Malenadu Mitra
ಗ್ರಾಮಾಯಣ ರಾಜಕೀಯ ರಾಜ್ಯ

ಶಾಸಕ ಹಾಲಪ್ಪ ಮತ ಕೇಂದ್ರದಲ್ಲಿ ಬಿಜೆಪಿಗೆ ಸೋಲು

ಗ್ರಾಮ ಸಮರದ ಫಲಿತಾಂಶ ಪ್ರಕಟವಾಗಿದ್ದು, ಗೆದ್ದವರಲ್ಲಿ ಸಂಭ್ರಮ ಮನೆಮಾಡಿದ್ದರೆ, ಸೋತವರು ನಂಬಿದವರೇ , ಕೈ ಕೊಟ್ರು ಎಂದು ಪ್ಯಾಚು ಮೋರೆ ಹಾಕಿಕೊಂಡು ಸೋಲಿನ ಅವಲೋಕನಕ್ಕೆ ಮುಂದಾಗಿದ್ದಾರೆ.
ಮೂರೂ ಪಕ್ಷಗಳಿಂದ ಪ್ರಾತಿನಿಧಿಕವಾಗಿ ಅಭ್ಯರ್ಥಿಗಳನ್ನು ಹಾಕಲಾಗಿತ್ತು ಆದರೆ ಕೆಲವು ಕಡೆ ಅವರು ಫಲಿತಾಂಶ ಉಲ್ಟಾ ಆಗಿದೆ. ಪಕ್ಷದ ನಾಯಕರಿಂದ ಗೆಲುವಿನ ಟಾರ್ಗೆಟ್ ಪಡೆದಿದ್ದ ಮರಿ ನಾಯಕರು ಗೆದ್ದವರನ್ನೇ ನಮ್ಮವರು ಎಂದು ಅಪ್ಪಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಆಡಳಿತ ಪಕ್ಷ ಬಿಜೆಪಿ ಬೇರುಮಟ್ಟದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು.
ಈ ನಡುವೆ ಸಾಗರ ಕ್ಷೇತ್ರ ಶಾಸಕ ಹಾಲಪ್ಪ ಅವರ ಮತಕ್ಷೇತ್ರವಿರುವ ಹರತಾಳಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಸೋಲಾಗಿದ್ದು, ಅಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಪಂಚಾಯಿತಿಯಲ್ಲಿ ಕಾಂಗ್ರೆಸ್‍ನ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ. ಸಾಗರ ಕ್ಷೇತ್ರ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಇಡೀ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ.
ತುಮರಿ ಪಂಚಾಯಿತಿ ಕಾಂಗ್ರೆಸ್‍ಗೆ :
ಬಹುನಿರೀಕ್ಷಿತ ತುಮರಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಸಿಗಂದೂರು ದೇವಸ್ಥಾನದ ವಿವಾದದ ಕಾರಣಕ್ಕಾಗಿ ಈ ಬಾರಿಯ ಸ್ಥಳೀಯ ಚುನಾವಣೆ ರಾಜಕೀಯ ಮಹತ್ವ ಪಡೆದುಕೊಂಡಿತ್ತು. ಈ ನಡುವೆ ಸಿಗಂದೂರು ದೇಗುಲದ ಒತ್ತುವರಿ ತೆರವು ಮಾಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವರ ಪೈಕಿ ಗೋವರ್ದನ್ ಹಾಗೂ ಶಿವರಾಜ್ ಚುನಾವಣೆಗೆ ಸ್ಪರ್ಧಿಸಿದ್ದು,ಇಬ್ಬರೂ ಸೋಲು ಕಂಡಿದ್ದಾರೆ ಎಂದು ಪ್ರಾಥಮಿಕ ಹಂತದ ವರದಿಗಳು ತಿಳಿಸಿ

ಗೆದ್ದವರೆಲ್ಲ ನಮ್ಮವರೇ:
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಿಹ್ನೆ ಇಲ್ಲದ ಕಾರಣ ಪಕ್ಷದ ಬೆಂಬಲಿಗರು ಗೆಲ್ಲದೇ ಇದ್ದರೂ, ಗೆದ್ದವರೇ ನಮ್ಮವರು ಎಂಬ ಪ್ರಕ್ರಿಯೆ ಜೋರಾಗಿಯೇ ಆರಂಭವಾಗಿದೆ. ಚುನಾವಣೆಗೆ ಹಣದ ಹೊಳೆ ಹರಿದಿದೆ. ಹೀಗಿರುವಾಗ ಪಕ್ಷೇತರವಾಗಿ ಗೆದ್ದ ಅಭ್ಯರ್ಥಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ನಾಯಕರುಗಳ ಆದೇಶದಂತೆ ಸ್ಥಳೀಯ ಮುಖಂಡರು ಪಕ್ಷೇತರರನ್ನು ಮನವೊಲಿಸಿ ಪಕ್ಷದ ಕಚೇರಿಯಲ್ಲಿ ನಿಲ್ಲಿಸುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಹೊಸನಗರ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಗೆದ್ದವರು.

Ad Widget

Related posts

ಬಿಎಸ್‍ವೈಗೆ ಪೂರ್ಣ ಅಧಿಕಾರ: ವೀರಶೈವ ಸಮಾಜದವರ ಆಗ್ರಹ

Malenadu Mirror Desk

ಕೆಲವರಿಗೆ ಮದುವೆ ಗಂಡು ಆಗುವಾಸೆ

Malenadu Mirror Desk

ಮಾಜಿ ಸಿಎಂ ಬಂಗಾರಪ್ಪ ಓದಿದ ಶಾಲೆಗೆ ಕೆಪಿಎಸ್ ಭಾಗ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.