮತ್ತು ಪರಿಸರ ಜೀವಿಶಾಸ್ತç ಸಚಿವ ಆನಂದ್ ಸಿಂಗ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುದ್ದಿನಕೊಪ್ಪದಲಿ ಅರಣ್ಯ ಇಲಾಖೆ ಹಸಿರು ಪಾರ್ಕ್ ಇದ್ದು, ಅದನ್ನು ದೇಶದಲ್ಲಿಯೇ ಮಾದರಿಯಾಗಿ ಮಾಡುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯನೀತಿಗಳು ಬಗ್ಗೆ ಚರ್ಚಿಸಲಾಯಿತು. ಈ ಟ್ರೀ ವನ ಅಭಿವೃದ್ಧಿಯಿಂದ ಮಲೆನಾಡಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ. ಇಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ನಗರ ಬೆಳೆದಂತೆ ಇಲ್ಲಿನ ತಾಪಮಾನವೂ ಹೆಚ್ಚುತ್ತಿದೆ. ಹಸಿರು ಪಾರ್ಕ್ ನಿರ್ಮಾಣದಿಂದ ಪರಿಸರ ಸಮತೋಲನ ಆಗುತ್ತದೆ. ಇಲ್ಲಿ ಪಕ್ಷಿ ಹಾಗೂ ಚಿಟ್ಟೆಗಳು, ವಿವಿಧ ರೀತಿಯ ಸಸ್ಯಗಳ ಮೇಲೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಇದಲ್ಲದೆ ಉತ್ತಮ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಪರಿಸರ ಸಂಘಟನೆಗಳು ಉಭಯ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ಸಂದೀಪ್ ದವೆ, ಕಾರ್ಯರ್ಶಿ ಸುಮಿತ್ರ ಬಿಜ್ಜೂರ್,ಪ್ರಕಾಶ್ ಜೊಡಿಯಾಕ್, ಹಿರಿಯ ಪರಿಸರವಾದಿ ಶಿವಮೊಗ್ಗನಂದನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿವಮೊಗ್ಗದ ಅನೇಕ ಪರಿಸರ ಸಂಘಟನೆಗಳು ಸಂಯೋಜನೆಗೊಂಡು ಸರಕಾರಕ್ಕೆ ಈ ಮನವಿ ಸಲ್ಲಿಸಿವೆ.
previous post
next post