ರಾಜ್ಯದಲ್ಲಿ ಬ್ರಿಟನ್ ಭೂತ ಪತ್ತೆಯಾಗಿದೆ. ಬೆಂಗಳೂರಿನ ಮೂವರಲ್ಲಿ ಕೊರೊನದ ರೂಪಾಂತರ ಪ್ರಬೇಧದ ವೈರಸ್ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಆರು ಪ್ರಕರಣಗಳಲ್ಲಿ ಈ ವೈರಸ್ ಇರುವುದಾಗಿ ವರದಿಯಾಗಿದೆ.
ಕೊರೊನ ಆಘಾತ ತಡೆದುಕೊಳ್ಳುವ ಮುನ್ನವೇ ಮತ್ತೊಂದು ಭಯಂಕರ ಆಘಾತ ರಾಜ್ಯಕ್ಕೆ ಎದುರಾಗಿದೆ. 2020 ಅತ್ಯಂತ ಕೆಟ್ಟ ಸ್ಥಿತಿಯನ್ನು ತಂದಿತ್ತು. ಮುಂಬರುವ ವರ್ಷ ಹರ್ಷ ತರಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ರಾಜ್ಯಕ್ಕೆ ಬ್ರಿಟನ್ ವೈರಸ್ ಆಮದಾಗಿದೆ. ಬ್ರಿಟನ್‍ನಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿ ಅಲ್ಲಿನ ಸರಕಾರ ಹಾಗೂ ನೆರೆದೇಶಗಳು ಎಚ್ಚರಿಕೆ ವಹಿಸಿ ತಮ್ಮ ಎಲ್ಲ ಬಾಹ್ಯ ಸಂಪರ್ಕವನ್ನೂ ಕಡಿತಗೊಳಿಸಿವೆ. ಆದರೆ ಬ್ರಿಟನ್ ವೈರಸ್ ಪತ್ತೆಯಾದ ಬಳಿಕ ಅಲ್ಲಿಂದ ಬಂದಪ್ರಯಾಣಿಕರ ಮೇಲೆ ಸರಿಯಾದ ನಿಗಾ ಇಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಗೊತ್ತಿರುವ ಪ್ರಕರಣಗಳ ಮೇಲೆ ನಿಗಾ ಸರಕಾರ ನಿಗಾ ಇಟ್ಟಿದೆ. ಆದರೆ ಸರಕಾರದ ಕಣ್ಣಳತೆಗೆ ಸಿಗದ ಅದೆಷ್ಟೊ ಪ್ರಯಾಣಿಕರು ತಮ್ಮವರನ್ನು ಕೂಡಿಕೊಂಡಿದ್ದಾರೆನ್ನಲಾಗಿದೆ.
ಸರಕಾರ ಶಾಲೆ ಕಾಲೇಜಿ ಆರಂಭಕ್ಕೆ ಸಿದ್ಧತೆ ಮಾಡುತ್ತಿರುವ ಹಂತದಲ್ಲಿಯೇ ಬೆಂಗಳೂರಿನಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿರುವುದು ಆರೋಗ್ಯ ಇಲಾಖೆಗೆ ದೊಡ್ಡ ಸವಾಲನ್ನು ತಂದೊಡ್ಡಿದೆ.
previous post
next post